ಪಿಸಿಓಎಸ್ ಕುರಿತು ಜಾಗೃತಿ ಮೂಡಿಸಲು ಸೈಕ್ಲೋಥಾನ್
ಸಂಜೆವಾಣಿ ನ್ಯೂಸ್
ಮೈಸೂರು: ಸೆ.25:- ಪಿಸಿಓಎಸ್ ಜಾಗೃತಿ ಮಾಸ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ರಂದು ಮೈಸೂರಿನ ನೋವಾ ಐವಿಎಫ್ ಫರ್ಟಿಲಿಟಿ ಸೈಕ್ಲೋಥಾನ್ ಅನ್ನು ಆಯೋಜಿಸಿತ್ತು.
ಪಿಸಿಓಎಸ್ ಕಾರಣದಿಂದ ಮಕ್ಕಳಾಗದಿರುವಿಕೆ ಸಮಸ್ಯೆ ಹೆಚ್ಚುತ್ತಿರುವ ಕುರಿತು ಜಾಗೃತಿ ಮೂಡಿಸುವ ಮತ್ತು ಅದಕ್ಕೆ ಸಂಬಂಧಿಸಿದ ಚಿಕಿತ್ಸೆಯ ಆತಂಕವನ್ನು ತೊಡೆಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೈಕ್ಲೋಪೀಡಿಯಾ ಸೈಕ್ಲಿಂಗ್ ಕ್ಲಬ್ ಜೊತೆಗಿನ ಸಹಭಾಗಿತ್ವದಲ್ಲಿ ನಡೆಸ ಈ ಸೈಕ್ಲೋಥಾನ್ ನಲ್ಲಿ 60+ ಮಂದಿ ಮೈಸೂರಿಗರು ಉತ್ಸಾಹದಿಂದ ಪಾಲ್ಗೊಂಡರು. ಸುಮಾರು 19 ಕಿಮೀನಷ್ಟು ದೂರವನ್ನು ಸೈಕಲ್ ಮೂಲಕ ಕ್ರಮಿಸಿದರು. ಈ ಸೈಕ್ಲೋಥಾನ್ ಅನ್ನು ಮೈಸೂರಿನ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ ಪ್ರಕಾಶ್ ಬಿ ಸವಣೂರು ಮತ್ತು ಎಂಓಜಿಎಸ್ ನ ಅಧ್ಯಕ್ಷೆ ಡಾ. ಸುನಂದಾ ಎನ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ ಪ್ರಕಾಶ್ ಬಿ ಸವಣೂರ್ ಅವರು ಪಿಸಿಓಎಸ್‍ನಿಂದ ಮಕ್ಕಳಾಗದೇ ಇರುವ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಸಂಖ್ಯೆ ಏರಿಕೆಯಾಗುತ್ತಿರುವುದರ ಕುರಿತು ಮಾತನಾಡಿದರು. ಆ ಕುರಿತು ಅವರು, “ಮಕ್ಕಳಾಗದೇ ಇರುವ ಸಮಸ್ಯೆ ಆತಂಕಕಾರಿಯಾಗಿದೆ. ಈ ಸಮಸ್ಯೆಗೆ ಮಹಿಳೆಯರ ಮತ್ತು ಪುರುಷರ ಕಾರಣಗಳು ಸಮಾನಾಂತರವಾಗಿ ಕಂಡುಬರುತ್ತದೆ. ಮಹಿಳೆಯರ ಕರಣಗಳಲ್ಲಿ ಪಿಸಿಓಎಸ್ ಶೇ 40% ನಷ್ಟು ಕಾಣಲಾಗುತ್ತೆದೆ. ಇನ್ನೊಂದು ಕಡೆ ಮಹಿಳೆಯರಲ್ಲಿ ಕಡಿಮೆ ಅಂಡಗಳು ಉತ್ಪತ್ತಿ ಆಗುವುದು ಮತ್ತೊಂದು ಸಾಮಾನ್ಯ ಸಮಸ್ಯೆಯಾಗಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಸಿಪಿಓಎಸ್) ಎನ್ನುವುದು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಕಂಡು ಬರುವ ಹಾರ್ಮೋನು ಸಂಬಂಧಿತ ಸಮಸ್ಯೆಯಾಗಿದೆ. ಇದರಿಂದ ಅನಿಯಮಿತ ಮುಟ್ಟಿನ ಸಮಸ್ಯೆ, ಆಂಡ್ರೊಜನ್ ಮಟ್ಟ ಏರಿಕೆಯಾಗುವುದು ಮತ್ತು ಅಂಡಾಶಯದಲ್ಲಿ ಚೀಲಗಳು ಉಂಟಾಗುವುದು ಇತ್ಯಾದಿ ಸಮಸ್ಯೆಗಳು ಉಂಟಾಗಬಹುದಾಗಿದೆ ಎಂದರು.