ಮಕ್ಕಳು ಆದರ್ಶ ವ್ಯಕ್ತಿಗಳಾಗಿ ಸಮಾಜ ಸೇವಕರಾಗಲಿ
ಚಿಂತಾಮಣಿ.ಜೂ.೯- ಕಷ್ಟಪಟ್ಟು ಓದಿ ಗ್ರಾಮಕ್ಕೆ ಹಾಗೂ ತಂದೆ-ತಾಯಿಗೆ ಗೌರವ, ಉತ್ತಮ ಪ್ರಜೆ, ಆದರ್ಶ ವ್ಯಕ್ತಿ ಸಮಾಜಸೇವಕರಾಗಬೇಕೆಂದು ಮುನಗನಹಳ್ಳಿ ಟಿ.ಎನ್.ರಾಮಪ್ಪ ರವರ ಪುತ್ರ ಟಿ.ಎನ್.ಆರ್ ಸಿಲ್ಕ್ & ಸ್ಯಾರೀಸ್ ಸಂಸ್ಥಾಪಕ ಶ್ರೀನಿವಾಸರೆಡ್ಡಿ ತಿಳಿಸಿದರು.
ತಾಲ್ಲೂಕಿನ ಟಿ.ಎನ್.ಆರ್ ಸಂಸ್ಥೆಯ ಮುನಗನಹಳ್ಳಿ ಗ್ರಾಮದ ದಿವಂಗತ ಟಿ.ಎನ್.ರಾಮಪ್ಪ ರವರ ೮೩ ನೇ ಹುಟ್ಟುಹಬ್ಬದ ಪ್ರಯುಕ್ತ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಲೇಖನಿ ಸಾಮಾಗ್ರಿಗಳು ವಿತರಣೆ ಮಾಡಿ ಮಾತನಾಡಿ ನಮ್ಮ ತಂದೆಯಾದ ಟಿ.ಎನ್.ರಾಮಪ್ಪ ಬಾಲ್ಯದಲ್ಲಿದ್ದಾಗ ಬಡತನದ ಕಾರಣ ಬೀದಿದೀಪಗಳ ಕೆಳಗೆ ವಿದ್ಯಾಭ್ಯಾಸ ಮಾಡಿದ್ದರೂ ಅದರ ಪ್ರತಿಫಲ ಉತ್ತಮ ಪ್ರಜೆಯಾಗಿದ್ದಾರೆ ಅವರು ಟಿ.ಎನ್.ಆರ್ ಸಿಲ್ಕ್ & ಸ್ಯಾರೀಸ್ ಸಂಸ್ಥೆಯನ್ನು ಸ್ಥಾಪಿಸಿದ ಉದ್ದೇಶ ಬಡವರಿಗೆ ಕೆಲಸ ಜೊತೆಗೆ ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸುಮಾರು ೨ ಸಾವಿರಕ್ಕೂ ಕಾರ್ಮಿಕರು ನಮ್ಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮ ತಂದೆಯವರು ಪ್ರತಿವರ್ಷ ಕೆಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಲೇಖನ ಸಾಮಾಗ್ರಿಯ ಜೊತೆಗೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. ಅವರಂತೆ ನಾವು ಇಂದು ಅದೇ ದಾರಿಯಲ್ಲಿ ನಡೆಯುತ್ತಿದ್ದೇವೆ. ಮಕ್ಕಳು ಕಷ್ಟಪಟ್ಟು ವಿದ್ಯಾಬ್ಯಾಸ ಮಾಡಿ ಉತ್ತಮ ಪ್ರಜೆಯಾಗಿ ಮುಂದಿನ ದಿನಗಳಲ್ಲಿ ತಾವು ಕೂಡ ಇಂತಹ ಪದ್ಧತಿಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾ.ಪಂ ಇ.ಒ ಆನಂದ ಮಾತನಾಡಿ, ಕುಂಡಮಲ್ಲ ರಂಗಾರಾವ್ ಬ್ರಾಹ್ಮಣ ಜನಾಂಗದಲ್ಲಿ ಜನಿಸಿದ್ದು ತನ್ನ ಜೀವನದಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ದಲಿತರು, ಹಿಂದುಳಿದ ವರ್ಗದ ಜೊತೆಗೆ ಅತಿ ಕಡುಬಡವರ ಮಕ್ಕಳಿಗೆ ವಿದ್ಯಾಭ್ಯಾಸ ಕಡ್ಡಾಯವಾಗಿ ಸಿಗಲೇಬೇಕೆಂಬ ಗುರಿಯನ್ನಿಟ್ಟುಕೊಂಡು ತಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸಗಳನ್ನು ಕೊಡಿಸಿದ್ದರು. ಅವರ ಆಸೆ ಒಂದೇ ತನ್ನ ಸಾವಿನ ಸಮಾದಿಯ ಮುಂದೆ ಕಡುಬಡವರು ಉತ್ತಮ ಅಧಿಕಾರಿದಲ್ಲಿದ್ದುಕೊಂಡು ತಾವು ಓಡಾಡುವ ಕಾರು, ಬೈಕ್‌ಗಳಿಂದ ಬರುವ ದೂಳು ಅವರ ಸಮಾಧಿಯ ಮೇಲೆ ಬಿದ್ದಾಗ ಅವರಿಗೆ ಆತ್ಮಶಾಂತಿಯಾಗುತ್ತದೆ ಎಂದಿದ್ದರು. ವಿದ್ಯೆಯ ಜೊತೆಗೆ ಸಂಸ್ಕಾರ ಮುಖ್ಯ. ಶ್ರೀರಾಮಚಂದ್ರ ಶ್ರೀಲಂಕದಲ್ಲಿದ್ದಾಗ ಅಲ್ಲಿಯೇ ಉಳಿದುಕೊಳ್ಳುವ ಬದಲು ತನ್ನ ಹುಟ್ಟೂರಿಗೆ ಬಂದು ಸಾರ್ವಜನಿಕರಿಗೆ ಸೇವೆ ಮಾಡಬೇಕೆಂಬ ಉದ್ದೇಶದಿಂದ ಬಂದರು ಎಂದರು
ಈ ಕಾರ್ಯಕ್ರಮದಲ್ಲಿ ಟಿ.ಎನ್.ಆರ್ ಸಿಲ್ಕ್ & ಸ್ಯಾರೀಸ್ ದಿವಂಗತ ಟಿ.ಎನ್.ರಾಮಪ್ಪ ರವರ ಸಂಬಂಧಿಕರಾದ ಟಿ.ನಾರೆಪ್ಪ, ಶ್ರೀರಾಮರೆಡ್ಡಿ, ರಮೇಶ್, ಗ್ರಾಮದ ಮುಖಂಡರಾದ ವೆಂಕಟರೆಡ್ಡಿ, ನಾರಾಯಣರೆಡ್ಡಿ, ಮುನಿನಾರಾಯಣಪ್ಪ, ಕೃಷ್ಣಾರೆಡ್ಡಿ, ಶ್ರೀನಿವಾಸ, ಕೆಂಪರೆಡ್ಡಿ, ಎಸ್.ರಾಮಕೃಷ್ಣಪ್ಪ ಶಾಲೆಯ ಮುಖ್ಯಸ್ಥರಾದ ಜಯದೇವ್ ಸಿ.ಆರ್.ಪಿ ಲಕ್ಷ್ಮಣ್‌ರೆಡ್ಡಿ ಮತ್ತು ಮಂಜುಳ ಶಿಕ್ಷಕಿಯರು ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಹಾಜರಿದ್ದರು.