ಗುಳಬಾಳದಲ್ಲಿ ಯುವಕನ ಕೊಲೆ
ವಿಜಯಪುರ,ಜೂ.9:ದುಷ್ಕರ್ಮಿಗಳು ಯುವಕನೊಬ್ಬನನ್ನು ಕೊಲೆ ಮಾಡಿ ಶವವನ್ನು ಜಮೀನಿನಲ್ಲಿ ಎಸೆದು ಹೋದ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗುಳಬಾಳ ಗ್ರಾಮದಲ್ಲಿ ನಡೆದಿದೆ.
ಮಹಾಂತೇಶ ಬಿರಾದಾರ (25) ಕೊಲೆಯಾದ ಯುವಕ.
ಯುವಕ ಮಹಾಂತೇಶನ ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ.
ಅಪರಿಚಿತರಿಂದ ಮಹಾಂತೇಶನ ಕೊಲೆ ನಡೆದಿದೆ ಎಂದು ಮೃತನ ಸಹೋದರ ಮಂಜುನಾಥ ಪೆÇಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಸವನ ಬಾಗೇವಾಡಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಗಾರರನ್ನು ಪತ್ತೆಗೆ ಮಾಡಲು ಪೆÇಲೀಸರು ಬಲೆ ಬೀಸಿದ್ದಾರೆ.
ಬಸವನ ಬಾಗೇವಾಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.