ಪರಿಸರ ನಾಶ ಜೀವ ಸಂಕುಲವಿನಾಶ: ಡಿಎಸ್ಪಿ ಬಸವರಾಜ ಯಲಿಗಾರ
ವಿಜಯಪುರ,ಜೂ.9::ಜನಸಂಖ್ಯೆ ಹೆಚ್ಚಳ, ನಗರೀಕರಣ, ಕಾರ್ಖಾನೆಗಳ ಬೆಳವಣಿಗೆ ವಾಹನಗಳ ಭರಾಟೆ, ಮಾನವನ ದುರಾಸೆಯಿಂದ ಕಾಡು-ಮೇಡು ನಾಶವಾಗಿ ಬಿಸಿಲಿನ ತಾಪ ಹೆಚ್ಚಿ, ಹಿಮಕರಗಿ, ಋತುಮಾನಗಳು ಬದಲಾವಣೆ ಆಗುತ್ತಿರುವದು ದುರದೃಷ್ಟಕರ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪರಿಸರ ನಾಶವಾದರೆ ಇಡೀ ಜೀವಸಂಕುಲವೇ ವಿನಾಶವಾದಂತೆ ಎಂದು ವಿಜಯಪುರ ಡಿಎಸ್ಪಿ ಬಸವರಾಜ ಯಲಿಗಾರ ಎಚ್ಚರಿಸಿದರು.
ಅಫಜಲಪುರ ಟಕ್ಕೆ ಕಿರಿಯ ಬಾಲಕರ ಬಾಲ ಮಂದಿರದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೆಪ ಮಾತ್ರಕ್ಕೆ ಪರಿಸರ ದಿನಾಚರಣೆ ಆಚರಿಸದೆ ಪ್ಲಾಸ್ಟಿಕ್ ಬಳಕೆ ನಿμÉೀಧ, ನಿತ್ಯ ಸಸಿ ನೆಡುವ ಕಾರ್ಯ ಸಂಕಲ್ಪ ಮಾಡಿ ಜೀವನದ ದಿನಚರಿಯಾಗಿಸಿಕೊಳ್ಳಬೇಕು. ಹರಪ್ಪ, ಮೆಹೆಂಜೋದಾರೋ ಕಾಲದಿಂದಲೂ ಮಾನವ ಜನಾಂಗ ನದಿ ತೀರದಲ್ಲಿ, ಕಾಡಿನ ನಡುವೆ ಬೆಳೆದು ಬಂದಿದೆ. ಕಾಡು ಇದ್ದರೆ ನಾಡು. ಶುದ್ಧವಾದ ಗಾಳಿ, ನೀರು, ಪರಿಸರ, ವಿವಿಧ ಪ್ರಾಣಿ ಪಕ್ಷಿ, ಜೀವ ಸಂಕುಲ ಮುಂದಿನ ಜನಾಂಗಕ್ಕೆ ಉಳಿಸಿ ಕೊಡುವ ಪಜ್ಞಾವಂತಿಕೆ ಮೆರೆಯಬೇಕಾದರೆ ಇಂದೇ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿ ಕಾರ್ಯೋನ್ಮುಖರಾಗೋಣ ಎಂದು ಕರೆ ನೀಡಿದರು.
ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರು ಮಾತನಾಡಿ, ಪರಿಸರ ಸಂರಕ್ಷಣೆಯ ಕುರಿತು ಸರಕಾರ ಹಲವಾರು ರೀತಿ ಸಕಾರಾತ್ಮಕ ಯೋಜನೆಗಳನ್ನು ಜಾರಿಗೆ ತಂದಿದ್ದು.’ಮನೆಗೊಂದು ಮರ ಊರಿಗೊಂದು ವನ’ ಎಂಬ ಘೋಷವಾಕ್ಯದೊಂದಿಗೆ ಜನ ಜಾಗೃತಿ ಮೂಡಿಸುವದರೊಂದಿಗೆ ಉಚಿತ ಸಸಿ ವಿತರಣೆ, ನರ್ಸರಿ ಪ್ಲಾಂಟೇಶನ್ ಮಾಡಲು ಪೆÇ್ರೀತ್ಸಾಹ, ರೈತರಿಗೆ ಹೊಲಗದ್ದೆ ಬದುಗಳಲ್ಲಿ ವಿವಿಧ ಗಿಡ ಬೆಳೆಸಲು ಸಹಾಯ ಸಹಕಾರ ಅರಣ್ಯ ಇಲಾಖೆಯಿಂದ ನೀಡುತ್ತಿದೆ. ಶಾಲಾ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ. ಸಾರ್ವಜನಿಕರು ಸಂಘ ಸಂಸ್ಥೆಗಳು ಈ ಪವಿತ್ರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ಆಶ್ರಮದ ಪೂಜ್ಯಶ್ರೀ ನರೇಶಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯಲ್ಲಿ ನಮ್ಮ ಋಷಿ ಮುನಿಗಳು ಗಿಡ ಮರಗಳಿಗೂ ಜೀವವಿದೆ ಎಂದು ಸಿದ್ಧಪಡಿಸಿದ್ದಲ್ಲದೆ ಹಲವಾರು ಔಷಧೀಯ ಗುಣ, ಮಾನವನಿಗೆ ಉಪಯುಕ್ತ ಆಹಾರ ತತ್ವ ಒಳಗೊಂಡಿದೆ ಎಂದು ತೋರಿಸಿ ಕೊಟ್ಟಿದ್ದಾರೆ. ಕಾರಣ ಭಾರತೀಯರು ಗಿಡ ಮರಗಳನ್ನು, ರೈತರು ಬೆಳೆಗಳನ್ನು ದೇವರೆಂದು ನಂಬಿ ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೆ. ನದಿಗಳಿಗೆ ಬಾಗಿನ ಅರ್ಪಣೆ, ಗಿಡ ಮರಗಳ ಪೂಜೆ, ವಿವಿಧ ಹಬ್ಬ ಹರಿದಿನಗಳಲ್ಲಿ ಮಣ್ಣಿನ ಮೂರ್ತಿಗಳ ಪೂಜೆ. ರೈತ ಬೆಳೆದ ಪೈರು, ಹೂ-ಹಣ್ಣುಗಳ ಪೂಜೆ ಇವೆಲ್ಲ ಈ ಭೂಮಿಗೆ ನಮಗೆ ಕಾಪಾಡುವ ಪರಿಸರಕ್ಕೆ ನಾವು ಸಲ್ಲಿಸುವ ಕೃತಜ್ಞತಾ ಭಾವ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶ್ರೀಧರ ಕುಲಕರ್ಣಿ, ಸದಸ್ಯರಾದ ದಾನೇಶ ಅವಟಿ, ಯಲ್ಲಪ್ಪ ಇರಕಲ್, ಪೆÇಲೀಸ್ ನಿರೀಕ್ಷಕ ಪರಮೇಶ್ವರ ಕವಟಗಿ, ಮಲ್ಲಯ್ಯ ಮಠಪತಿ, ಸಂಗಮೇಶ ಪಾಟೀಲ, ಮಹಾಂತೇಶ ಪಾಟೀಲ ಮಾತನಾಡಿದರು.
ಬಾಲ ಮಂದಿರದ ಅಧೀಕ್ಷಕಿ ಜಯಶ್ರೀ ಪವಾರ ಸ್ವಾಗತಿಸಿದರು. ಶೀತಲ್ ಹೂಲಿ ನಿರೂಪಿಸಿದರು. ಮೂಖ್ಯೋಪಾದ್ಯಾಯ ಪಿ.ಬಿ.ತಳಕಟನಾಳ ವಂದಿಸಿದರು.
ವಿಷಯ ಪರಿವೀಕ್ಷಕಿ ಭಾರತಿ ಹಡಪದ, ಎಸ್.ಎಚ್. ಹೊಸಮನಿ, ವಾಣಿಶ್ರೀ ನಿಂಬಾಳ, ಜ್ಯೋತಿ ತೇಲಿ,
ಶಿವಾನಂದ ಅವತಾಡೆ, ಶರಣು ಯರನಾಳ, ನಿವೃತ್ತ ವಿಷಯ ಪರಿವೀಕ್ಷಕÀ ಎ.ಡಿ. ಮಕಾನದಾರ, ಪ್ರಭು ಹಿರೇಮಠ, ಸಂತೋಷ ಮುಳವಾಡ, ಅಮೀನಮ್ಮ ಮಣೂರ, ಬಸಮ್ಮ ಸಜ್ಜನ, ತಾರಾಬಾಯಿ ಬನಸೋಡೆ, ಮೌನೇಶ ಗಂಗನಹಳ್ಳಿ, ಮಾಳಪ್ಪ ಬೆಳಗಾವಿ ಮತ್ತಿತರರು ಇದ್ದರು.