ಪೌರಕಾರ್ಮಿಕರ ಬದುಕಿನ ಬದಲಾವಣೆಗೆ ಎಲ್ಲಾ ಸಹಕಾರ ಮಾಡುವೆ: ಶಾಸಕ ದರ್ಶನ್ ಧ್ರುವ
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.25:– ನಗರ ಪಟ್ಟಣ ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನಗಳಲ್ಲಿ ಸೂರ್ಯ ಉದಯ ಆಗುವುದಕ್ಕಿಂತ ಮುಂಚೆ ದಿನ ಬೆಳಗಾದರೆ ಶುಚಿತ್ವ ಕಾರ್ಯದಲ್ಲಿ ತೊಡಗಿರುತ್ತಾರೆ. ಪೌರಕಾರ್ಮಿಕರ ಪ್ರಾಮಾಣಿಕ ಕಾರ್ಯ ವೈಕರಿಗೆ ಎಷ್ಟೇ ಹೇಳಿದರು ಸಾಲದು ಎಂದು ನಂಜನಗೂಡು ನಗರದಲ್ಲಿ ದೀಪ ಬೆಳಗುವುದರ ಮೂಲಕ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟನೆ ಮಾಡಿ ಮಾತನಾಡಿದರು.
ನಂಜನಗೂಡು ನಗರದ ಖಾಸಗಿ ನಂದಿ ಕನ್ಸ್ಟ್ರಕ್ಷನ್ ಸಭಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ನಂಜನಗೂಡು ನಗರಸಭೆಯ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ಪೌರಾಯುಕ್ತಾರಾದ ನಂಜುಂಡಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ನಂಜನಗೂಡು ನಗರದ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಸುಮಾರು 12 ಜನ ಪೌರಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಮುಂದುವರೆದು ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ರಾಜ್ಯದಲ್ಲಿ ಶ್ರದ್ಧೆ ಮತ್ತು ಪ್ರಮಾಣಿಕತೆಯಿಂದ ಸೇವೆ ಮಾಡುವ ಕಾರ್ಮಿಕರಿದ್ದಾರೆ ಎಂದರೆ ಅವರು ಪೌರಕಾರ್ಮಿಕರು ನಮ್ಮ ಸುತ್ತಲ ಪರಿಸರದ ಜೊತೆಗೆ ನಗರ ಪಟ್ಟಣ ಮತ್ತು ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನಗಳಲ್ಲಿ ಶ್ರದ್ಧೆಯಿಂದ ಶುಚಿತ್ವ ಮಾಡಿ ಉತ್ತಮ ವಾತಾವರಣ ಮತ್ತು ಉತ್ತಮ ಪರಿಸರಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಪೌರಕಾರ್ಮಿಕರು. ಅವರ ಕಾರ್ಯವೈಕರಿಗೆ ಪ್ರತಿಯೊಬ್ಬರೂ ಕೂಡ ಅಭಿನಂದನೆಗಳನ್ನು ಸಲ್ಲಿಸಬೇಕು.
ರಾಜ್ಯದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪೌರಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿ ಗೌರವಿಸಲಾಗುತ್ತಿದೆ ಹಾಗೆ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಉತ್ತಮ ಸೇವೆಗಳನ್ನು ಮತ್ತು ಉತ್ತಮ ಸೌಲಭ್ಯಗಳನ್ನು ಒದಗಿಸಿ ಕೊಡುವುದು ನನ್ನ ಕರ್ತವ್ಯವಾಗಿರುತ್ತದೆ. ಪೌರಕಾರ್ಮಿಕರ ಅಭಿವೃದ್ಧಿಗೆ ನಾನು ಸದಾ ಸಿದ್ಧ ಎಂದು ಶಾಸಕ ದರ್ಶನ್ ದ್ರುವ ನಾರಾಯಣ ಮಾತನಾಡಿದರು.
ನೀವು ನಿಮ್ಮ ಮನೆಗಳಲ್ಲಿರುವ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಸಮಾಜದಲ್ಲಿ ಉತ್ತಮ ಬೆಳವಣಿಗೆಗೆ ಮುಂದಾಗಿ ಎಂದು ಕಾರ್ಯಕ್ರಮದಲ್ಲಿ ಕಿವಿಮಾತು ಹೇಳಿದರು.
ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಮಾತನಾಡಿ ನಗರದ ಜೀವನಾಡಿ ಪೌರಕಾರ್ಮಿಕರು ಸೂರ್ಯ ಉದಯ ಆಗೋಕಿಂತ ಮುಂಚೆ ಪೌರ ಕಾರ್ಮಿಕರು ನಗರ ಪಟ್ಟಣ ಗ್ರಾಮಗಳ ಸ್ವಚ್ಛತೆ ಮಾಡಿ ಎಲ್ಲರೂ ಆರೋಗ್ಯವಾಗಿರುವುದಕ್ಕೆ ಇವರೇ ಮೂಲ ಕಾರಣ ಪ್ರತಿದಿನ 24 ಗಂಟೆ ದುಡಿಯುವ ಏಕೈಕ ಕಾರ್ಮಿಕರು ಅಂದರೆ ಅವರೇ ಪೌರಕಾರ್ಮಿಕರು ಎಂದು ತಿಳಿಸಿದರು.
ನಗರ ಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ ಪೂರ್ವ ಕಾರ್ಮಿಕರಿಗೆ ಎಲ್ಲರಿಗೂ ಶುಭಾಶಯ ಕೋರಿ ದೇಶಕ್ಕೆ ಸೈನಿಕರು ಎಷ್ಟು ಮುಖ್ಯವೋ ಅಷ್ಟೇ ಪೌರಕಾರ್ಮಿಕರು ಮುಖ್ಯ ಸೈನಿಕರು ದೇಶ ಕಾಯುತ್ತಾರೆ ಪೌರಕಾರ್ಮಿಕರು ದೇಶ ಸ್ವಚ್ಛತೆ ಮಾಡುತ್ತಾರೆ ಇವರಿಂದಲೇ ನಾವು ನೀವು ನೆಮ್ಮದಿಯಿಂದ ಆರೋಗ್ಯವಾಗಿ ಬಾಳುತ್ತಿರುವುದು ಎಂದರು.
ಎಲ್ಲ ಪೌರ ಕಾರ್ಮಿಕರು ಅಧಿಕಾರಿಗಳು ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಕೆಲವು ಪೌರಕಾರ್ಮಿಕ ಮುಖಂಡರು ಮಾತನಾಡಿ ಇನ್ನಷ್ಟು ಸೌಲಭ್ಯಗಳಿಗೆ ದಾರಿ ಮಾಡಿಕೊಡಿ ಎಂದು ಶಾಸಕರ ಬಳಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ನಗರಸಭಾ ಅಧ್ಯಕ್ಷರಾದ ಸ್ವಾಮಿ ಪೌರಯುಕ್ತಾರಾದ ನಂಜುಂಡಸ್ವಾಮಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ್ ಕುಮಾರ್ ನಗರಸಭೆಯ ಪರಿಸರ ಇಲಾಖೆಯ ಸಹಾಯಕ ಅಭಿಯಂತರರಾದ ಮೈತ್ರಿ ರೇಖಾ ಅಶೋಕ್ ಮಹೇಶ್ ನಗರ ಸಭೆಯ ಎಲ್ಲಾ ಸದಸ್ಯರು ಪೌರಕಾರ್ಮಿಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.