ಸೈಟುಯಿಲ್ಲ, ಸೀಟುಯಿಲ್ಲ ಎಂಬ ಸ್ಥಿತಿ ಸಿಎಂ ದೂ: ಶಾಸಕ ಶ್ರೀವತ್ಸ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.25:- ಸದ್ಯಕ್ಕೆ ಹೈಕೋರ್ಟ್ ನಿರ್ಧಾರ ಸತ್ಯಮೇವ ಜಯತೆಯಾಗಿದೆ.ನಾವು ಸತ್ಯವನ್ನೇ ನುಡಿದಿದ್ದೇವು. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರ ಪರಿಸ್ಥಿತಿ ಸೈಟು ಇಲ್ಲ, ಸೀಟು ಇಲ್ಲ ಎಂಬಂತಾಗಿದೆ ಎಂದು ಶಾಸಕ ಶ್ರಿವತ್ಸ ತಿಳಿಸಿದರು.
ಮುಡಾ ಹಗರಣ ಕುರಿತ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರತಿಕ್ರಯಿಸಿದ ಅವರು, ನಾವು ಹೇಳಿದ್ದೆಲ್ಲವೂ ದಾಖಲೆಗಳೊಂದಿಗೆ ಮಾತನಾಡಿದ್ದೇವೆ. ಇದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಕೇವಲ ಒಂದೈದು ನಿಮಿಷಕ್ಕೆ ಬಂದ ತೀರ್ಪಲ್ಲ, ಸತತ 30 ಗಂಟೆಗಳ ಕಾಲ ಚರ್ಚೆ ನಡೆದ ಬಳಿಕ ರಾಜ್ಯಪಾಲರ ನಡೆ ಸರಿಯಿದೆ ಎಂಬುದನ್ನು ನ್ಯಾಯಾಧೀಶರು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.
ಇದಕ್ಕೆ ಕಾರಣ ಬೇರೆ ಯಾರು ಇಲ್ಲ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಅವರ ಸುತ್ತಾ ಇರುವ ಹಿತ ಶತ್ರುಗಳು ಅವರ ದಾರಿತಪ್ಪಿಸಿದ್ದಾರೆ. ದಾಖಲೆಗಳೊಂದಿಗೆ ನಾವು ಮಾತನಾಡಿದ ಮೇಲೂ ಪ್ರಕರಣದಲ್ಲಿ ಎನೂ ಆಗಿಲ್ಲಯೇ ಇಲ್ಲ ಎಂದು ಸಿಎಂ ಅವರಿಗೆ ಬಿಂಬಿಸಿದ್ದಾರೆ. ಆದರೆ, ನಾವು ಕೊಟ್ಟ ದಾಖಲೆ ಹಿನ್ನೆಲೆಯಲ್ಲಿ ಹಾಗೂ ಮಾದ್ಯಮಗಳು ಸಹ ಬೆಂಬಲವಾಗಿ ನಿಂತಿದ್ದರಿಂದ ಸದ್ಯಕ್ಕೆ ಮೊದಲ ಹಂತದಲ್ಲಿ ನ್ಯಾಯ ಸಿಕ್ಕಿದೆ.
ಮುಂದೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಯಾವ ರೀತಿ ನಡೆಯುತ್ತೇ, ಯಾರ ಹಂತದಲ್ಲಿ ತನಿಖೆ ಮಾಡಬೇಕಿದೆ ಎಂಬುದು ನಿರ್ಧರಿಸಲಿ ಅನಂತರ ನಾವು ನಮ್ಮ ಮುಂದಿನ ಹೋರಾಟ ರೂಪಿಸುತ್ತೇವೆಂದರು.
ಸರ್ಕಾರವೇ ಬದಲಾಗುವ ಅಸ್ಥಿರತೆಯ ಕರಿ ನೆರಳು ದಸರೆಗೂ ಆಗುವ ಸನ್ನಿವೇಶವಿದೆ. ಆದರೆ ಪೂರ್ವ ತಯಾರಿಗಳೆಲ್ಲಾ ಆಗಿರುವ ಕಾರಣಕ್ಕೆ ಎನಾಗಲಿದೆ ಎಂಬುದು ಕಾದು ನೊಡಬೇಕಿದೆ ಎಂದರು.