ಅಸ್ಪೃಶ್ಯತೆ ಆಚರಣೆ ಪ್ರತಿ ಮಾನವರಿಗೂ ಕಳಂಕವಾದುದು
ಸಂಜೆವಾಣಿ ವಾರ್ತೆ
ಮಂಡ್ಯ: ಭಾರತದಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆ ಆಚರಣೆ ಪ್ರತಿ ಮಾನವರಿಗೂ ಕಳಂಕವಾದುದು ಎಂದು ಮೈಸೂರು ವಿವಿಯ ಪೆÇ್ರ.ಸೋಮಶೇಖರ್ ಕಳಕಳಿ ವ್ಯಕ್ತಪಡಿಸಿದರು.
ನಗರದ ಪರಿಶಿಷ್ಟ ಜಾತಿ,ವರ್ಗಗಳ ನೌಕರರ ಸಂಘದ ಆವರಣದಲ್ಲಿ ಮಂಡ್ಯದಲ್ಲಿ ಜು.18ರಂದು ನಡೆಯುವ ಮಂಡ್ಯ ಜಿಲ್ಲಾ ಮಟ್ಟದ ಪ್ರಥಮ ಬೌದ್ಧ ಸಮ್ಮೇಳನದ ಹಿನ್ನೆಲೆಯಲ್ಲಿಬುದ್ಧ ಅನುಯಾಯಿಗಳು,ಅಂಬೇಡ್ಕರ್ ಅನುಯಾಯಿಗಳು ಹಾಗೂ ಕುವೆಂಪು ಅನುಯಾಯಿಗಳ ಸಭೆಯಲ್ಲಿ ಮಾತನಾಡಿದರು.
ಭಾರತ ಸಂವಿಧಾನದ ಅನುಚ್ಚೇದ 17 ಇಡೀ ಭಾರತದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ. ಆದರೆ,ಭಾರತದಲ್ಲಿ ಇಂದಿಗೂ ಸುಮಾರು 82 ರೀತಿಯ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ. ಅದು ನವ ನಾಗರೀಕತೆಯ ಬೇರೆ ಬೇರೆ ಮಗ್ಗುಲುಗಳಿಂದಲೇ ಹೊರ ಬರುತ್ತಿದೆ ಎಂದು ವಿಷಾಧಿಸಿದರು. ಈ ಬಗ್ಗೆ ಮೂಲ ಭಾರತೀಯರೆಲ್ಲರೂ ಹಿಂದೂ ಧರ್ಮ ತೊರೆದು ತುರ್ತಾಗಿ ಬುದ್ಧನ ಕಡೆ ಮತ್ತು ಆತನ ಧಮ್ಮದ ಕಡೆ ಮುಖ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಭಾರತದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ, ಜಾತೀಯತೆ ಮತೀಯವಾದ,ಕೋಮುವಾದ, ಮೇಲು-ಕೀಳಿನ ತಾರತಮ್ಯ, ಮನುಷ್ಯ ಮನುಷ್ಯರ ನಡುವೆ ಬೇಧಭಾವವಿದೆ.ಇದನ್ನು ಹೋಗಲಾಡಿಸಲು ಅಂಬೇಡ್ಕರ್ ಕೊಟ್ಟಿರುವ ಅಸ್ತ್ರ ಎಂದರೆ, ನಾವುಗಳೆಲ್ಲರೂ ಬುದ್ಧ ಧಮ್ಮದ ಕಡೆ ಮುಖ ಮಾಡುವುದಾಗಿದೆ ಎಂದರು.
ಬಳಿಕ ಚಿಕ್ಕರಸಿಕೆರೆ ಶಿವಲಿಂಗಯ್ಯ ಮಾತನಾಡಿ, ಸರ್ವ ಬೌದ್ಧರು, ಅಂಬೇಡ್ಕರ್ ಅನುಯಾಯಿಗಳು, ಕುವೆಂಪು ಅನುಯಾಯಿಗಳು ಎಲ್ಲರನ್ನೂ ಸಭೆ ಕರೆದಿದ್ದರು. ನಮ್ಮ ಮುಂದೆ ವಿವಿಧ ರೀತಿಯ ಸಾಮಾಜಿಕ ಅನಿಷ್ಟಗಳಿದ್ದು,
ಈ ಎಲ್ಲಾ ಅನಿಷ್ಟಗಳನ್ನು ಹೋಗಲಾಡಿಸಲು ನಮಗೆ ಬುದ್ಧ ಮಾರ್ಗವೊಂದೇ ಉಳಿದಿರುವುದು ಎಂದು ಅಭಿಪ್ರಾಯಪಟ್ಟರು.
ಇದೆ ವೇಳೆ ಅಸ್ಪೃಶ್ಯತೆ ಆಚರಣೆ ವಿರೋಧಿ ಅಭಿಯಾನ ಸಂಬಂಧ ಟಿ-ಶರ್ಟ್ ಗಳನ್ನು ಬಿಡುಗಡೆ ಮಾಡಿ, ನೂರಾರು ಜನರಿಗೆ ವಿತರಿಸ
ಲಾಯಿತು.ಸಭೆಯಲ್ಲಿ ವಿಚಾರವಾದಿಗಳಾದ ಕೆ.ಮಾಯಿಗೌಡ, ಅನ್ನದಾನಿ, ಅಭಿಗೌಡ ಹನಕೆರೆ,ನಾಗರಾಜ ಅಂಬೇಡ್ಕರ್, ಪ್ರಗತಿಪರ ಚಿಂತಕರಾದ ಜೆ.ರಾಮಯ್ಯ, ಡಾ.ಯೋಗೇಂದ್ರ ಕುಮಾರ್, ಮೋಹನ್ ಪ್ರಭುದ್ಧಿ ಮತ್ತು ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.