ಹಾಲು ಮತ ಧರ್ಮ ಜಗತ್ತಿಗೆ ಶ್ರೇಷ್ಠ ಸಂಸ್ಕಾರದ ಕೊಡುಗೆ ನೀಡಿದೆ:ಸಿದ್ಧರಾಮಾನಂದಪುರಿ ಶ್ರೀ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.9:ಆಚಾರ-ವಿಚಾರ, ಸಂಸ್ಕøತಿಯಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಈ ಜಗತ್ತಿಗೆ ಶ್ರೇಷ್ಠ ಸಂಸ್ಕಾರವನ್ನು ಕೊಡುಗೆ ನೀಡಿದ ಧರ್ಮ ಹಾಲುಮತ ಧರ್ಮವಾಗಿದೆ. ಹಾಲುಮತಸ್ಥರು ಹಾಲಿನಂತಹ ಪರಿಶುದ್ಧವಾದ ಮನಸ್ಸುಳ್ಳವರು. ದೇವರ ಮೇಲೆ ನಂಬಿಕೆ ಇಟ್ಟು ದುಡಿದರೆ ಜೀವನ ಪಾವನವಾಗುತ್ತದೆ ಎಂದು ತಿಂಥಣಿ ಬ್ರಿಡ್ಜ್‍ದ ಕನಕ ಗುರು ಪೀಠದ ಪರಮಪೂಜ್ಯರಾದ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಹೇಳಿದರು.
ಜಾತ್ರಾ ಮಹೋತ್ಸವ, ಧರ್ಮ ಸಭೆಗಳು ಮೇಲಿಂದ ಮೇಲೆ ನಡೆಯುವುದರಿಂದ ಪರಂಪರೆಯ ಇತಿಹಾಸ ಉಳಿಯುತ್ತದೆ. ಹಾಲುಮತ ಧರ್ಮದಲ್ಲಿ ಕಂಬಳಿ, ಡೊಳ್ಳು, ಭಂಡಾರಕ್ಕೆ ಪೂಜ್ಯನೀಯ ಸ್ಥಾನವಿದೆ. ಹೆಣ್ಣುಮಕ್ಕಳಿಗೆ ಪೂಜೆಯ ಸ್ಥಾನವನ್ನು ಕೊಟ್ಟು, ಹೆಣ್ಣುಮಕ್ಕಳನ್ನು ಗೌರವಿಸುವ ಧರ್ಮ ಹಾಲುಮತ ಧರ್ಮ. ಹಾಲುಮತ ಧರ್ಮದಲ್ಲಿ ಹೆಣ್ಣುಮಕ್ಕಳಿಗೆ ಪೂಜನೆಯ ಸ್ಥಾನವಿದೆ ಎಂದು ತಿಳಿಸಿದರು.
ವಿಜಯಪುರ ತಾಲೂಕಿನ ಗುಗದಡ್ಡಿ ಗ್ರಾಮದಲ್ಲಿ ಲಾಯಮ್ಮ ತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಾಹಿತಿ ಎ.ಎಚ್. ಕೊಳಮಲಿ ಅವರು ಧರ್ಮಸಭೆಯಲ್ಲಿ ಭಕ್ತಿಯ ಪರಂಪರೆ ಕುರಿತು ವಿಶೇಷ ಉಪವಾಸವನ್ನು ನೀಡಿ, ರಕ್ತ ಸಂಬಂಧಕ್ಕಿಂತಲೂ ಭಕ್ತಿಯ ಸಂಬಂಧ ಬಹಳ ಶ್ರೇಷ್ಠವಾದದ್ದು. ಕನಕದಾಸರು ಶ್ರೇಷ್ಠವಾದ ಭಕ್ತಿಯಿಂದ ಕೃಷ್ಣ ದೇವರನ್ನೇ ಒಲಿಸಿಕೊಂಡರು. ಮಾಳಿಂಗರಾಯರು ಶಿವ-ಪಾರ್ವತಿಯರಿಂದ ಮುಂಡಾಸ ಸುತ್ತಿಸಿಕೊಂಡರು. ನಿರ್ಮಲ ಮನಸ್ಸಿನಿಂದ ದೇವರ ಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ. ಆಧ್ಯಾತ್ಮಿಕತೆ ಧಾರ್ಮಿಕತೆ ಜೊತೆಗೆ ಇಂದಿನ ಯುವಕರಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಬೇಕೆಂದು ಹೇಳಿದರು.
ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷ ರಾಜು ಕಂಬಾಗಿ, ಲಾಯಮ್ಮ ದೇವಿ ದೇವಸ್ಥಾನ ಕಮೀಟಿ ಅಧ್ಯಕ್ಷ ಕಲ್ಲಪ್ಪ ಹರನಾಳ, ವಿಠಲ ಗುಣದಾಳ, ವಿಠಲಗೌಡ ಬಿರಾದಾರ, ದುಂಡಪ್ಪ ಕುಮಟಗಿ, ಯಲ್ಲನಗೌಡ ಬಿರಾದಾರ, ಸಿದ್ದಪ್ಪ ದೇಗಿನಾಳ, ಪುನೀತ ಚವ್ಹಾಣ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದ್ಯಸರು, ಜಾತ್ರಾ ಕಮೀಟಿಯವರು, ಗ್ರಾಮದ ಜನರು ಉಪಸ್ಥಿತರಿದ್ದರು.