ಪುಸ್ತಕೋದ್ಯಮಕ್ಕೂ ಪ್ರಾಶಸ್ತ್ಯ ಸಿಗಲಿ: ಪೆÇ್ರ.ಡಿ.ಎ.ಶಂಕರ್
ಸಂಜೆವಾಣಿ ನ್ಯೂಸ್
ಮೈಸೂರು:ಜೂ.09:- ಸರ್ಕಾರಗಳು ಕೃಷಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪುಸ್ತಕೋದ್ಯಮಕ್ಕೂ ನೀಡಬೇಕು ಎಂದು ಖ್ಯಾತ ವಿಮರ್ಶಕ, ಅನುವಾದಕ ಪೆÇ್ರ.ಡಿ.ಎ.ಶಂಕರ್ ಆಗ್ರಹಿಸಿದರು.
ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ ಮತ್ತು ಕನ್ನಡ ಸಾಹಿತ್ಯದ ಕಲಾಕೂಟವು ಶನಿವಾರ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ತಮ್ಮ ಮೂರು ಕೃತಿಗಳ ಬಿಡುಗಡೆ ಹಾಗೂ 88ನೇ ಜನ್ಮದಿನದ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮನುಷ್ಯ ಬದುಕಲು ಅನ್ನಬೇಕು ನಿಜ. ಆದರೆ ಅನ್ನವೊಂದೇ ಜೀವನಲ್ಲ. ಅನ್ನದ ಜೊತೆಗೆ ವಿವೇಕ, ಸಂತೋಷವೂ ಬೇಕು. ಸೃಜನಶೀಲ ಮನಸ್ಸುಗಳು ಸೃಷ್ಟಿಸುವ ಸಾಹಿತ್ಯವನ್ನು ಜನರಿಗೆ ತಲುಪಿಸಿದಾಗ ಆರೋಗ್ಯವಂತ ಸಮಾಜವೂ ನಿರ್ಮಾಣವಾಗುತ್ತದೆ ಎಂದರು.
ಪುಸ್ತಕೋದ್ಯಮ ಒಂದು ರೀತಿಯಲ್ಲಿ ಆಹಾರ ಸರಪಳಿ ಇದ್ದಂತೆ. ಓದುಗ ಮತ್ತು ಲೇಖಕನ ಮಧ್ಯೆ ಸಂಪರ್ಕಕ್ಕೆ ಪ್ರಕಾಶಕ ಮುಖ್ಯವಾಗುತ್ತದೆ. ಲೇಖಕ ಬರೆದರೂ ಪ್ರಕಾಶಕ ಮುದ್ರಿಸದಿದ್ದಲ್ಲಿ ಅದು ಓದುಗನನ್ನು ತಲುಪುದಿಲ್ಲ. ಆದ್ದರಿಂದ ಸರ್ಕಾರಗಳು ಪುಸ್ತಕೋದ್ಯಮಕ್ಕೆ ನೀಡುವ ಅನುದಾನವನ್ನು ದಾನ ಎಂದು ತಿಳಿಯದೇ ಕರ್ತವ್ಯ ಎಂದು ಮಾಡಬೇಕು. ಸಮುದಾಯದ ಮನಸ್ಸು ಚೆನ್ನಾಗಿದ್ದರೆ ಒಳ್ಳೆಯ ಸರ್ಕಾರಗಳು ಬರುತ್ತವೆ. ಆದ್ದರಿಂದ ಜನರಿಗೆ ಸೃಜನಶೀಲ ಕೃತಿಗಳು ತಲುಪುವಂತೆ ಮಾಡಬೇಕು ಎಂದು ತಿಳಿಸಿದರು. ಪೆÇ್ರ.ಡಿ.ಎ. ಶಂಕರ್ ಅವರ ಡಾಕ್ಟರ್ ಫಾಸ್ಟಸ್, ಸಾಕ್ಷಿ ಬೇಡದ ಮದುವೆ ಮತ್ತು ಬೆನ್ನೇರಿದ ಭೂತ, ಮಹಾಭಾರತದ ಹತ್ತು ಮನೋಜ್ಞ ಕಥೆಗಳು- ಕೃತಿಗಳನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆಗೊಳಿಸಿದರು.
ಜೆಎಸ್‍ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪೆÇ್ರ. ಮೊರಬದ ಮಲ್ಲಿಕಾರ್ಜುನ ಅವರು ಕೃತಿಗಳ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು. ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ ವಂದಿಸಿದರು. ವಿಶ್ರಾಂತ ಕುಲಪತಿ ಪೆÇ್ರ.ಮಹದೇವ, ಸಾಹಿತಿಗಳಾದ ಪೆÇ್ರ.ವಿಕ್ರಂ ಚದುರಂಗ, ವಿಜಯಲಕ್ಷ್ಮಿ ಅರಸ್, ಪೆÇ್ರ.ನೀ. ಗಿರಿಗೌಡ, ಅಣ್ಣಾಜಿಗೌಡ, ಕ್ಯಾತನಹಳ್ಳಿ ರಾಮಣ್ಣ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್, ಪ್ರಕಾಶಕ ನಿಂಗರಾಜು ಚಿತ್ತಣ್ಣನವರ್ ಮೊದಲಾದವರು ಭಾಗವಹಿಸಿದ್ದರು.