ಎಸ್‍ಟಿಜಿ ಕಾಲೇಜು ವತಿಯಿಂದ ಸಸಿ ನೆಟ್ಟು ಪರಿಸರ ದಿನ ಆಚರಣೆ
ಸಂಜೆವಾಣಿ ವಾರ್ತೆ
ಪಾಂಡವಪುರ:ಪರಿಸರ ದಿನಾಚರಣೆ ಅಂಗವಾಗಿ ಎಸ್‍ಟಿಜಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಕಣಿವೆಕೊಪ್ಪಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಸಿ ನಡುವ ಮೂಲಕ ಪರಿಸರ ದಿನ ಆಚರಣೆ ಮಾಡಿದರು. ಎಸ್‍ಟಿಜಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕ, ಐಕ್ಯೂಎಸಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಸಸಿನೆಡುವ ಮೂಲಕ ಪರಿಸರ ದಿನಾಚರಣೆ ಆಚರಣೆ ಮಾಡಿ ಪರಿಸರದ ಜಾಗೃತಿ ಮೂಡಿಸಿದರು.
ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಪರಿಸರ ಜಾಗೃತಿ ಹಾಗೂ ರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯಕರ್ತವ್ಯವಾಗಿದೆ. ಮನುಷ್ಯ ತನ್ನ ಸ್ವರ್ಥಕಕ್ಕಾಗಿ ಮರಗಳನ್ನು ಕಟಾವು ಮಾಡಿ ಅರಣ್ಯವನ್ನು ನಾಶಮಾಡುತ್ತಿದ್ದಾನೆ.ಇದರಿಂದ ಕಾಡು ನಾಶವಾಗಿ ಹಲವು ಪ್ರಾಕೃತಿಕ ವಿಕೋಪಗಳು ಎದುರಾಗುತ್ತಿವೆ. ಹಾಗಾಗಿ ಹೆಚ್ಚುಹಚ್ಚು ಸಸಿನೆಟ್ಟು ಮರವಾಗಿ ಬೆಳೆಸುವ ಮೂಲಕ ಅರಣ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಜತೆಗೆ ಬೇರೆಯವರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕು, ತಮ್ಮ ಮನೆ, ಜಮೀನುಗಳು, ಖಾಲಿ ಜಾಗಗಳಲ್ಲಿ ಸಸಿನೆಡಬೇಕು, ಹುಟ್ಟುಹಬ್ಬಗಳಿಗೆ ಕೇಕ್ ಕತ್ತರಿಸುವ ಬದಲು ಸಸಿನೆಟ್ಟು ಆಚರಣೆ ಮಾಡಿಕೊಳ್ಳವ ಮನೋಭಾವ ಬೆಳೆಸಿಕೊಳ್ಳಬೇಕು, ಜತೆಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಒಬ್ಬರು 20 ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯದಲ್ಲಿ ಮುಂದಾಗಬೇಕು ಎಂದರು.ಇದೇವೇಳೆ ಕಣಿವೆಕೊಪ್ಪಲು ಅರಣ್ಯ ವಲಯಕ್ಕೆ ತೆರಳಿ ಆಲ, ತೇಗ, ಸಿಲ್ವರ್, ಹುಣಸೆ, ಹೊಂಗೆ, ನೆರಳೆ ಸೇರಿದಂತೆ ವಿವಿಧ ಜಾತಿಯ ಮರಗಳನ್ನು ನೆಟ್ಟರು.
ಸಂದರ್ಭದಲ್ಲಿ ಕಾಲೇಜಿನ ಎನ್‍ಎಸ್‍ಎಸ್ ಸಂಯೋಜಕ ಕುಮಾರ್ ಬಿ. ಎಸ್, ಕನ್ನಡ ವಿಭಾಗದ ಮುಖ್ಯಸ್ಥವಿ. ಶ್ರೀಧರ, ಸಹಾಯಕ ಪ್ರಾಧ್ಯಪಕ ರಘುನಂದನ್ ಡಿ, ಅರಣ್ಯಾಧಿಕಾರಿಗಳಾ ವಿ. ಆರ್ .ಧರ್ಮೆಂದ್ರ, ಯೋಗೇಶ್ ಎಂ.ಸಿ, ಧನಂಜಯ ಜಿ.ಕೆ., ಮಂಜುನಾಥ್, ಅಂಕೇಗೌಡ ಸೇರಿದಂತೆ ಅರಣ್ಯ ರಕ್ಷಕ ಹಾಜರಿದ್ದರು.