ಮಾರ್ಯದೆ ಹತ್ಯೆ: ವಿಷ ಸೇವಿಸಿ ಸ್ಥಳದಲ್ಲೇ ಒಬ್ಬ ಸಾವು, ಮೂವರು ಅಸ್ವಸ್ಥ
ಸಂಜೆವಾಣಿ ವಾರ್ತೆ
ಹನೂರು ಜೂ 9 :- ತಾಲೂಕಿನ ಮಲೆ ಮಹದೇ ಶ್ವರ ಬೆಟ್ಟದ ತಾಳುಬೆಟ್ಟದ ಲ್ಲಿ ಒಂದೇ ಕುಟುಂಬದ ನಾಲ್ವರು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಇದರಿಂದ ಒಬ್ಬರು ಮೃತಪಟ್ಟರೆ ಮೂವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಚಂದಗಾಲ ಗ್ರಾಮದ ಮಹದೇವನಾಯಕ (65) ಮೃತರು. ಇವರ ಪತ್ನಿ ಗೌರಮ್ಮ (53), ಪುತ್ರಿ ಲೀಲಾವತಿ (34) ಹಾಗೂ ಮೊಮ್ಮಗಳು (17) ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಾಲ್ವರು ಶುಕ್ರವಾರ ಬೆಳಗ್ಗೆ ಕೆ.ಆರ್.ನಗರದಿಂದ
ಮಹದೇಶ್ವರ ಬೆಟ್ಟದ ಕಡೆಗೆ ಬಂದಿದ್ದಾರೆ.
ತಾಳುಬೆಟ್ಟದಲ್ಲಿ ಇಳಿದು ಮೊದಲ ತಿರುವಿನ ಅರಣ್ಯ ಪ್ರದೇಶದಲ್ಲಿ ರಾತ್ರಿಯೇ ಕ್ರಿಮಿನಾಶಕ ಸೇವಿಸಿ ಇಲ್ಲೇ ಉಳಿದಿದ್ದಾರೆ. ಬೆಳಗ್ಗೆ ವೇಳೆಗೆ ಮಹದೇವನಾಯಕ ಮೃತಪಟ್ಟಿದ್ದನ್ನು ನೋಡಿ ಹೆದರಿದ ಬಾಲಕಿ ಅರಣ್ಯ ದೊಳಗಿನಿಂದ ನರಳಾಡುತ್ತಾ ರಸ್ತೆಯಲ್ಲಿದ್ದ ಭಕ್ತರನ್ನು ಕೂಗಿ ಕರೆದಿದ್ದಾಳೆ.
ಸ್ಥಳೀಯರು ಗೌರಮ್ಮ, ಲೀಲಾವತಿ ಮತ್ತು ಬಾಲಕಿ ಸ್ಥಿತಿ ನೋಡಿ ಅಂಬುಲೆನ್ಸ್‍ಗೆ ಕರೆ ಮಾಡಿದ್ದಾರೆ. ಮಾದೇಶ್ವರ ಬೆಟ್ಟ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿಷ ಸೇವಿಸಿದ ವ್ಯಕ್ತಿಗಳನ್ನು ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ.
ರಶೀತಾ ಎಂಬ ಹುಡುಗಿಯನ್ನು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗೌರಮ್ಮ, ಲೀಲಾವತಿಯನ್ನು ಚಾಮ ರಾಜನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ.
ಲೀಲಾವತಿ ಸ್ಥಿತಿ ಚಿಂತಾಜನ ಕವಾಗಿದೆ. ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಶೀತಾ ಎಂಬ ಯುವತಿಯ ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಸಂಜೆಯ ವೇಳೆಯಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಲೋಕೇಶ್ ಪೆÇಲೀಸರ ವಿರುದ್ಧ ದೂರು: ಪ್ರಕರಣ ಸಂಬಂಧ ಮೃತ ಮಹದೇವ ನಾಯಕ ಸಂಬಂಧಿಕ ಮಂಜು ಮಲೆ ಮಹದೇಶ್ವರ ಬೆಟ್ಟದ ಪೆÇಲೀಸ್ ಠಾಣೆಯಲ್ಲಿ ಚೀರನ ಹಳ್ಳಿಯ ಲೋಕೇಶ್ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ಈ ಸಂಬಂಧ ದೂರು ನೀಡಲು ಹೋದಾಗ ಕೆ.ಆರ್.ನಗರದ ಪೆÇಲೀಸ ರು ದೂರು ಸ್ವೀಕರಿಸಿಲ್ಲ ಎಂದು ಮಂಜು ದೂರಿದ್ದಾರೆ. ಒಂದೇ ಕುಟುಂಬದ ನಾಲ್ವರು ತಾಳುಬೆಟ್ಟದಲ್ಲಿ ವಿಷ ಕುಡಿದ ವಿಷಯ ತಿಳಿದ ಡಿವೈಎಸ್‍ಪಿ ಧರ್ಮೇಂದ್ರ ಹಾಗೂ ಇನ್ಸ್‍ಪೆಕ್ಟರ್‍ಗಳಾದ ಮ.ಬೆಟ್ಟದ ಜಗದೀಶ್, ಹನೂರಿನ ಶಶಿಕುಮಾರ್ ಹನೂರು ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ ಪಡೆದರು. ಮಹದೇವ ನಾಯ್ಕ ಮೃತ ದೇಹದ ಶವ ಪರೀಕ್ಷೆಗಾಗಿ ಹನೂರು ಸರ್ಕಾರಿ ಆಸ್ಪತ್ರೆ ಯಿಂದ ಚಾ.ನಗರ ಆಸ್ಪತ್ರೆಗೆ ರವಾನಿಸಲಾಯಿತು.
ಆರೋಪಿ ಸಿಎಂ ಸಂಬಂಧಿ: ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದ ಲೋಕೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎನ್ನುವ ಕಾರಣಕ್ಕೆ ಪೆÇಲೀಸರು ಆತನನ್ನು ಬಂಧಿಸಿಲ್ಲ ಎಂದು ಕೆ.ಆರ್.ನಗರ ಮಾಜಿ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯ ಮದವರೊಂದಿಗೆ ಮಾತನಾ ಡಿರುವ ಅವರು ಪೆÇಲೀಸ ರು ಅರೆಸ್ಟ್ ಮಾಡದೆ ಬಿಟ್ಟಿರುವ ಆರೋಪಿಯಿಂದ ಈ ಕುಟುಂಬಕ್ಕೆ ಅನ್ಯಾಯ ವಾಗಿದೆ. ಯಾವ ಕಾರಣಕ್ಕೆ ಆತನ ವಿರುದ್ಧ ಎಫ್‍ಐಆರ್ ದಾಖಲಿಸಿಲ್ಲ ಎಂದು ಹೇಳ ಬೇಕು. ವಿಷ ಸೇವಿಸಿರುವ ಕುಟುಂಬಕ್ಕೆ ಪರಿಹಾರ, ನ್ಯಾಯ ಒದಗಿಸಿ ಕೊಡ ಬೇಕು. ದೂರು ತೆಗೆದುಕೊಳ್ಳದ ಪೆÇಲೀಸ್ ಮೇಲೆ ಕ್ರಮ ಕೈಗೊಳ್ಳ ಬೇಕು. ಇಲ್ಲವಾದರೆ ನಾವು ಪೆÇಲೀಸ್ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡುತ್ತೇವೆ. ವಿಷ ಕುಡಿದಿರುವ ನಾಲ್ವ ರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಉಳಿದ ಮೂವರಲ್ಲಿ ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದರು. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೇ ನಾವೆಲ್ಲರೂ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ನಡೆದಿದೆ. ಪರಿಶಿಷ್ಟ ಪಂಗಡದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಅದೇ ಸಮಾಜದಕುಟುಂಬಕ್ಕೆ ರಕ್ಷಣೆ ಕೊಡದೆ ಇಡೀ ಕುಟುಂಬದ ನಾಲ್ವರು ವಿಷ ಕುಡಿದಿದ್ದಾರೆ. ಬದುಕಿ ಬಾಳಬೇಕಿದ್ದ ಹೆಣ್ಣು ಮಗಳು ವಿಷ ಸೇವಿ ಸಿರುವುದು ನಾವೆಲ್ಲರೂ ತಲೆ ತಗ್ಗಿಸುವಂತಹ ಕೆಲಸ ಎಂದಿದ್ದಾರೆ.
ಮದುವೆಯಾಗಿದ್ದ ಲೋಕೇಶ್: ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಲೋಕೇಶ್‍ಗೆ ಈಗಾಗಲೇ ಮದುವೆಯಾಗಿದ್ದ, ಮಗು ಇದೆ. ಆದರೆ ಹೆಂಡತಿ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಈತ ಆಟೋ ಓಡಿಸುತ್ತಿದ್ದ. ಬಾಲಕಿಯೊಂದಿಗೆ ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಬಿರುಕು ಮೂಡಿದಾಗ ಬಾಲಕಿ ಮನೆ ಬಳಿಗೆ ಬಂದು ಗಲಾಟೆ ಮಾಡಿದಾಗ ಊರಿನವರಿಗೆಲ್ಲಾ ವಿಷಯ ಗೊತ್ತಾಗಿದ್ದರಿಂದ ಮಹದೇವನಾಯಕ ಮಾನಕ್ಕೆ ಅಂಜಿದರು ಎಂದು ಸಂಬಂಧಿಕ ಸತ್ಯ ಮಾಹಿತಿ ನೀಡಿದ್ದಾರೆ.
ಮಗ ಮನೆಯಲ್ಲಿದ್ದಾನೆ: ತಾಯಿ ಲೀಲಾವತಿ, ಆಕೆ ಮಗಳು ವಿಷ ಕುಡಿದು ಆಸ್ಪತ್ರೆ ಸೇರಿದ್ದರೆ, 13 ವರ್ಷದ ಮಗ ಕೆ.ಆರ್. ನಗರದ ಮನೆಯಲ್ಲಿದ್ದಾನೆ. ಲೀಲಾವತಿ ಬೆಣಗಾಲು ಗ್ರಾಮದ ದೇವರಾಜು ಅವರನ್ನು ವಿವಾಹವಾಗಿದ್ದಳು. 2013ರಲ್ಲಿ ದೇವರಾಜು ಮೃತಪಟ್ಟ ಹಿನ್ನೆಲೆ ಲೀಲಾವತಿ ಚಂದಗಾಲು ವಿನ ತಂದೆ ಮನೆ ಯಲ್ಲಿ ವಾಸವಿದ್ದರು. ಸಾಯಲು ನಿರ್ಧರಿಸಿ ಮನೆ ಬಿಟ್ಟು ಮ. ಬೆಟ್ಟಕ್ಕೆ ತನ್ನ ಕುಟುಂಬ ಹೋಗುವಾಗ 13 ವರ್ಷದ ಮಗನನ್ನು ಶಾಲೆಗೆ ಕಳುಹಿಸಿ ಬಂದಿದ್ದಳು ಎಂದು ತಿಳಿದುಬಂದಿದೆ.
ಒಬ್ಬರ ಸ್ಥಿತಿ ಚಿಂತಾಜನಕ: ಆತ್ಮಹತ್ಯೆಗೆ ಗೆ ಯತ್ನಿಸಿದ್ದ ಯತ್ನಿಸಿದ್ದ ಕುಟುಂಬದ ಗೌರಮ್ಮ ಮತ್ತು ಅವರ ಪುತ್ರಿ ಲೀಲಾವತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ವೈದ್ಯಕೀಯ ಬೋಧನಾ ಆಸ್ಪತ್ರೆಗೆ ದಾಖಲಿಸಿದ್ದು ಒಬ್ಬರ ಸ್ಥಿತಿ ಚಿಂತಾಜನಕ ವಾಗಿದೆ.
ಇಬ್ಬರಿಗೂ ಸಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುತ್ತಿದ್ದು, ಕ್ರಿಮಿನಾಶಕ ಸೇವನೆ ಮಾಡಿದ್ದ ಗೌರಮ್ಮ ಅವರು ಚೂರು ಚೇತರಿಕೆ ಕಂಡಿದ್ದಾರೆ. ಆದರೆ ಅವರ ಪುತ್ರಿ ಲೀಲಾವತಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾIIಮಹೇಶ್ ಸಂಜೆವಾಣಿ ಜತೆಗೆ ಮಾತನಾಡಿ ಮಾಹಿತಿ ನೀಡಿದರು.