ವಿದ್ಯುತ್ ತಂತಿ ಕಡಿದು ಬಾಲಕನಿಗೆ ಗಂಭೀರ ಗಾಯ
ಕೆಂಭಾವಿ: ಜೂ.9:ವಿದ್ಯುತ್ ತಂತಿ ಏಕಾಎಕಿ ಕಡಿದು ಬಿದ್ದ ಪರಿಣಾಮವಾಗಿ ಬಾಲಕ ಗಂಭೀರ ಗಾಯಗೊಂಡ ಘಟನೆ ಪಟ್ಟಣ ಸಮೀಪದ ಯಾಳಗಿ ಗ್ರಾಮದಲ್ಲಿ ಸಂಭವಿಸಿದೆ ಗ್ರಾಮದ ಸಮರ್ಥ ದೇವಾಪೂರ ಆಟವಾಡುತಿದ್ದ ವೇಳೆ ವೈರ ತುಂಡಾಗಿ ಬಿದ್ದ ಪರಿಣಾಮವಾಗಿ ಮುಖ ಹೊಟ್ಟೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದೆ.
ಮಳೆಗಾಲದ ಸಂದರ್ಭ ಇದಾಗಿರುವುದರಿಂದ ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾದ ಪರಿಸ್ಥಿತಿಯಿದ್ದು ಕೆಂಭಾವಿ ವಲಯದಲ್ಲಿ ಇದು ಎರಡನೇ ಘಟನೆಯಾಗಿದ್ದು ಕೂಡಲೇ ಜೆಸ್ಕಾಂ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದು ಕೊಂಡು ಮುಂದೆ ಇಂತಹ ಅವಘಡ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ