ಶ್ರೀವೆಂಕಟೇಶ್ವರ ಸ್ವಾಮಿಯ ಉತ್ಸವ ಅದ್ದೂರಿ ಮೆರವಣಿಗೆ
ಸಂಜೆವಾಣಿ ವಾರ್ತೆ
ಭಾರತೀನಗರ: ಕೆ.ಎಂ.ದೊಡ್ಡಿಯ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ 2ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಪೂಜಾಕೈಂಕ
ರ್ಯಗಳು ವಿಜೃಂಭಣೆಯಿಂದ ಜರುಗಿತು.
ಕೆ.ಎಂ.ದೊಡ್ಡಿಯ ಪ್ರಶಾಂತ್ ಶಾಲೆಯಿಂದ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಶ್ರೀದೇವಿ-ಭೂದೇವಿ ಮೂರ್ತಿಯನ್ನು ರಥದಲ್ಲಿ ಹೂ-ಹೊಂಬಾಳೆ ಮೂಲಕ ಗಾರುಡಿಗೊಂಬೆ, ಡೊಳ್ಳುಕುಣಿತ, ಪೂಜಾಕುಣಿ, ಚಿಲಿಪಿಲಿಗೊಂಬೆ, ವೀರಗಾಸೆ ಕುಣಿತ ಮತ್ತು ದೇವರುಗಳ ಪೂಜಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿಗಿತ್ತು.
ಮೆರವಣಿಗೆ ಉದ್ದಕ್ಕೂ ಭಕ್ತಾಧಿಗಳು ಆರತಿ ನೀಡಿ ಪೂಜೆಸಲ್ಲಿಸಿದರು.
ಹೆದ್ದಾರಿಯುದ್ದಕ್ಕೂ ತಮಟೆ ನಗಾರಿಗಳು ಮತ್ತು ಪಟಾಕಿ ಸದ್ದು ಅರ್ಭಟಿಸಿತು. ಭಕ್ತಾಧಿಗಳು ಗೋವಿಂದನ ನಾಮಸ್ಮರಣೆ ಮಾಡುತ್ತ ದೇವಸ್ಥಾನಕ್ಕೆ ಉತ್ಸವ ಮೂರ್ತಿಯನ್ನು ಕರೆತರಲಾಯಿತು.
ದೇವಸ್ಥಾನದ ಮುಖ್ಯದ್ವಾರದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿ , ಶ್ರೀದೇವಿ, ಭೂದೇವಿ ಮೂರ್ತಿಗೆ ಮಹಿಳೆಯರು ಕೆಂಪು ಮತ್ತು ಹಳದಿ ನೀರಿನ ಆರತಿ, ಬೆಲ್ಲದ ಆರತಿ ಬೆಳಗುವ ಮೂಲಕ ಉತ್ಸವ ಮೂರ್ತಿಗಳನ್ನು ದೇವಸ್ಥಾನದ ಪ್ರಾಂಗಣಕ್ಕೆ ಕರೆತರಲಾಯಿತು.ನಂತರ ಮಾರಿಗುಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಗರ್ಭಗುಡಿಯಲ್ಲಿರುವ ಶ್ರೀವೆಂಕಟೇಶ್ವರ ಮೂರ್ತಿಗೆ ಹೂವಿನಿಂದ ಅಲಂಕರಿಸಲಾಗಿತ್ತು. ಭಕ್ತಾಧಿಗಳು ಸರಥಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಂತರ ಮಧ್ಯಾಹ್ನ 12.30 ರಿಂದ ಸಂಜೆ 5 ಗಂಟೆಯವರೆಗೂ 15 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಪ್ರತ್ಯೇಕವಾಗಿ ಪ್ರಸಾದ ವಿತರಣೆ ಅವಕಾಶ ಮಾಡಿಕೊಡಲಾಗಿತ್ತು.
ಈ ಸಂದರ್ಭದಲ್ಲಿ ಮೇಲುಕೋಟೆ ಸ್ಥಾನಚಾರ್ಯ ಡಾ.ಶೆಲ್ವ ಪಿಳ್ಳೆ ಅಯ್ಯಂಗಾರ್, ಅರ್ಚಕರಾದ ಗೋಪಾಲಕೃಷ್ಣಭಟ್ಟರ್, ಅನಂತಕೃಷ್ಣ ಭಟ್ಟರ್, ವೇದಬ್ರಹ್ಮಶ್ರೀ ಯು.ವಿ.ಗಿರೀಶ್ ನೇತೃತ್ವದಲ್ಲಿ ರಾತ್ರಿ 7 ಗಂಟೆಯ ವರೆಗೂ ಈ ಪೂಜಾಕೈಂಕರ್ಯಗಳು ಜರುಗಿದವು.