ಮೂರು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನೆ
ಸಂಜೆವಾಣಿ ವಾರ್ತೆ
ಮೈಸೂರು, ಜೂ.09- ಹುಣಸೂರು ರಸ್ತೆಯಲ್ಲಿರುವ ರಾಜಯೋಗರಿಟ್ರೀಟ್ ಸೆಂಟರ್‍ನಲ್ಲಿ ನಡೆಯುತ್ತಿರುವ 3ನೇ ತಂಡದ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಮೈಸೂರು ಉಪವಿಭಾಗದ 200 ಕ್ಕೂ ಹೆಚ್ಚು ರಾಜಯೋಗ ಶಿಕ್ಷಕಿಯರಿಗೆ ಆಡಳಿತಾತ್ಮಕವಾಗಿ ತರಬೇತಿ ಶಿಬಿರಕ್ಕೆ ಅಂತರರಾಷ್ಟ್ರೀಯಆಧ್ಯಾತ್ಮಿಕ ಸಂಸ್ಥೆಯ ಮುಖ್ಯಾಲಯವಾದರಾಜಸ್ಥಾನಅಬುಪರ್ವತದಲ್ಲಿ ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿರುವಚಾರ್ಟರ್ರ್ಡ್‍ಅಕೌಟೆಂಟ್‍ರಾಜಯೋಗಿ ಬ್ರಹ್ಮಾಕುಮಾರ ಲಲಿತ್ ಭಾಯಿ ಇನಾನಿ ರವರು ಶನಿವಾರ ಸಂಜೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದರಿಟ್ರೀಟ್ ಸೆಂಟರ್‍ನ ಸಂಚಾಲಕಿ ಬಿಕೆ ಶಾರದಾಜೀ ಬಿಕೆ ಲಲಿತ್‍ಜಿರವರು ಬಹಳ ಅನುಭವಿ ಅಧಿಕಾರಿ ಸಂಸ್ಥೆಯ ಭಾರತದ ಸುಮಾರುಎಂಟು ಸಾವಿರ ಸೇವಾಕೇಂದ್ರಗಳ ಆದಾಯ ಮತ್ತು ಖರ್ಚುಗಳನ್ನು ಪರಿಶೀಲಿಸಿ ಒಟ್ಟಾರೆಯಾದ ಸಂಸ್ಥೆಯ ಬ್ಯಾಲನ್ಸ್ ಶೀಟ್ ಅನ್ನು ಪ್ರತಿ ವರ್ಷ ಭಾರತ ಸರ್ಕಾರಕ್ಕೆ ಸಲ್ಲಿಸುವಜವಾಬ್ದಾರಿಯನ್ನು ಹೊತ್ತಿದ್ದಾರೆ. ಜೊತೆಗೆ ಈ ಎಲ್ಲ ಸೇವಾ ಕೇಂದ್ರಗಳ ಸಂಚಾಲಕ ಸಹೋದರಿಯರಿಗೆಗಣಕಯಂತ್ರವನ್ನುಉಪಯೋಗಿಸುವ ಬಗ್ಗೆ ಮತ್ತು ಲೆಕ್ಕಪತ್ರಗಳನ್ನು ಕಾನೂನು ರೀತ್ಯಾದಾಖಲಿಸಲು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆಎಂದರು.
ಆಧ್ಯಾತ್ಮ ಮತ್ತುಆರೋಗ್ಯದ ಬಗ್ಗೆ ವಿಶೇಷವಾದಅಧ್ಯಯನ ನಡೆಸಿರುವ ಲಲಿತ್ ಜಿ ಈ ಬಗ್ಗೆ ತಮ್ಮ ಸುಂದರಅನುಭವಯುಕ್ತ ತರಗತಿಗಳನ್ನೂ ನಡೆಸುತ್ತಾರೆಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ಉಪ ವಿಭಾಗದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ, ರಾಜಯೋಗಿನಿ ಬ್ರಹ್ಮಾಕುಮಾರಿದಾನೇಶ್ವರೀಜಿ ಬ್ರಹ್ಮಾಕುಮಾರರಂಗನಾಥ್ ಜಿ ಇನ್ನಿತರು ಹಾಜರಿದ್ದರು