ಸೇಂಟ್ ಜಾನ್ಸ್ ವಿದ್ಯಾ ಸಂಸ್ಥೆಯಲ್ಲಿ “ವಿಶ್ವ ಪರಿಸರ ದಿನಾಚರಣೆ”

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೯; ನಗರದ  ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸೇಂಟ್‌ಜಾನ್ಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ “ಪರಿಸರ ಜಾಗೃತಿ ಜಾಥ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ದಿನದ ಅಂಗವಾಗಿ ವಿದ್ಯಾರ್ಥಿಗಳು ಕಾಡು ಬೆಳಸಿ, ನಾಡು ಉಳಿಸಿ, ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಿ, ವನ್ಯ ಸಂಕುಲವನ್ನು ಸಂರಕ್ಷಿಸಿ ಎಂಬ ಘೋಷಣೆಗಳನ್ನು ಕೂಗುತ್ತಾ, ಪರಿಸರದ ಅಳಿವು-ಉಳಿವಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.ನಿಟ್ಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದ ಬಳಿ ವಿದ್ಯಾರ್ಥಿಗಳು ಮಾನವನಿಂದ ಪರಿಸರಕ್ಕಾಗುತ್ತಿರುವ ತೊಂದರೆ ಹಾಗೂ ತಡೆಗಟ್ಟುವ ಕ್ರಮಗಳನ್ನು ಕುರಿತು ಪರಿಸರ ಗೀತೆಯನ್ನು ಹಾಡುತ್ತಾ, ಬೀದಿ ನಾಟಕದ ಮೂಲಕ ಪರಿಸರವನ್ನು ಸಂರಕ್ಷಿಸಲು ನಾವೆಲ್ಲರೂ ಕೈ ಜೋಡಿಸೋಣ ಎಂಬ ಸಂದೇಶವನ್ನು ಸಾರಿದರು. ಹಾಗೂ ಒಂದರಿAದ ಐದನೇ ತರಗತಿ ಮಕ್ಕಳು ಹದಡಿ ರಸ್ತೆಯ ವಿದ್ಯಾನಗರದ ಬಳಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿಲು ಜಾಥವನ್ನು ಹಮ್ಮಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಹೆಚ್.ಅನಿಲ್‌ಕುಮಾರ್‌ರವರು, ಕಾರ್ಯದರ್ಶಿಗಳಾದ  ಉಮಾಪತಯ್ಯರವರು ಹಾಗೂ ಖಜಾಂಚಿಗಳಾದ  ಪ್ರವೀಣ್ ಹುಲ್ಲುಮನೆ ಉಪಸ್ಥಿತರಿದ್ದರು.ಈ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ  ಸಯ್ಯದ್ ಆರಿಫ್ ಆರ್. ರವರು ಮತ್ತು  ಪ್ರೀತಾ.ಟಿ.ರೈ , ಹಾಗೂ ಉಪಪ್ರಾಂಶುಪಾಲರಾದ  ನೇತ್ರಾವತಿ ಎಸ್.ಎಂ  ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.