ಶಿವಶರಣ ಮಾದಿಗರ ಚನ್ನಯ್ಯಾ ಸಮಾಜದ ತಾಲೂಕಾ ಅಧ್ಯಕ್ಷರಾಗಿ ಮಂಜು ಹೋಳಿಕಟ್ಟಿ ಆಯ್ಕೆ
ಅಥಣಿ : ಸೆ.೨೫:ತಾಲೂಕು ಶಿವಶರಣ ಮಾದಿಗರ ಚನ್ನಯ್ಯಾ ಸಮಾಜದ ತಾಲೂಕು ಅದ್ಯಕ್ಷರನ್ನಾಗಿ ಮಂಜು ಹೋಳಿಕಟ್ಟಿ ಹಾಗೂ ಗೌರವ ಅದ್ಯಕ್ಷರನ್ನಾಗಿ ಶಂಕರ ಪೂಜಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು
ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮಾಜ ಹಿರಿಯರು ಹಾಗೂ ಮುಖಂಡರ ಸಭೆ ನಡೆಸಿ ಶಿವಶರಣ ಮಾದಿಗರ ಚನ್ನಯ್ಯಾ ಸಮಾಜದ ಅಥಣಿ ತಾಲೂಕು ಅದ್ಯಕ್ಷ ಹಾಗೂ ಗೌರವ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಸರ್ವ ಸದಸ್ಯರು ಹಾಗೂ ಸಮಾಜದ ಮುಖಂಡರ ಸರ್ವಾನುಮತದಿಂದ ಮಂಜು ಹೋಳಿಕಟ್ಟಿ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅವರನ್ನು ಸಮಾಜದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.
ನಂತರ ನೂತನ ಅದ್ಯಕ್ಷ ಮಂಜು ಹೋಳಿಕಟ್ಟಿ ಮಾತನಾಡಿ, ಮಾದಿಗರ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತೀ ಹಿಂದೂಳಿದಿದ್ದು ಸಮಾಜದ ಸಬಲಿಕರಣಕ್ಕಾಗಿ ಸೇವೆ ಸಲ್ಲಿಸುವದಾಗಿ ಹಾಗೂ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತೇನೆ ಮತ್ತು ನಮ್ಮ ಸಮಾಜ ಶತಮಾನಗಳಿಂದ ತುಳಿತಕ್ಕೊಳಗಾಗಿದ್ದು, ಸರಕಾರದಿಂದ ಸಿಗುವ ಸೌಲತ್ತುಗಳನ್ನು ಕಟ್ಟಕಡೆಯ ವ್ಯಕ್ತಿಗೆ ಸಿಗುವಂತಾಗಬೇಕು ಎನ್ನುವದು ನನ್ನ ಗುರಿಯಾಗಿದ್ದು, ಸಮಾಜದ ಮಹತ್ವದ ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿದ್ದು ಅತ್ಯಾಂತ ಪ್ರಾಮಾಣಿಕವಾಗಿ ನನ್ನ ಕರ್ತವ್ಯವನ್ನು ಮಾಡುವದಾಗಿ ಹೇಳಿದರು.
ಈ ವೇಳೆ ನ್ಯಾಯವಾದಿ ಪ್ರಮೋದ ಹಿರೇಮನಿ ಮುಖಂಡರಾದ ಚನ್ನಪ್ಪ ಐಹೋಳೆ, ಶಂಕರ ಮುರಗುಂಡಿ, ರತ್ನಪ್ಪ ಹಿರೇಹಟ್ಟಿ, ಮಹಾವೀರ ಆಚಾರಟ್ಟಿ, ಉದಯ ಅವಳೆ, ಸಂಜೀವ ಮಾದರ, ಸದಾಶಿವ ಮಾದರ, ಭೀಮು ಪೂಜಾರಿ, ವಿಶ್ವನಾಥ ಗಡದೆ, ಧರ್ಮು ಹಲ್ಯಾಳ, ದೀಪಕ ತೆಲಸಂಗ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.