ಋಣ ತೀರಿಸಲು ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ: ನಂಜೇಗೌಡ
ಮಾಲೂರು.ಜೂ.೯-ತಾಲ್ಲೂಕಿನಲ್ಲಿ ಜನತೆಯ ಪ್ರೀತಿ ವಿಶ್ವಾಸದಿಂದ ನನ್ನ ಮೇಲೆ ನಂಬಿಕೆ ಇಟ್ಟು ೨ನೇ ಬಾರಿಗೆ ಶಾಸಕರಾಗಲು ಅವಕಾಶ ಕಲ್ಪಿಸಿದ್ದು, ತಾಲೂಕಿನ ಜನತೆಯ ಋಣ ತೀರಿಸುವ ಸಲುವಾಗಿ ಅಭಿವೃದ್ಧಿಗೆ ಹೆಚ್ಚಿನ ಅಧ್ಯತೆ ನೀಡಿ ಶ್ರಮಿಸಲಾಗುವುದು ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.
ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ಶಾಸಕರ ಅಭಿಮಾನಿಗಳು ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅಭಿನಂದನೆಗಳು ಸ್ವೀಕರಿಸಿ ಮಾತನಾಡಿದರು.
ಬಡ ರೈತ ಕುಟುಂಬದಲ್ಲಿ ಜನಿಸಿದ ನಾನು ನಮ್ಮ ಕುಟುಂಬವನ್ನು ತಾಲೂಕಿನ ಜನತೆ ಗ್ರಾ.ಪಂ. ಸದಸ್ಯರಿಂದ ಶಾಸಕರಾಗಿ ೨ನ ಬಾರಿಗೆ ಆಯ್ಕೆ ಮಾಡಿ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದೆ.
ಮೊದಲನೇ ಅವಧಿಯಲ್ಲಿ ಶಾಸಕನಾಗಿದ್ದಾಗ ಭ್ರಷ್ಟ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ನಮ್ಮನ್ನು ನಡೆಸಿ ಕೊಂಡ ರೀತಿ ಎಲ್ಲಾವನ್ನು ನಾವು ಮರೆಯುವಂತೆ ಇಲ್ಲ, ಭ್ರಷ್ಟ ಬಿಜೆಪಿಗೆ ರಾಜ್ಯದಲ್ಲಿ ಜನತೆ ಕಲಿಸಿದ ಹಿಂದಿನ ಸರ್ಕಾರ ರಸ್ತೆ ಮಾಡಲು ಬಿಡಲಿಲ್ಲ, ರಸ್ತೆಯಲ್ಲಿ ಬಿದ್ದ ಗುಳಿಗೆ ಜಲ್ಲಿ -ಮಣ್ಣು ಹಾಕಲು ಬಿಡಲಿಲ್ಲ ಈಗ ರಾಜ್ಯದಲ್ಲಿ ನಮ್ಮದೆ ಸರ್ಕಾರದಿಂದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿ ಹದಗೆಟ್ಟ ರಸ್ತೆಗಳ ಡಾಂಬರೀಕರಣ ಮಾಡಲಾಗುತ್ತಿದೆ. ನನಗೆ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ಬೇಡವೆಂದು ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ್ದೆನೆ. ಹೆಚ್ಚಿನ ಅನುದಾನ ತಂದು ತಾಲೂಕಿನ ಅಭಿವೃದ್ಧಿ ಮಾಡುವುದರ ಜೊತೆಗೆ ಜನಸಾಮಾನ್ಯರಿಗೆ ಉತ್ತಮ ಆಡಳಿತ ನೀಡಲು ಭ್ರಷ್ಟಚಾರ ಮುಕ್ತ ತಾಲೂಕನ್ನಾಗಿ ಮಾಡುವುದಾಗಿ ಹೇಳಿದ ಅವರು ಮುಂಬವರು ದಿನಗಳಲ್ಲಿಸಹ ತಾಲೂಕಿನ ಜನತೆ ಸಹಕಾರ ನೀಡಬೇಕು, ಮುಂದಿನ ತಾಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ ಚುನಾವಣೆಗೆ ನಾವು ಒಗ್ಗಟ್ಟಿನಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು. ನನ್ನ ಹುಟ್ಟುಹಬ್ಬದ ಪ್ರಯುಕ್ತ ಪಕ್ಷದ ಕಾರ್ಯಕರ್ತರು ತಾಲೂಕಿನ ಕೆಲವು ಕಡೆ ಗಿಡ ನೆಡುವುದು, ಉಚಿತ ರಕ್ತದಾನ ಮಾಡಿದ್ದಾರೆ.
ತಾಲೂಕಿನ ಜನತೆಯ ಶಾಂತಿ ನೆಮ್ಮದಿ ಮುಖ್ಯ ನಾನು ಸದಾ ಜನರೊಂದಿಗೆ ಇರುವ ಸಾಮಾನ್ಯ ವ್ಯಕ್ತಿಯಾಗಿದ್ದು ನನ್ನ ಹುಟ್ಟುಹಬ್ಬವನ್ನು ಎಂದಿಗೂ ಆಡಂಬರವಾಗಿ ಆಚರಣೆ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ ಆದರೂ ಸಹ ನನ್ನ ಅಭಿಮಾನಿಗಳು ಅಭಿಮಾನದಿಂದ ಹುಟ್ಟುಹಬ್ಬ ಕಾರ್ಯಕ್ರಮವನ್ನು ತಾಲೂಕಿನ ಕೆಲವು ಭಾಗಗಳಲ್ಲಿ ಆಚರಣೆ ಮಾಡಿದ್ದಾರೆ ತಾಲೂಕಿನ ಜನತೆ ಹಾಗೂ ನನ್ನ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಜಿ.ಮಧುಸೂದನ್, ಎಚ್.ಎಂ.ವಿಜಯನರಸಿಂಹ, ಕೆಪಿಸಿಸಿ ಸದಸ್ಯರುಗಳಾದ ಅಂಜನಿ ಸೋಮಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನರಾಯಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹೀಂ ಉಲ್ಲಾ ಖಾನ್, ಜಿ.ಪಂ ಮಾಜಿ ಅಧ್ಯಕ್ಷ ರತ್ನಮ್ಮ ನಂಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಕೆಪಿಸಿಸಿ ಸದಸ್ಯ ಪ್ರವೀಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ಪುರಸಭಾ ಸದಸ್ಯರುಗಳಾದ ಎ.ರಾಜಪ್ಪ, ಆರ್.ವೆಂಕಟೇಶ್, ಜಾಕಿರ್ ಖಾನ್, ಭವ್ಯಶಂಕರ್, ಪರಮೇಶ್, ಕೋಮಲ, ವಿಜಯಲಕ್ಷ್ಮಿ, ಭಾರತೀಯ ಶಂಕರಪ್ಪ, ಚೈತ್ರಾ ರವಿ, ಸಹಕಾರಿ ಯೂನಿಯನ್ ನಿರ್ದೇಶಕ ಗೋವರ್ಧನ್‌ರೆಡ್ಡಿ, ಯೂತ್ ಕಾಂಗ್ರೆಸ್ ಅಧ್ಯಕ್ಷರುಗಳಾದ ತನ್ವೀರ್ ಅಹ್ಮದ್, ಚೇತನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿಜಯಲಕ್ಷ್ಮಿ, ಚಂದ್ರಿಕಾ, ಮುಖಂಡರುಗಳಾದ ಸರ್ದಾರ್‌ಬೇಗ್, ಕೆ.ಎಸ್.ವೆಂಕಟೇಶ್ ಗೌಡ, ಲಿಂಗಾಪುರ ಕೃಷ್ಣಪ್ಪ, ರಾಮೇಗೌಡ, ಟಿ.ಎಂ.ಅಶೋಕ್ ಕುಮಾರ್, ದಿನೇಶ್ ಗೌಡ, ವೆಂಕಟಸ್ವಾಮಿ, ರಾಮಮೂರ್ತಿ, ಹೇಮಾವತಿ, ರಮೇಶ್, ಹರೀಶ್, ಸುನಿಲ್, ಈರಣ್ಣ, ನವೀನ್, ಮಂಜು, ರಾಮು, ಎಂ.ಪಿ.ವಿ ಮಂಜು, ಶೈಲ ಕೃಷ್ಣಪ್ಪ, ಸತೀಶ್, ಪ್ರಗತಿ ಶ್ರೀನಿವಾಸ್, ಶಬೀರ್, ದೊಡ್ಡಮಲ್ಲೆ ಹರೀಶ್, ಇನ್ನಿತರರು ಹಾಜರಿದ್ದರು.
ಬಾಕ್ಸ್
ಪಕ್ಷ ಕಟ್ಟುವ ಕೆಲಸ ಮಾಡಿ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಾಗಿ ಮುಂಬರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಎದುರಿಸುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು ಪಕ್ಷವು ಅಧಿಕಾರಕ್ಕೆ ಬರುವ ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಂತೆ ಭರವಸೆಗಳಲ್ಲಿನ ೫ ಗ್ಯಾರಂಟಿಗಳನ್ನು ಅನುಷ್ಠಾನ ಗೊಳಿಸಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ತಾಲೂಕಿನ ಪ್ರತಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರಪಡಿಸಿ ಅವರಿಗೆ ಆ ಸೌಲಭ್ಯಗಳು ಸಿಗದವರಿಗೆ ದೊರಕುವಂತೆ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಆಡಳಿತದಲ್ಲಿದ್ದು, ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಹೆಚ್ಚುವರಿ ಅನುದಾನ ತಂದಿದ್ದು, ಅಭಿವೃದ್ಧಿ ಕೆಲಸಗಳು ಆರಂಭವಾಗಿದೆ. ತಾಲೂಕಿನ ಜನತೆ ಮತ್ತಷ್ಟು ಶಕ್ತಿ ನೀಡಿದರೆ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ತಂದು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.