ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.25:- ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಬಿಜೆಪಿ ಹಾಗೂ ಗ್ರಾಮಾಂತರ ವಿಭಾಗದಿಂದ ಪಕ್ಷದ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ವಿಧಾನ ಪರಿಷತ್‍ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮುಡ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರಿಗೆ ನಾವು ಪಾದಯಾತ್ರೆ ಬಂದಾಗ ಸಿಎಂ ರವರು ತಿದ್ದುಕೊಳ್ಳುವ ಅವಕಾಶ ಇತ್ತು. ಅಲ್ಲದೇ ರಾಜ್ಯಪಾಲರು ಕೊಟ್ಟ ಆದೇಶದ ವಿರುದ್ದ ಕೋರ್ಟ್ ಮೆಟ್ಟಿಲು ಏರಿದರು. ರಾಜಭವನ ಬಿಜೆಪಿ ಕಚೇರಿ ಅಂತ ಅಪಾದನೆ ಮಾಡಿದರು.ಆದರೀಗ ನ್ಯಾಯಾಲಯ ತೀರ್ಪು ಬಂದಿದೆ. ಈಗ ಕಾಂಗ್ರೆಸ್ ಭ್ರಷ್ಟಾಚಾರ ಬೆಳಕಿದೆ ಬಂದಿದೆ. ಸಿಎಂ ಕಾನೂನು ಚೌಕಟ್ಟಿನಲ್ಲಿ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದವರು,ನಾವೆಲ್ಲರೂ ಅವರನ್ನ ವಿರೋಧಿಸುತ್ತಿಲ್ಲಘಿ. ರಾಜ್ಯಪಾಲರ ಆದೇಶ ಪಾಲಿಸಿ ರಾಜೀನಾಮೆ ಕೊಟ್ಟಿದ್ದರೆ, ಈ ಪ್ರಸಂಗ ಬರುತ್ತಿರಲಿಲ್ಲ. ರಾಜೀನಾಮೆ ಕೊಟ್ಟು ಪ್ರಾಸಿಕ್ಯೂಷನ್ ಎದುರಿಸಿ ಮತ್ತೆ ಸಿಎಂ ಆದರೆ ನಾವು ಸ್ವಾಗತಿಸುತ್ತೇವೆ.
ನಿಮ್ಮ ಪಕ್ಷದ ಹೈಕಮಾಂಡ್ ನಿಮ್ಮ ಬೆನ್ನ ಹಿಂದೆ ಇದ್ದರೂ, ಕೋರ್ಟ್ ಆದೇಶ ಬದಲಾಗುವುದಿಲ್ಲಘಿ. ನ್ಯಾಯಾಲಯಕ್ಕೆ ಎಲ್ಲರು ತಲೆಬಾಗಬೇಕು ಎಂದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಕಾಂಗ್ರೆಸ್ ಭ್ರಷ್ಟಾಚಾರಗಳ ವಿರುದ್ದ ಅಹೋರಾತ್ರಿ ಧರಣಿ ಮಾಡಿದ್ದೇವೆ. ಹೋರಾಟದ ಲವಾಗಿ ನ್ಯಾಯಾಲಯದಿಂದ ಸರಿಯಾದ ತೀರ್ಪು ಬಂದಿದ್ದೆಘಿ, ನೈತಿಕತೆ ಇದ್ದರೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುಡಾ ವಿಚಾರದಲ್ಲಿ ದಲಿತರಿಗೆ ಸೇರಿದ ಜಮೀನನ್ನು ತಪ್ಪಾಗಿ ರೆಜಿಸ್ಟರ್ ಮಾಡಿದ್ದೀರಿ.ಇದರ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ಕೊಡಲಿಲ್ಲ.ಈ ವಿಚಾರವಾಗಿ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಡಿ ಅಂತ ಕೇಳಿದ್ದಾರೆ. ಕೋರ್ಟ್ ನಡವಳಿಕೆ ಗಮನಿಸಿದರೆ ಕೊನೆ ಜಡ್ಜ್ ಮೆಂಟ್ ಬಂದಿದೆ ಎಂದರು.
ರಾಜ್ಯಪಾಲರು ಪೂರ್ವಗ್ರಹ ಪೀಡಿತರಾಗಿ ಪ್ರಾಸಿಕ್ಯೂಸನ್‍ಗೆ ಅನುಮತಿ ಕೊಟ್ಟಿದ್ದಾರೆ, ಈ ತೀರ್ಪು ಬರುತ್ತಿರಲಿಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಬೇಕು.ಕೋರ್ಟ್ ಸಂವಿಧಾನ ಪರವಾಗಿ ಇದೇ. ನೀವೂ ವಕೀಲರಾಗಿದ್ದಿರಿ ತೀರ್ಪನ್ನು ಗೌರವಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಿಚಾರಣೆ ಎದುರಿಸಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ನಿರಂಜನ್‍ಕುಮಾರ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಮೇಯರ್ ಶಿವಕುಮಾರ್, ಉಪಮೇಯರ್ ಶೈಲೇಂದ್ರ , ಮುಖಂಡರಾದ ಕೇಬಲ್ ಮಹೇಶ್, ಜೋಗಿಮಂಜು, ಗಿರಿಧರ್ ಮತ್ತಿತರರು ಪಾಲ್ತೊಂಡಿದ್ದರು.