ಪೆÇಲೀಸ್ ಠಾಣೆ ಎದುರು ಗ್ರಾಮಸ್ಥರ ದರಣಿ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ. 09:- ಕೆ.ಆರ್.ನಗರ ತಾಲ್ಲೂಕಿನ ಚಂದಗಾಲು ಗ್ರಾಮದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕ ಸಂಬಂದಿಸಿದಂತೆ ಚಂದಗಾಲು ಗ್ರಾಮಸ್ಥರು ಪಟ್ಟಣದ ಪೆÇಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಘಟನೆಯ ಆರೋಪಿ ವಿರುದ್ದ ಹಾಗು ಪಟ್ಟಣದ ಪೆÇಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಡಿವೈಎಸ್‍ಪಿ.ಕರೀಂ ರಾವ್ ತರ್ ಅವರಿಗೆ ದೂರನ್ನು ನೀಡಿದರು.
ದೂರು ಸ್ವೀಕರಿಸಿದ ಡಿವೈಎಸ್.ಪಿ ಕರೀಂ ರಾವ್ ತರ್ ಈಗಾಗಲೇ ಆತನ ವಿರುದ್ದ ಚಾಮರಾಜನಗರ ಜಿಲ್ಲೆಯಲ್ಲಿ ಎಫ್.ಐ.ಆರ್. ಆಗಿದೆ ಹಾಗು ದೂರು ದಾಖಲಿಸಿಕೊಳ್ಳದ ಪೆÇಲೀಸರ ವಿರುದ್ದ ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಿವೈಎಸ್ಪಿ. ಕರೀಂ ರಾವ್ ತರ್ ಗ್ರಾಮಸ್ಥರಿಗೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಂದಿನಿ ಅವರು ಬೆಳಗ್ಗೆಯಿಂದ ಠಾಣೆಯಲ್ಲಿ ಇದ್ದೇನೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸಮಜಾಯಿಷಿ ಉತ್ತರ ನೀಡಿದರು.