ಶೂನ್ಯಭಾವದ ಸೇವೆ ಭಗವಂತನಿಗೆ ಸಮರ್ಪಣೆ:ಶಾಸಕ ರಾಜುಗೌಡ
ತಾಳಿಕೋಟೆ:ಜೂ.9: ಭಕ್ತರು ತಮ್ಮ ಭಕ್ತಿಯನ್ನು ವಿವಿಧ ರೂಪದಲ್ಲಿ ಅರ್ಪಿಸಿ ಧನ್ಯತೆ ಪಡೆಯುತ್ತಾರೆ. ಅದರಲ್ಲಿ ತುಲಾಭಾರವೂ ಒಂದು. ತುಲಾಭಾರವು ಭಕ್ತಿಯ ದ್ಯೋತಕ ಮತ್ತು ಭಕ್ತಿಯ ಪರಕಾಷ್ಠೆಯಾಗಿದೆ, ಕೆಸರಟ್ಟಿಯ ಶ್ರೀಶಂಕರಲಿಂಗ ಮಠವು ಅಸಂಖ್ಯಾತ ಭಕ್ತಸಮೂಹವನ್ನು ಹೊಂದಿದ ಮಠವಾಗಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಅವರು ಹೇಳಿದರು.
ಸಮಿಪದ ಕೆಸರಟ್ಟಿ ಗ್ರಾಮದ ಶ್ರೀ ಶಂಕರಲಿಂಗ ಪೂಜ್ಯರ 94ನೇ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀಮಠದ ಬಾಲತಪಸ್ವಿ ಶ್ರೀ ಸೋಮಲಿಂಗ ಪೂಜ್ಯರ ಆಶೀರ್ವಾದ ಪಡೆದ ನಾನು ಧನ್ಯನಾಗಿದ್ದೆನೆ. ಇವರು ನಡೆದಾಡುವ ಕಾಯಕಯೋಗಿ ಅಂದರೆ ತಪ್ಪಾಗಲಿಕ್ಕಿಲ್ಲ, ಇವರು ಒಂದಲ್ಲ ಒಂದು ರೀತಿಯಲ್ಲಿ ವೈಶಿಷ್ಟ್ಯ ಪರಂಪರೆಯಿಂದ ದೈವ ಶಕ್ತಿ ಪಡೆದಿದ್ದಾರೆ. ಇವರು ನುಡಿದಂತೆ ನಡೆದ ಘಟನೆಗಳು ನಮ್ಮ ಮುಂದೆ ಅನೇಕ ಪ್ರಸಂಗಗಳು ಘಟಿಸಿವೆ. ಇಲ್ಲಿನ ಶಂಕರಲಿಂಗ ಮಹಾತ್ಮ ಅಭೂತಪೂರ್ವ ನಂಬಿಕೆಗಳಿಸಿದೆ, ಬೇಡಿಕೊಂಡ ವರವನ್ನು ನೀಡಿ ಬರಮಾಡಿಕೊಳ್ಳುವ ಭಕ್ತಿ ಸ್ವರೂಪಿ ಮಠ ಇದಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞವೈಧ್ಯರಾದ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ ದೇವರ ಕಾರ್ಯವೆಂದು ಭಾವಿಸಿ ಮಾಡುವ ಪ್ರತಿಯೊಂದು ಕಾರ್ಯವೂ ಭಗವಂತನಿಗೆ ಸಮರ್ಪಣೆಯಾಗುತ್ತದೆ. ಶೂನ್ಯ ಭಾವದಿಂದ ಮಾಡುವ ಸೇವೆಗೆ ದೇವರು ಸಂಪ್ರೀತನಾಗುತ್ತಾನೆ ಭಗವಂತನ ಸೇವೆಯಲ್ಲಿ ಗ್ರಾಮದ ಪ್ರತಿಯೊಬ್ಬರೂ ಭಾಗವಹಿಸಿದ್ದು ಶ್ರೇಷ್ಠ ವಿಚಾರ, ಇಂತಹ ಕಾರ್ಯಕ್ರಮದ ಜೋತೆ ತಮ್ಮ ಆರೋಗ್ಯದ ಕಡೆ ಬಹಳಷ್ಟು ಗಮನ ಹರಿಸಬೇಕು ಆರೋಗ್ಯವೆ ಭಾಗ್ಯ ಆರೋಗ್ಯ ಒಳ್ಳೆಯದಿದ್ದರೆ, ಏನೆಲ್ಲಾ ಸಾಧಿಸಬಹುದು ಆರೋಗ್ಯದಲ್ಲಿ ಏರುಪೇರು ಇದ್ದರೆ ತಮ್ಮ ಕೋಟಿಗಟ್ಟಲೆ ಸಂಪತ್ತು ಇದ್ದರು ವ್ಯರ್ಥ ಅದಕ್ಕೆ ಇವತ್ತಿನ ಯುಗದಲ್ಲಿ ಆಹಾರ ಪದ್ದತಿ ತುಂಬಾ ಬದಲಾವಣೆ ಕಂಡಿದೆ. ತಮ್ಮ ಆರೋಗ್ಯದ ದೃಷ್ಠಿಯಿಂದ ಒಳ್ಳೆಯ ಆಹಾರ ಪದ್ದತಿ ರೂಡಿಸಿಕೊಳ್ಳಬೇಕೆಂದರು.
ಶ್ರೀ ಶಂಕರಲಿಂಗ ಮಠದ ಬಾಲತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮೀಗಳು ಆಶೀರ್ವಚನ ನೀಡಿ, ತ್ಯಾಗ ಮನೋಭಾವ ಇದ್ದಾಗ ಸಂಪತ್ತು ಕ್ರೋಡೀಕರಣವಾಗುತ್ತದೆ. ಸನಾತನ ಹಿಂದೂ ಧರ್ಮ ಪ್ರತಿಯೊಬ್ಬರನ್ನೂ ಪ್ರೀತಿಸು ಎಂಬ ಸಂದೇಶವನ್ನು ಸಾರುತ್ತಿದೆ ಎಂದರು. ಭಗವಂತನ ಅನುಗ್ರಹದಿಂದ ಗ್ರಾಮದಲ್ಲಿ ಚೈತನ್ಯ ಮೂಡಲು ಸಾಧ್ಯ, ನಿಮ್ಮ ಭಕ್ತಿಸೇವಾ ಮನೋಭಾವ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ ಶ್ರೀಗಳು ಶ್ರೀ ಶಂಕರಲಿಂಗ ಮಹಾತ್ಮರ ಒಟ್ಟು 85 ವರ್ಷ ಬದುಕಿ ಭೂಮಿಮೇಲೆ ಅನೇಕ ಪವಾಡಗಳನ್ನು ಮಾಡಿದ್ದಾರೆ ಇವರು 21 ದಿನಗಳಕಾಲ ವೃಕ್ಷಾಶನದಲ್ಲಿ ನಿಂತು ಆದ್ಯಾತ್ಮ ಚಿಂತನೆ ಮಾಡಿ ಪರಮಾತ್ಮನ ದರ್ಶನ ಪಡೆದ ದೈವ ಮಾನವರು ಆಗಿದ್ದಾರೆ ಅವರ ಆಶಿರ್ವಾದ ಎಲ್ಲ ಜನರ ಮೇಲಿರಲಿ ಎಂದು ಪ್ರಾರ್ಥಿಸುವದಾಗಿ ಹೇಳಿದರು.
ಇದೇ ಸಮಯದಲ್ಲಿ ಮಾದೇವ್ ಮಹಾರಾಜರು, ಶಿಕ್ಷಕ ಗುಂಡು ಚವ್ಹಾಣ, ಡಾ. ಕುಬೇರ ನಾಯ್ಕ, ಪ್ರಥಮ ದರ್ಜೆ ಗುತ್ತಿಗೆದಾರ ಪುಂಡಲೀಕ ಪವಾರ, ಮಹಾದೇವ ಪವಾರ ಮಾತನಾಡಿದರು.
ಇನ್ನೋರ್ವ ಅತಿಥಿ ಹುಲ್ಲೂರ ತಾಂಡಾ ಗ್ರಾ.ಪಂ ಸದಸ್ಯ ಶಿವಾನಂದ ಲಮಾಣಿ ಮಾತನಾಡಿ, ಜಾತ್ರೆಯ ಕಾರ್ಯದಲ್ಲಿ ಭಕ್ತರು ಪ್ರತಿಯೊಬ್ಬರೂ ತನು-ಮನ-ಧನದ ಸಹಕಾರ ನೀಡಿದ್ದು ಮಾದರಿಯಾಗಿದೆ. ಇಲ್ಲಿನ ಸ್ವಾವಲಂಬಿ ಗ್ರಾಮದ ಕಲ್ಪನೆ ಸಾಕಾರಗೊಳ್ಳಲಿ ಎಂದರು.
ಶ್ರೀಶಂಕರಲಿಂಗ ತಪಸ್ವಿ ರಾಜ್ಯ ಪ್ರಶಸ್ತಿ ಪುರಷ್ಕಾರ
ಬೆಳಗಾವಿ ಮೂಲಮ ಖ್ಯಾತ ನಿರ್ಮಾಪಕ ರಾಜಕುಮಾರ ಚಿತ್ರನಟ, ಬಾಗಲಕೋಟ ಖ್ಯಾತ ಗಾಯಕ ಪುಂಡಲೀಕ ಲಮಾಣಿ, ಬ.ಬಾಗೇವಾಡಿ ವಿಮರ್ಷಕ ಗಂಗಾಧರ ಕಲಾವಿದರಿಗೆ ಶ್ರೀ ಶಂಕರಲಿಂಗ ತಪಸ್ವಿ ರಾಜ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮತ್ತು 2024 ಸಾಲಿನ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಭಕ್ತರು ನಾಣ್ಯಗಳಿಂದ ಬಾಲತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮಿಗಳಿಗೆ ತುಲಾಭಾರ ಕಾರ್ಯ ನೆರವೇರಿಸಿದರು. ಮಖಣಾಪುರ ಸಂಜಯ ಚವ್ಹಾಣ, ಆನಂದ ಪವಾರ ಶರಣರ ಬಳಗದಿಂದ ರುದ್ರಾಕ್ಷಿ ಕಿರೀಟ ಧಾರಣೆ ನೀಡಿ ಭಕ್ತಿ ಸಮರ್ಪಿಸಿದರು.
ಈ ಸಮಯದಲ್ಲಿ ಮುಂಬಯಿ ಟ್ಯಾಪ್ಸ ನಿರ್ವಾಹಕ ಅಧಿಕಾರಿ ಕೈಲಾಸ ಪಡತಾರೆ, ಗ್ರಾ.ಪಂ ಅಧ್ಯಕ್ಷ ಹುಸೇನ ಸೋಲಾಪುರ, ಬೆಂಗಳೂರ ಸೂರ್ಯ ಆಸ್ಪತ್ರೆ ವೈದ್ಯ ಡಾ ರಮೇಶ ರಾಠೋಡ, ಕಾಳಗಿ ತಾಂಡಾದ ರಾಜಕೀಯ ಮುಖಂಡ ಗೋಪಾಲ ರಾಠೋಡ, ಜಗದೀಶ್ ನಾಯಕ್, ಸಾಹಿತಿ ಸಂತೋಷ್ ರಾಥೋಡ, ಮೊದಲಾದವರು ಉಪಸ್ಥಿತರಿದ್ದರು.
ರಮೇಶ್ ನಾಯಕ್ ನಿರೂಪಿಸಿದರು. ಶಿಕ್ಷಕ ಟಿ. ಎಸ್ ಲಮಾಣಿ ವಂದಿಸಿದರು.