ಸಾರಿಗೆಸಂಸ್ಥೆ ಚಾಲಕನಿಗೆ 1 ತಿಂಗಳು ಜೈಲು
ಕಲಬುರಗಿ,ಜೂ 8: ರಸ್ತೆಯಲ್ಲಿ ಹೊರಟ್ಟಿದ್ದ ಎತ್ತಿಗೆ ಡಿಕ್ಕಿ ಹೊಡೆಸಿ ಎತ್ತು ಸಾವನ್ನಪ್ಪಿದ್ದಕ್ಕೆ ಸಾರಿಗೆ ಸಂಸ್ಥೆ ಬಸ್ ಚಾಲಕನಿಗೆ 3 ಸಾವಿರ ರೂ ದಂಡ ಮತ್ತು 1 ತಿಂಗಳು ಜೈಲು ಶಿಕ್ಷೆ ವಿಧಿಸಿ ಚಿಂಚೋಳಿಯ ಜೆಎಂಎಫ್‍ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಹುಮನಾಬಾದ್ ತಾಲೂಕಿನ ಹಿಪ್ಪರಗಿ ಗ್ರಾಮದ ಚಾಲಕ ಪ್ರಕಾಶ ಬಾಜೇನೂರು ಎಂಬುವವರು 2022 ರ ಮಾರ್ಚ 29 ರಂದು ಎತ್ತಿಗೆ ಡಿಕ್ಕಿ ಹೊಡೆಸಿ ಎತ್ತಿಗೆ ಏನೂ ಆಗಿಲ್ಲವೆಂದು ಹೊರಟು ಹೋದಿದ್ದರು.ಸ್ವಲ್ಪ ಸಮಯದಲ್ಲಿ ಎತ್ತು ಸಾವನ್ನಪ್ಪಿತ್ತು.ಅಪಘಾತ ಆರೋಪ ಸಾಬೀತಾದ ಹಿನ್ನೆಲೆ ಎತ್ತಿನ ವಾರಸುದಾರರಿಗೆ ಪರಿಹಾರವಾಗಿ 20 ಸಾವಿರ ರೂ ಹಣ ನೀಡುವಂತೆ ಪ್ರಧಾನ ಸಿವಿಲ್ ನ್ಯಾಯಾಧೀಶ ದತ್ತಕುಮಾರ ಅವರು ಆದೇಶ ನೀಡಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ ಅವರು ವಾದ ಮಂಡಿಸಿದ್ದರು.