ಎಸ್‍ಎಸ್‍ಕೆಬಿ ಎನ್ನೆಸ್ಸೆಸ್ ವಾರ್ಷಿಕ ಶಿಬಿರ, ಕಾಲೇಜಿನಲ್ಲಿ ಪರಿಸರ ದಿನಾಚರಣೆ
ಬಸವಕಲ್ಯಾಣ:ಜೂ.9: ಮನುಷ್ಯನ ನೆಮ್ಮದಿಯ ಬದುಕಿಗೆ ಅವಶ್ಯಕವಾಗಿರುವ ಉತ್ತಮ ಪರಿಸರ ಕಾಪಾಡಿಕೊಳ್ಳುಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಇಲ್ಲಿಯ ಪುಣ್ಯಕೋಟಿ ಕಾಲೇಜಿನ ಪ್ರಾಚಾರ್ಯ ಪ್ರೊ.ಸೂರ್ಯಕಾಂತ ಶೀಲವಂತ ಹೇಳಿದರು.
ನಗರದ ಎಸ್‍ಎಸ್‍ಕೆ.ಬಸವೇಶ್ವರ ಹಾಗೂ ದೊಡ್ಡಪ್ಪ ಅಪ್ಪ ಬಿಸಿಎ ಕಾಲೇಜು ಮತ್ತು ಬೀದರ ವಿಶ್ವವಿದ್ಯಾಲಯ ಆಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎನ್‍ಎಸ್‍ಎಸ್. ವಾರ್ಷಿಕ ಶಿಬಿರ ಹಾಗೂ ವಿಶ್ವಪರಿಸರ ದಿನಾಚರಣೆ ಕಾರ್ಯಮ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಸಿ ನೆಡುವ ಮೂಲಕ ಅವುಗಳನ್ನು ಸಂರಕ್ಷಿಸಬೇಕು. ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ಎನ್‍ಎಸ್‍ಎಸ್ ವಾರ್ಷಿಕ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ, ಸಿಸ್ತು ಪಾಲನೆ, ಸಂಸ್ಕಾರ ಹಾಗೂ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬವನ್ನು ಒಂದೊಂದು ಸಸಿ ನೆಡುವ ಮೂಲಕ ಆಚರಿಸಿಕೊಳ್ಳಬೇಕು ಎಂದು ಹೇಳಿದರು.
ವಿಶ್ವಜಿತ್ ಗುರಮೂಡೆ ಮಾತನಾಡಿದರು. ಪ್ರೊ.ವಿಠೋಬಾ ಡೊಣ್ಣೆಗೌಡರ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನೇತ್ರಾ ವಿಜಯಕುಮಾರ ನಿರೂಪಿಸಿದರು. ಡಾ.ಶಿವಕುಮಾರ ಪಾಟೀಲ ವಂದಿಸಿದರು. ಅಂಬಿಕಾ ಮತ್ತು ಮೀನಾಕ್ಷಿ ಎನ್‍ಎಸ್‍ಎಸ್ ಮತ್ತು ಪ್ರಾರ್ಥನಾ ಗೀvಯನ್ನು ಹಾಡಿದರು.