“ನಮ್ಮ ಹೊಲ ನಮ್ಮ ರಸ್ತೆ” ಯೋಜನೆಯಡಿ ರಸ್ತೆ ನಿರ್ಮಿಸಲು ಆಗ್ರಹಿಸಿ ಮನವಿ
ಚಿಂಚೋಳಿ,ಸೆ.೨೫- ತಾಲ್ಲೂಕಿನ ಗಾರಂಪಳ್ಳಿ ಮತ್ತು ಅಕ್ಕ ಪಕ್ಕದ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿಯಲ್ಲಿ ರಸ್ತೆ ನಿರ್ಮಿಸಿ ಕೊಡುವುದು ಸೇರಿದಂತೆ ವಿವಿಧ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ಬೇಡಿಕೆಗಳ ಮನವಿ ಪತ್ರವನ್ನು ಗಾರಂಪಳ್ಳಿ ಗ್ರಾಮ ನಾಗರಿಕ ಹೋರಾಟ ಸಮಿತಿಯ ನೆತೃತ್ವದಲ್ಲಿ ಇಲ್ಲಿನ ಚಿಮ್ಮಈದ್ಲಾಯಿ ವೃತ್ತದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಬಳಿಕ ಬೇಡಿಕೆಗಳ ಕುರಿತು ಮಾತನಾಡಿದ ಹೋರಾಟಗಾರ ಗೋಪಾಲ ಗಾರಂಪಳ್ಳಿ, ಗಾರಂಪಳ್ಳಿ ಗ್ರಾಮದಿಂದ ಪಕ್ಕದ ಗೌನಳ್ಳಿ ಗ್ರಾಮಕ್ಕೆ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಹೋಗಬೇಕಾದರೆ ೭ ಕಿಮಿಗಳಷ್ಟು ದೂರ ಪ್ರಯಾಣ ಮಾಡಬೇಕಾಗುತ್ತದೆ ಆದರೇ, ನಮ್ಮ ಹೊಲ ನಮ್ಮ ರಸ್ತೆ ಯೋಜನೆಡಿಯಲ್ಲಿ ಗ್ರಾಮದ ಹೊಲಗಳ ಮಧ್ಯೆ ರಸ್ತೆ ನಿರ್ಮಿಸಿ ಕೊಟ್ಟರೆ ೭ ಕಿಮಿಗಳಷ್ಟು ದೂರ ಇರುವ ಗ್ರಾಮಕ್ಕೆ ಕೇವಲ ೧.೩೦ ಕಿಮೀ. ದೂರವಿದ್ದು ಪ್ರಯಾಣ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ, ಚಿಂಚೋಳಿಯಿAದ ಗಾರಂಪಳ್ಳಿ,ಯAಪಳ್ಳಿ, ಮೊತಕಪಳ್ಳಿ,ತುಮಕುಂಟಾ,ಚಾAಗಲೇರಾ ಮಾರ್ಗವಾಗಿ ಬೀದರ್ ಗೆ ನಿತ್ಯ ಬಸ್ಸಿನ ವ್ಯವಸ್ಥೆಯನ್ನು ಒದಗಿಸಿ ಕೊಡಬೇಕು ಇದರಿಂದ ಬೀದರ್ ಗೆ ಹೋಗಿ ಬರುವ ಹಲವಾರು ಹಳ್ಳಿ ಜನರಿಗೆ ಅನುಕೂಲವಾಗುತ್ತದೆ ಮತ್ತೆ ಗೌನಳ್ಳಿ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು, ಗೌನಳ್ಳಿ ಗ್ರಾಮದಿಂದ ಮುಖ್ಯ ರಸ್ತೆಯವರೆಗೆ ಡಾಂಬರೀಕರಣ ಮಾಡಿಸಿಕೊಟ್ಟು ರಸ್ತೆಯ ಸಮಸ್ಯೆಯನ್ನು ಬಗೆಹರಿಸುವಂತೆ ಇನ್ನು ಮುಂತಾದ ಬೇಡಿಕೆಗಳ ಕುರಿತು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಮೌನೇಶ ಗಾರಂಪಳ್ಳಿ ಸೇರಿದಂತೆ, ನರಸಪ್ಪ ಗಾರಂಪಳ್ಳಿ, ನವೀನ,ಸಾಗರ್ ಆನಂದಿ, ಹಣಮಂತ ಭೋವಿ ಮುಂತಾದವರು ಭಾಗಿಯಾಗಿದ್ದರು.