ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷ ನಾಯಕರಾಗಲಿ: ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌
ಕಲಬುರಗಿ:ಜೂ.8:ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ದೇಶಾದ್ಯತ ಕಾಂಗ್ರೆಸ್‌ಗೆ ಅಭೂತಪೂರ್ವ ಜನ ಮನ್ನಣೆ ದೊರಕಿದೆ ಎಂದಿರುವ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಧರ್ಮಸಿಂಗ್‌ ಅವರು, ಕಾಂಗ್ರೆಸ್‌ನ ಜಯಭೇರಿ ಹಿಂದೆ ಭಾರತ ಜೋಡೋ ಪಾದಯಾತ್ರೆ ಭಾರಿ ಕೆಲಸ ಮಾಡಿದೆ, ಲೋಕಸಭೆಯಲ್ಲಿ ರಾಹುಲ್‌ ಗಾಂಧಿಯವರು ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಳ್ಳಬೇಕು. ಆಗ ದೇಶಾದ್ಯಂತ ಕಾಂಗ್ರೆಸ್‌ ಪಕ್ಷ ಇನ್ನೂ ಬಲಶಾಲಿಯಾಗಿ ಬೆಳೆಯೋದರಲ್ಲಿ ಸಂಶಯವೇ ಇಲ್ಲವೆಂದು ಅಭಿಪಯ್ರಾಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರಂಕಿ ದಾಟಿದ್ದರ ಹಿಂದೆ ರಾಹುಲ್‌ ಗಾಂಧಿಯವರು ದೇಶಾದ್ಯಂತ ನಡೆಸಿರುವ ಭಾರತ ಜೋಡೋ ಪಾದಯಾತ್ರೆಯ ಕೊಡುಗೆ ಅಡಗಿದೆ. 2 ವರ್ಷದ ಹಿಂದೆ ರಾಹುಲ್‌ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರ್‌ ವರೆಗೂ ನಡೆದ 4 ಸಾವಿರ ಕಿಮೀ ಭಾರತ ಜೋಡೆ, 6, 600 ಕಿಮಿ ಭಾರತ ಜೋಡೆ ನ್ಯಾಯಯಾತ್ರೆಯಲ್ಲಿ ರಾಹುಲ್‌ ಗಾಂಧಿ ದೇಶದುದ್ದಲಗ್ಗೂ ಸಂಚರಿಸ ಜನರ ನಾಡಿ ಮಿಡಿತ ಅರಿತಿದ್ದಾರೆ. ಜನರ ಸಮಸ್ಯೆ ಹತ್ತಿರದಿಂದ ಕಂಡಿದ್ದು ಅವುಗಳ ಪರಿಹಾರದ ಬಗ್ಗೆ ಸ್ಪಷ್ಟ ಚಿಂತನೆ ಹೊಂದಿದ್ದಾರೆ.
ಕಾಂಗ್ರೆಸ್‌ ಪಕ್ಷ ಲೋಸಭೆಯಲ್ಲಿ ನಾರಿ ನ್ಯಾಯ, ಯುವ ನ್ಯಾಯ, ಕಾರ್ಮಿಕ ನ್ಯಾಯ, ದೇಶದ ಬಿಪಿಎಲ್‌ ಮಹಿಳೆಯರಿಗೆ 1 ಲಕ್ಷ ರು ಹಣ ನೀಡೋ ಘೋಷಣೆ ಸೇರಿದಂತೆ ಪಕ್ಷ ಘೋಷಿಸಿರುವ ಎಲ್ಲಾ ಗ್ಯಾರಂಟಿ ಯೋಜನೆಗಳ ಹಿಂದೆ ರಾಹುಲ್‌ ಗಾಂಧಿಯವರ ಭಾರತ ಜೋಡೋ ಯಾತ್ರೆಗಳ ಅಪಾರ ಅನುಭವ ಅಡಗಿದೆ.
ಹೀಗಾಗಿ ರಾಹುಲ್‌ ಗಾಂಧಿಯವರು ಪ್ರಸಕ್ತ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಹದ್ದೆ ಅಲಂಕರಿಸಿ ಕಾರ್ಯಭಾರ ವಹಿಸಿಕೊಂಡಲ್ಲಿ ಅದರಿಂ ದೇಶಾದ್ಯಂತ ಕಾಂಗ್ರೆಸ್‌ನ ಎಲ್ಲಾ ವರ್ಗದ, ಎಲ್ಲಾ ವಯೋಮಾನದ ಕಾರ್ಯಕರ್ತರಲ್ಲಿಉತ್ಸಾಹ ಇನ್ನಷ್ಟೂ ಪುಟಿದೇಳಲಿದೆ. ಎಐಸಿಸಿ ಅಧ್ಯಕ್ಷರಾಗಿ ಹಿರಿಯರಾದ ಖರ್ಗೆಜಿಯವಿದ್ದಾರೆ. ರಾಹುಲ್‌ ಗಾಂಧಿಯವರು ವಿರೋಧ ಪಕ್ಷದ ನಾಯಕರಾಗಿ ಜವಾಬದಾರಿ ಹೊತತಲ್ಲಿ ಬರುವ ದಿನಗಳಲ್ಲಿ ಕಾಂಗ್ರೆಸ್‌ ದೇಶವ್ಯಾಪಿ ಇನ್ನೂ ಜನರ ಮನೆ, ಮನ ತಲುಪೋದರಲ್ಲಿ ಎರಡು ಮಾತಿಲ್ಲ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.