ಸೇವಾರತ್ನ ಪ್ರಶಸ್ತಿ
ಲಕ್ಷ್ಮೇಶ್ವರ, ಜೂ9: ಶಿರಹಟ್ಟಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಬಿ ಆರ್ ಸಿ ಸಂಪನ್ಮೂಲ ವ್ಯಕ್ತಿ ಮತ್ತು ಶಿಕ್ಷಕ ಬಸವರಾಜ್ ಎಂ ಯರಗುಪ್ಪಿ ಅವರಿಗೆ ಕಪ್ಪತಗಿರಿಯ ಸಾಹಿತ್ಯ ಸಾಂಸ್ಕೃತಿಕ ಕಲಾವೇದಿಕೆ ರಾಜ್ಯ ಘಟಕ ಗದಗ್ ಕಳಸಾಪುರ ಇವರು 2023 24 ನೇ ಸಾಲಿನ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶಿಕ್ಷಕ ಬಿ ಎಂ ಯರಗುಪ್ಪಿ ಯವರು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಮತ್ತು ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರತಿ ದಿನದ ಮಹತ್ವತೆಯ ಕುರಿತು ತಮ್ಮ ವಾಟ್ಸಪ್ ಮತ್ತು ಫೇಸ್ಬುಕ್ ಗಳಲ್ಲಿ ಜನರಿಗೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ಸಮುದಾಯಕ್ಕೆ ತಿಳಿಸುವ ಮೂಲಕ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನು ಪರಿಗಣಿಸಿ ಕಪ್ಪತಗಿರಿಯ ಸಾಹಿತ್ಯ ಸಾಂಸ್ಕೃತಿಕ ಕಲಾವೇದಿಕೆ ಇಂದು ಕಪ್ಪತ ಗುಡ್ಡದಲ್ಲಿ ಜರುಗಲಿರುವ ಪರಿಸರೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ವೇದಿಕೆ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಬಿ ಎಂ ಯರಗುಪ್ಪಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎನ್. ನಾಯಕ ಶಿಕ್ಷಕರ ಸಂಘದ ಅಧ್ಯಕ್ಷ ಬಿಎಸ್ ಹರ್ಲಾಪುರ ಚಂದ್ರಕಾಂತ ನೇಕಾರ ಡಿಡಿ ಲಮಾಣಿ ಬಸವರಾಜ ಯತ್ನಳ್ಳಿ ಎಲ್‍ಎನ್ ನಂದಣ್ಣವರ ಗೀತಾ ಹಲ್ಯಾಳ ಎಸ್ ಎನ್ ಹಿರೇಮಠ ಡಿಎಲ್ ಪಾಟೀಲ್ ಐ .ಏ. ನೀರಲಗಿ ಸೇರಿದಂತೆ ಶಿಕ್ಷಕ ಸಮುದಾಯ ಅಭಿನಂದಿಸಿದೆ.