ಗಾಳಿ ಬಿರುಗಾಳಿಗೆ ಬೀದಿ ಪಾಲಾದ ಕುಟುಂಬ ಅಂಗಡಿಯ ಆಸರೆಗೆ ನಿಂತ ವ್ಯಕ್ತಿ ಗಂಭೀರ ಪರಿಸ್ಥಿತಿ
ಮಡಿವಾಳಪ್ಪ ಟಿ ಯತ್ನಾಳ
ಯಡ್ರಾಮಿ:ಜೂ.9:ಮಳೇ ಗಾಳಿ ಬಿರುಗಾಳಿಗೆ ತಾಲೂಕಿನ ಕಡಕೋಳ ಗ್ರಾಮದ ಶಾರದಾಬಾಯಿ ಗಂಡ ಗುರಣ್ಣ ಹುಡೆದ್ ಅವರು ಅಂಗಡಿ ಮಾಡಿಕೊಂಡು ಜೀವನ ಸಾಗಿಸುವ ಕುಟುಂಬ ಬೀದಿಗೆ ಬರುವಂತಾದ ಘಟನೆ ನಡೆದಿದೆ.
ಗ್ರಾಮದ ಹೊಸ ಬಡಾವಣೆಯಲ್ಲಿ ಬ್ಯಾಂಕಿನಿಂದ ಸಾಲ
ಪಡೆದುಕೊಂಡು ಕುಟುಂಬಕ್ಕೆ ಆಧಾರವಾಗಿ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ ಮಳೆ ಗಾಳಿಯಿಂದ ಸಂಪೂರ್ಣ ಅಂಡಿಯ ಜೋತೆಗೆ ವ್ಯಕ್ತಿಯು ಹಾರಿಕೊಂಡು ಹೋಗಿದ್ದಾರೆ.
ವ್ಯಕ್ತಿಯೂ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಸಾವೂ ನೋವುಗಳ ಮದ್ಯೆ ಹೋರಾಟ ಮಾಡುತ್ತಿದ್ದಾರೆ.ಸಾಲ ಮಾಡಿ ಅಂಗಡಿ ಮಾಡಿದ ಕುಟುಂಬ ಬೀದಿಗೆ ಬಂದು ನಿಲ್ಲುವಂತ ಪರಸ್ಥಿತಿ ನಿರ್ಮಾಣವಾಗಿದೆ.
ಮಳೆಯ ಆಸರೆಗೆ ನಿಂತ ವ್ಯಕ್ತಿ ದೇವಿಂದ್ರ ತಂದೆ ಮಲ್ಲಪ್ಪ ಅವರ ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಗಾಯಗಳಾಗಿ ಚಿಂತಾಜನಕ ಪರಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲೆಯಾಗಿದ್ದಾರೆ.
ಬಡತನದ ಕುಟುಂಬ ಜೀವನ ಸಾಗಿಸಲು ಅಂಗಡಿ ಮಾಡಿಕೊಂಡ ಕುಟುಂಬದ ಸಂಪೂರ್ಣ ಅಂಗಡಿಯ ವಸ್ತುಗಳು ಗಾಳಿ ಮಳೆಗೆ ಹಾರಿಕೊಂಡು ಹೋದರೆ.
ಒಂದು ಕಡೆಗೆ ವ್ಯಕ್ತಿಯ ಸಾವಿನ ಹೋರಾಟ ಮಾಡುತ್ತಿದ್ದಾರ ಇತ್ತ ಕುಟುಂಬ ಬೀದಿ ಪಾಲಾಗಿದ್ದು.ತಕ್ಷಣ ಸರ್ಕಾರ ಮತ್ತು ಕ್ಷೇತ್ರದ ಶಾಸಕರು ವ್ಯಕ್ತಿಗೆ ಹಾಗೂ ಕುಟುಂಬಕ್ಕೆ ಆಸರೆಯಾಗಬೇಕು ಎಂದು ಗ್ರಾಮದ ಜನರು ವ್ಯಕ್ತಪಡಿಸಿದ್ದಾರೆ.