ಮೋದಿ ಮೂರನೇ ಬಾರಿ ಪ್ರಧಾನಿ: ಹೊಸಪೇಟೆಯಲ್ಲಿ ಕಾರ್ಯಕರ್ತರ ಸಂಭ್ರಮ ಸಿಹಿ ಹಂಚಿಕೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ9 ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗುತ್ತಿರುವ ಸಂದರ್ಭದಲ್ಲಿ  ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಹೊಸಪೇಟೆಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು ದೇಶವನ್ನು ಎರಡು ಅವಧಿಗೆ ಸಮರ್ಥವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ದೇಶದ ಮತದಾರರು ಮೂರನೇ ಅವಧಿಗೂ ಎನ್‍ಡಿಎಗೆ ಬಹುಮತ ನೀಡಿದ್ದಾರೆ ಈ ಭಾರಿ ದೇಶದ ಅಭಿವೃದ್ಧಿ ಸೇರಿದಂತೆ ಆರ್ಥಿಕ  ಸಧೃಢತೆಯನ್ನು ಕಾಪಾಡುತ್ತಾ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕನಿಗೆ ದೇಶದಲ್ಲಿ ಅಧಿಕಾರ ಸಿಕ್ಕಿದೆ ಅವರಿಗೆ ಶಕ್ತಿತುಂಬುವಂತೆ ಕೋರಿದರು.
ಮಾಜಿ ಸಚಿವ ಆನಂದಸಿಂಗ್ ಪುತ್ರ ಸಿದ್ಧಾರ್ಥಸಿಂಗ್, ಮಂಡಲ ಅಧ್ಯಕ್ಷ, ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.
ನಂತರ ಪಾಂಡುರಂಗ ಕಾಲೋನಿ ಸೇರಿದಂತೆ ವಿವಿಧಡೆಗಳಲ್ಲಿ ದೇವರ ಪ್ರಸಾದಮಾಡಿಸಿದ್ದ ಲಾಡುಗಳನ್ನು ಹಂಚಿದರು.