ಸಿಂಗನಳ್ಳಿ ಸೇವೆ ಅನನ್ಯ:ವಣಿಕ್ಯಾಳ
ಕೆಂಭಾವಿ: ಜೂ.9:ಬ್ಯಾಂಕಿಗೆ ಬರುವ ಪ್ರತಿಯೊಬ್ಬ ಗ್ರಾಹಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಬ್ಯಾಂಕಿನ ಸೇವೆಗಳನ್ನು ತಲುಪಿಸಿದ ಶಾಖಾ ವ್ಯವಸ್ಥಾಪಕ ಶಾಂತಕುಮಾರ ಸಿಂಗನಳ್ಳಿ ಅವರ ಸೇವೆ ಅನನ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಮೂರು ವರ್ಷ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಶಾಂತಕುಮಾರ ಸಿಂಗನಳ್ಳಿ ಅವರ ಸನ್ಮಾನ, ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬ್ಯಾಂಕಿನ ಆಗುಹೋಗುಗಳನ್ನು ತಿಳಿದುಕೊಂಡಿದ್ದ ಶಾಂತಕುಮಾರ ಸಿಂಗನಳ್ಳಿ ಅವರು ಒಬ್ಬ ಅನುಭವಿ ವ್ಯವಸ್ಥಾಪಕರಂತೆ ಕೆಲಸ ಮಾಡಿ ಗ್ರಾಹಕರಿಗೆ ಸ್ಪಂದಿಸಿದ್ದಾರೆ. ಕಾಯಕದಲ್ಲಿ ನಂಬಿಕೆಯಿಟ್ಟು ಬ್ಯಾಂಕಿನ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಶಾಂತಕುಮಾರ ಸಿಂಗನಳ್ಳಿ ಮಾತನಾಡಿ, ಬ್ಯಾಂಕಿನ ಆದೇಶದಂತೆ ತಾವು ಮತ್ತೊಂದು ಕಡೆ ಹೋಗುವುದು ಅನಿವರ್ಯ, ಮೂರು ವರ್ಷ ಜವಾಬ್ದಾರಿಯಿಂದ ಕೆಲಸ ಮಾಡಿದ ತೃಪ್ತಿ ಇದೆ. ನನ್ನ ಅಧಿಕಾರದ ಅವಧಿಯಲ್ಲಿ ಬ್ಯಾಂಕಿನ ಏಳಿಗೆಗೆ ಶ್ರಮಿಸಿದ್ದೇನೆ ಎಂದ ಅವರು, ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಗ್ರಾಮದ ಜನತೆಗೂ ಹಾಗೂ ಬ್ಯಾಂಕಿನ ಸಿಬ್ಬಂದಿಗೆ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಕ್ಷೇತ್ರಾಧಿಕಾರಿ ಪ್ರಭುರಾಯ ಸಗರ, ಖಜಾಂಚಿ ಅಶೋಕ ಕುಮಾರ, ಮುಖಂಡರಾದ ಹಳ್ಳೆಪ್ಪ ಹವಲ್ದಾರ, ಚನ್ನಾರೆಡ್ಡಿ ದೇಸಾಯಿ, ರಾಮಣ್ಣ ದೇಶಪಾಂಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಶರಣರೆಡ್ಡಿ ಕೆಂಚಾಗೋಳ, ಬಸವರಾಜ (ಪುಟ್ಟಣ್ಣ) ಲಕ್ಕುಂಡಿ, ವೀರಘಂಟೆಪ್ಪಗೌಡ ಗೌಡಗೇರಿ, ಬಸವರಾಜ ದೇಸಾಯಿ, ಶರಣಪ್ಪ ದೇಸಾಯಿ, ತುಳಜರಾಮ ಚವ್ಹಾಣ, ಬ್ಯಾಂಕ ಸಹಾಯಕ ಚಾಂದಪಾಶಾ ಇಜೇರಿ, ಬ್ಯಾಂಕಿನ ಸಿಬ್ಬಂದಿಗಳಾದ ಸೈಯ್ಯದ್ ಜಾಕೀರ್, ಶ್ರೀನಿವಾಸ ಕುಲಕರ್ಣಿ, ಮಲ್ಲಣ್ಣ ಮಡಿವಾಳಕರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.