ಸುತ್ತೂರು ಮಠಕ್ಕೆ ಶ್ರೇಯಸ್ ಪಟೇಲ್ ಭೇಟಿ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.09:- ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು.
ಮಠಕ್ಕೆ ಆಗಮಿಸಿದ ಕುಟುಂಬ ಸಮೇತ ಶ್ರೇಯಸ್ ಪಟೇಲ್ ಅವರನ್ನು ಸಾಂಪ್ರದಾಯಕವಾಗಿ ಬರಮಾಡಿಕೊಳ್ಳಲಾಯಿತು, ನಂತರ ಶ್ರೀಗಳು ಶಾಲು ಹೂದಿಸಿ ಹಾರ ಹಾಕಿ ಫಲತಾಂಬೂಲ ನೀಡಿದರು