16 ರಂದು ಬಸವ ಪುರಸ್ಕಾರ,ಬಸವ ಸೇವಾ ರತ್ನ ಪ್ರಶಸ್ತಿ ಪ್ರದಾನ
ಕಲಬುರಗಿ,ಜೂ 9: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಕೊಡಮಾಡುವ ರಾಜ್ಯ ಮಟ್ಟದ ಬಸವ ಪುರಸ್ಕಾರ ಹಾಗೂ ಬಸವ ಸೇವಾ ರತ್ನ ಪ್ರಶಸ್ತಿಯನ್ನು ಜೂನ್ 16 ರಂದು ಪೂಜ್ಯ ಲಿಂ.ಬಸವರಾಜಪ್ಪ ಅಪ್ಪ ಸಭಾ ಭವನದಲ್ಲಿ ನಡೆಯಲಿರುವ ಕಲಬುರಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಹಾಗೂ ಸಮ್ಮೇಳನದ ಸಂಚಾಲಕ ಪೆÇ್ರ ಯಶವಂತರಾಯ ಅಷ್ಠಗಿ ತಿಳಿಸಿದ್ದಾರೆ.
ಡಾ.ಅನ್ನಪೂರ್ಣಾ ಹಿರೇಮಠ,ಡಾ. ಅಶೋಕ ನರೋಡೆ,ಡಾ. ಕೆ. ಗಿರಿಮಲ್ಲ,ಡಾ.ವಿಜಯಶ್ರೀ ಸಬರದ, ಮಹಿಪಾಲರೆಡ್ಡಿ ಮುನ್ನೂರ್,ಮಲ್ಲಿಕಾರ್ಜುನ ಯಾಳವಾರ, ಮುರ್ತುಜಾಬೇಗಂ ಕೊಡಗಲಿ,ನಿರ್ಮಲಾ ಸುರತ್ಕಲ್, ನೂರಅಹ್ಮದ ನಾಗನೂರ,ಎಸ್.ಬಿ. ಕುಚಬಾಳ, ಸಂತೋಷಕುಮಾರ ಮೆಹೆಂದಳೆ,ಶರಣಗೌಡ ಬಿ. ಪಾಟೀಲ ತಿಳಗೂಳ
,ಸಿಂಧುಚಂದ್ರ ಹೆಗಡೆ,ವೀಣಾ ರಾವ್ ಅವರು ಬಸವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈರಣ್ಣ ಗೊಳೆ,ಡಾ.ಇಂದುಮತಿ ಪಾಟೀಲ, ಜಗದೀಶ ಧರ್ಮಪ್ರಕಾಶ್ ಪಾಟೀಲ,ಮಂಜುಳಾ ಸೋಮನಾಳ ಬಾಗಲಕೋಟ,ಅಂಬಾರಾವ ಡಿಗ್ಗಿಕರ,ವಿಜಯಕುಮಾರ ಗಡವಂತಿ, ಸೋಮಶೇಖರ್ ಮಾಲಿ ಪಾಟೀಲ ತೇಗಲತಿಪ್ಪಿ, ವೈಜನಾಥ ಶ್ರೀಶೈಲ ತಡಕಲ್ ಖಜೂರಿ,ವಿನೋದ ಭದ್ರೆ,ಶಾಂತಲಿಂಗ ಪಾಟೀಲ ಕೋಳಕೂರ.
ಬಸವ ಸೇವಾ ರತ್ನ ಪ್ರಶಸ್ತಿ ಪಡೆದಿದ್ದಾರೆ ಎಂದು ಶರಣಗೌಡ ಪಾಟೀಲ್ ಪಾಳಾ ಹಾಗೂ ಪೆÇ್ರ ಯಶವಂತರಾಯ ಅಷ್ಠಗಿ ಹೇಳಿದ್ದಾರೆ.