ಭವಿಷ್ಯದ ಉಳಿವಿಗಾಗಿ ಪರಿಸರ ಸಂರಕ್ಷಣೆ ಅಗತ್ಯ
ಕೋಲಾರ,ಜೂ,೯-ಪರಿಸರದ ಹವಮಾನ ನಮ್ಮ ಬದುಕಿನ ಒಂದು ಭಾಗವಾಗಿದೆ. ಹವಮಾನದ ವೈಪರಿತ್ಯಗಳಿಗೆ ನಾವೇ ಕಾರಣ ಹೊರತು ದೇವರಲ್ಲ,ನಮ್ಮ ಸ್ವಯಂಕೃತ ಅಪರಾಧಗಳಿಂದಾಗಿ ಹವಮಾನದಲ್ಲಿನ ವ್ಯತ್ಯಾಸಗಳನ್ನು ಕಾಣುವಂತಾಗಿದೆ. ನಮ್ಮ ಭವಿಷ್ಯದ ಪೀಳಿಗೆಗಳ ಉಳಿವಿಗಾಗಿ ಪರಿಸರವನ್ನು ಸಂರಕ್ಷಿಸಿ ಕೊಳ್ಳ ಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಭಿಪ್ರಾಯ ಪಟ್ಟರು,
ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿ ಇವರ ಸಹಯೋಗದಲ್ಲಿ ಅಸರ ಹಾಗೂ ಗ್ರಾಮವಿಕಾಸ ಯೋಜನೆಯಡಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಭಿವೃದ್ದಿ ಅಧಿಕಾರಿಗಳಿಗೆ ಹವಾಮಾನ ಬದಲಾವಣೆ ಹಾಗೂ ಹವಮಾನ ಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರದ ಕುರಿತು ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ದಿಯು ಗ್ರಾಮೀಣ ಪ್ರದೇಶಗಳಿಂದ ಆಗ ಬೇಕು, ಕಟ್ಟಡಕ್ಕೆ ಅಡಿಪಾಯಗಳನ್ನು ಗಟ್ಟಿ ಇರುವಂತೆ ತಳಮಟ್ಟದಿಂದ ಅಭಿವೃದ್ದಿ ಯೋಜನೆಗಳನ್ನು ವಿಸ್ತರಿಸ ಬೇಕು ಎಂದು ಪಂಚಾಯಿತಿಗಳಿಗೆ ಅಧಿಕಾರವನ್ನು ವಿಕೇಂದ್ರೀಕರಣ ಮಾಡಲಾಯಿತು ನೊರಾರು ಅಭಿವೃದ್ದಿ ಯೋಜನೆಗಳನ್ನು ಪಂಚಾಯಿತಿಯಲ್ಲಿ ಸೇರ್ಪಡೆ ಮಾಡಲಾಯಿತು. ನರೇಗಾ ಯೋಜನೆಯೂ ಅತ್ಯುತ್ತಮ ಯೋಜನೆಯಾಗಿದೆ. ಈ ಯೋಜನೆಯ ವ್ಯವಸ್ಥೆಗಳನ್ನು ಸದ್ಬಳಿಸಿ ಕೊಳ್ಳುವಂತ ಜವಾಬ್ದಾರಿಯೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿ.ಡಿ.ಓ.ಗಳದ್ದಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠನಕ್ಕೆ ತರುವ ಮೂಲಕ ಅಭಿವೃದ್ದಿ ಪಡೆಸುವುದು ಅದ್ಯ ಕರ್ತವ್ಯ ಅಗಿದೆ, ಅಭಿವೃದ್ದಿಯ ಜೊತೆಗೆ ಭ್ರಷ್ಟಚಾರ ಎಂಬ ಪೆಡಂಭೂತದ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕಿವಿ ಮಾತು ಹೇಳಿದರು.
ಆಡಳಿತದಲ್ಲಿ ಅಧಿಕಾರಿಗಳ ಮೇಲೆ ಅಕ್ರಮಗಳಿಗೆ ಒತ್ತಡ ಹೇರುವ ಮೂಲಕ ಬಲಿ ತೆಗೆದು ಕೊಳ್ಳಲಾಗುತ್ತಿದೆ ಎಂಬುವುದಕ್ಕೆ ವಾಲ್ಮಿಕಿ ಅಭಿವೃದ್ದಿ ನಿಗಮದಲ್ಲಿನ ೧೮೭ ಕೋಟಿ ರೂ ಅನುದಾನವನ್ನು ಬೇರೆಯವರ ಖಾತೆಗೆ ವರ್ಗಾಯಿಸುವ ಭ್ರಷ್ಟಚಾರಕ್ಕೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿ ಕೊಳ್ಳುವ ಮೂಲಕ ಬಲಿಯಾಗಿರುವುದು ಜನಜನಿತವಾಗಿದೆ. ಈ ಹಿಂದೆ ಕೋಲಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪಾಂಡುರಂಗ ಎಂಬುವರು ಇದೇ ರೀತಿಯ ಭ್ರಷ್ಟಚಾರಕ್ಕೆ ಸಿಲುಕಿ ಜೈಲಿನಲ್ಲಿಯೇ ಕೊನೆಯುಸಿರುವ ಎಳೆಯುವ ಮೂಲಕ ಯಾರೂ ಮಾಡಿದ ಪಾಪಕ್ಕೆ ಇನ್ಯಾರೂ ಬಲಿಯಾಗಿದ್ದರು ಎಂದು ನೆನಪಿಸಿ ಕೊಂಡ ಅವರು ಇಂಥಹ ಭ್ರಷ್ಟಚಾರಗಳಿಗೆ ಬಲಿಯಾಗದಂತೆ ಜಾಗೃತರಾಗಿರ ಬೇಕೆಂದು ತಿಳಿಸಿದರು,
ಕೆರೆ,ಕಾಲುವೆಗಳನ್ನು ಒತ್ತುವರಿ ಮಾಡದೆ, ಗಿಡಮರಗಳನ್ನು ನಾಳ ಪಡಿಸದೆ ಉಳಿಸಿ ಕೊಂಡಿದ್ದರೆ ಕೊಳವೆ ಬಾವಿಗಳನ್ನು ಪಾತಳದ ಅಳಕ್ಕೆ ಕೊರೆಯ ಬೇಕಾಗಿರಲಿಲ್ಲ. ಬೆಳೆಗಳಿಗೆ ರಾಸಾಯನಿಕ, ಔಷಧಿಗಳನ್ನು ಸಿಂಪಡಿಸ ಬೇಕಾದ ದುರ್ಗತಿ ಬರುತ್ತಿರಲಿಲ್ಲ. ನಾವು ಇಂದು ಕೊಳಚೆ ನೀರನ್ನು ಶುದ್ದೀಕರಿಸಿ ಕೊಂಡು ಬಳಿಸುವಂತ ಕರ್ಮವೂ ಇರುತ್ತಿರಲಿಲ್ಲ ಎಂದು ಕುಟುಕಿದರು,
ಗಿಡಮರಗಳನ್ನು ನಾಶ ಪಡೆಸಿದ ಹಿನ್ನಲೆಯಲ್ಲಿ ಅರಣ್ಯದ ಪ್ರಾಣಿಗಳು ನಾಡಿಗೆ ಬರುವಂತಾಗಿದೆ. ಹವಮಾನ ವೈಪರಿತ್ಯಗಳಿಂದಾಗಿ ಎತ್ತಿನ ಹೊಳೆ, ಕೆ.ಸಿ.ವ್ಯಾಲಿ, ಯರ್‌ಗೋಳ್ ಮುಂತಾದವರು ಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡ ಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಉಂಟಾಗುತ್ತಿರಲಿಲ್ಲ. ಈಗಲು ಗಡಿಭಾಗದಲ್ಲಿನ ಯರ್‌ಗೋಳ್ ಸುತ್ತಮುತ್ತಲಿನ ಪರಿಸರವು ಮಲೆನಾಡು ನೆನಪಿಗೆ ತರುತ್ತದೆ. ಮುಳಬಾಗಿಲಿನಲ್ಲೂ ಸಹ ಹೀಗೆ ಇರುವುದನ್ನು ಕಾಣಬಹುದಾಗಿತ್ತು ಎಂದರು,
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಬಿ. ಮಾತನಾಡಿ ಹವಮಾನ ವೈಪರಿತ್ಯಗಳು ರಾಷ್ಟ್ರ ಮಟ್ಟದಿಂದ ಗ್ರಾಮ ಪಂಚಾಯತ್ ಮಟ್ಟದವರೆಗೆ ಬರುವುದರಿಂದ ಪರಿಸರವನ್ನು ಉಳಿಸಿ ಬೆಳೆಸಿ ಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಪರಿಸರ ಉಳಿಸಿದರೆ ನಮ್ಮ ಉಳಿವು ಸಾಧ್ಯ ಎಂಬ ಅರಿವು ಇರುವಂತಾಗ ಬೇಕೆಂದರು. ಹವಮಾನ ವೈಪರಿತ್ಯಗಳಿಗೆ ಮಾನವನ ಅತಿಕ್ರಮಣಗಳು ಕಾರಣ ವಾಗಿದೆ. ಸಾಮಾನ್ಯ ತಾಪಮಾನಗಳು ಬದಲಾವಣೆಯಿಂದ ಉಷ್ಟಾಂಶಗಳ ನಿಯಂತ್ರಣದಲ್ಲಿರದೆ ಹೆಚ್ಚಳವಾಗುವುದು ಸೂರ್ಯನ ಕಿರಣಗಳು ಭೂಮಿಯಿಂದ ವಾಪಾಸ್ ಅಗದೆ ಇಂಗಾಲವಾಗಿ ಮಾನವನ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅಕಾಲಿಕ ಮಳೆ, ಜಡಿ ಮಳೆ, ಬರಗಾಲ ಇತ್ಯಾದಿಗಳಿಗೆ ಕಾರಣವಾಗಲಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿಚಂದ್ರನ್, ಆಸರ ಸಂಸ್ಥೆಯ ಯೋಜನೆ ಮತ್ತು ಕಾರ್ಯಚರಣೆ ವ್ಯವಸ್ಥಾಪಕ ಕೆ.ಸುದೀಪ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜೋಸೆಪ್.ಎ. ಉಪಸ್ಥಿತರಿದ್ದರು,