ಜೂನ್ 30ರಂದು ಅಖಿಲ ಭಾರತಿಯ ಗ್ರಾಹಕ: ರಾಜ್ಯ ಮಹಿಳಾ ಸಮಾವೇಶ
ಸಂಜೆವಾಣಿ ವಾರ್ತೆ
ಚಾಮರಾಗನಗರ.ಜೂ.09:- ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಇದೇ ತಿಂಗಳು ದಿನಾಂಕ 29 ,30 ನೇ ಬೆಂಗಳೂರಿನ ಪದ್ಮನಾಭನಗರ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಕಚೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಷ್ಟ್ರೀಯ ಮಹಿಳಾ ಜಾಗರಣ ಕಾರ್ಯಗಾರ ಮತ್ತು ಎಬಿಜಿಪಿ ಕರ್ನಾಟಕ ಪ್ರಾಂತ ಮಹಿಳಾ ಸಮಾವೇಶದ ಸಲುವಾಗಿ ನಮ್ಮಜಿಲ್ಲೆಯಾ ಪೂರ್ವಭಾವಿ ಸದ್ಯಸರ ಸಭೆಯನ್ನು ಅಖಿಲ ಭಾರತೀಯ ಗ್ರಾಹಕ ಪಂಚಾಯಿತ ಮೈಸೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ನೇತೃತ್ವದಲ್ಲಿ ಗ್ರಾಹಕರ ಸಭೆಯನ್ನು ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಕಾರ್ಯಕರ್ತರನ್ನು ಸಮಾಜದಲ್ಲಿ ಮಹಿಳಾ ಗ್ರಾಹಕ ಕಾರ್ಯಕರ್ತೆಯ ಪಾತ್ರವನ್ನು ವಹಿಸಲು, ಕೇಂದ್ರ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ 2024 ರ ಜೂನ್ 29 ರಂದು ರಾಷ್ಟ್ರೀಯ ಮಟ್ಟದ ಮಹಿಳಾ ಜಾಗರಣ ಕಾರ್ಯಾಗಾರವನ್ನು ಅಧ್ಯಯನ ಮಾಡಲು, ಚರ್ಚಿಸಲು, ಅರಿವು ಮೂಡಿಸಲು ಮತ್ತು ಗ್ರಾಹಕ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ಕಂಡುಹಿಡಿಯಲು ಯೋಜಿಸಿದೆ. “ಶೋಷಣ ಮುಕ್ತ ಸಮಾಜ” ಸಾಧಿಸಲು ಯೋಜಿಸಲು. ಹಾಗೆಯೇ ನಾವು 30ನೇ ಜೂನ್ 2024 ರಂದು “ರಾಜ್ಯ ಮಟ್ಟದ ಮಹಿಳಾ ಜಾಗರಣ ಸಮಾವೇಶ” ನಡೆಸುತ್ತಿದ್ದೇವೆ.
ಇದಕ್ಕೆ ಹೆಚ್ಚು ಹೆಚ್ಚು ಮಹಿಳೆಯರು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮಹಿಳಾ ಸಮಾವೇಶಕ್ಕೆ ಭಾಗವಹಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಪ್ರಮುಖ್ ನಾಗಮಣಿ. ಜೆ ಮಾತನಾಡಿ ಹೆಚ್ಚಿನ ಮಹಿಳಾ ಕಾರ್ಯಕರ್ತರನ್ನು ಸಮಾವೇಶದಲ್ಲಿ ಕರೆ ತರುವುದಾಗಿ ತಿಳಿಸಿದರು ಸಮಾವೇಶಕ್ಕೆ ಭಾಗವಹಿಸುವವರು ಇಚ್ಛಿಸುವವರು 7090993966 ಸಂಪರ್ಕಿಸಿ ಸಮಾವೇಶದ ಮಾಹಿತಿ ಪಡೆಯಬಹುದು
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ರಾಜ್ಯ ಸಂಚಾಲಕರಾದ ಡಾಕ್ಟರ್ ಜಿ ವಿ ರವಿಶಂಕರ್, ಸದಸ್ಯರುಗಳಾದ ದಯಾನಂದ್, ಸುರೇಶ್, ದರ್ಶನ್ ಮೂರ್ತಿ, ಜಯಕುಮಾರ್, ವಕೀಲರಾದ ರವೀಂದ್ರ, ಶ್ರೀನಿವಾಸ್ ರಮೇಶ್, ವಲಿನಾಥ್, ನಿವೃತ್ತ ಶಿಕ್ಷಕರಾದ ಮಹಾದೇವಸ್ವಾಮಿ, ಬೈರತಿ ಲಿಂಗರಾಜು, ಚಂದ್ರಶೇಖರ್, ಕೆಂಗೆ ಗೌಡ್ರು, ರಾಮಚಂದ್ರು, ಹೇಮ ಶೆಟ್ಟಿ, ಹಾಗೂ ಹಿರಿಯ ನಾಗರಿಕರುಗಳು ಇನ್ನಿತರರು ಹಾಜರಿದ್ದರು.