ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ
ಬೀದರ : ಸೆ.೨೫: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಎನ್.ಎಸ್.ಎಸ್. ಎಂದರೆ ನಾನು ಸೇವೆಗೆ ಸದಾ ಸಿದ್ಧ (ಓoಣ ಜಿoಡಿ me buಣ ಥಿou) ಎಂಬ ಘೋಷಣೆಯೊಂದಿಗೆ ಶಿಬಿರಾರ್ಥಿಗಳು ತಮ್ಮ ತಮ್ಮ ಗ್ರಾಮದ ನೈರ್ಮಲ್ಯ ಹಾಗೂ ಸ್ವಚ್ಛತೆ ಕಡೆಗೆ ಗಮನ ಕೊಡಬೇಕು ಹಾಗೂ ಪ್ರತಿಯೊಬ್ಬ ಶಿಬಿರಾರ್ಥಿ ಸರ್ವೇ ಜನಾ ಸುಖಿನೋ ಭವಂತು ಎಂಬ ಗಾಂಧಿಜೀಯವರ ಆದರ್ಶದಂತೆ, ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ ಎಲ್ಲಿಯವರೆಗೆ ಗ್ರಾಮಗಳು ಅಭಿವೃದ್ಧಿಯಾಗುವುದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಅಸಾಧ್ಯ ಎಂಬ ಮಾತು ಇಂದಿಗೂ ಪ್ರಸ್ತುತ ಆದುದರಿಂದ ಶಿಬಿರಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ವೇದಿಕೆಯ ಮೇಲೆ ಗೌರವ ಉಪಸ್ಥಿತಿ ಹೊಂದಿದ್ದ ಡಾ. ಶಿವಲೀಲಾ ವೀರಯ್ಯಾಯವರು ಮಾತನಾಡುತ್ತಾ ಇಂದು ಸೇವೆ ಎಂದರೆ ಹಿಂಜರಿಯುವ ಮನೋಭಾವನೆ ಇದೆ ಶಿಬಿರಾರ್ಥಿಗಳು ತಂದೆ ತಾಯಿ ಸೇವೆ ಜೊತೆಗೆ ಸಮಾಜದಲ್ಲಿ ಇರುವ ಹಿರಿಯರು ಅಸಹಾಯಕರು ಹಾಗೂ ದೀನದಲಿತರ ಸೇವೆ ಮಾಡಿ ಶಿಬಿರದ ಸಾರ್ಥಕತೆ ಮೇರೆಯಬೇಕೆಂದರು.
ಕಾರ್ಯಕ್ರಮದಲ್ಲಿ ಎನ್.ಸಿ.ಸಿ. ಅಧಿಕಾರಿಯಾದ ಶ್ರೀ ಮಾರುತಿ ಭೀಮಣ್ಣಾಯವರು ಮಾತನಾಡುತ್ತಾ ಶಿಬಿರದಿಂದ ನಾಯಕತ್ವ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಹಾಗೂ ತಾನು ಇರುವ ಗ್ರಾಮದ ಅಭಿಮಾನ ಹೊಂದಿ ಸದಾ ಶಿಬಿರಾರ್ಥಿಗಳು ಕಾರ್ಯಪ್ರವೃತರಾಗಿರಬೇಕು ಹಾಗೂ ಈ ದೈನಂದಿನ ಚಟುವಟಿಕೆ ಮತ್ತು ಉಪನ್ಯಾಸ ಕಾರ್ಯಕ್ರಮಗಳಿಗೆ ಕುಳಿತು ಕೇಳಿದಾಗ ನಾವು ಮತ್ತಷ್ಟು ಜ್ಞಾನವಂತರಾಗಿ ಸೇವೆ ಸಲ್ಲಿಸಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಮೊದಲಿಗೆ ಕು. ವಿಜಯಲಕ್ಷಿö್ಮ ಪ್ರಾರ್ಥನೆ ಗೀತೆ ಹಾಡಿದರೆ, ಕು. ಕಾವೇರಿ ಖಂಡ್ರೆ ಸ್ವಾಗತಿಸಿದರೆ, ಶ್ರೀ ಬಸವರಾಜ ಬಿರಾದಾರ ನಿರೂಪಿಸಿದರೆ, ಶ್ರೀಮತಿ ವಾಣಿಶ್ರೀ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.