ಡೋಣಿ ನದಿಯ ಪ್ರವಾಹಕ್ಕೆ ಕೆಳಮಟ್ಟದ ಸೇತುವೆ ಜಲಾವೃತ
ತಾಳಿಕೋಟೆ:ಜೂ.8: ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಮತ್ತು ಶುಕ್ರವಾರರಂದು ಸುರಿದ ಮಳೆಯಿಂದ ಡೋಣಿ ನಧಿಯಲ್ಲಿ ಪ್ರವಾಹವು ಹೆಚ್ಚುತ್ತಾ ಸಾಗಿದ್ದು ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿ ರಸ್ತೆ ಸಂಪರ್ಕಿತ ತಾಳಿಕೋಟೆಯ ಕೆಳಮಟ್ಟದ ಸೇತುವೆಯು ಪ್ರವಾಹಕ್ಕೆ ಸಂಪೂರ್ಣ ಜಲಾವೃತಗೊಂಡಿದೆ.
ನಿತ್ಯ ಸಾವಿರಾರು ವಾಹನಗಳ ಓಡಾಟವಿರುವ ಈ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ವಾನಗಳು ಮತ್ತು ಕಾರು, ಜೀಪು ಅಲ್ಲದೇ ಇನ್ನಿತರ ಸಣ್ಣ ಪುಟ್ಟ ವಾಹನಗಳು ಹೆಚ್ಚಿಗೆ ಓಡಾಡುತ್ತವೆ ಸದರಿ ರಾಜ್ಯ ಹೆದ್ದಾರಿಗೆ 1990ರಲ್ಲಿಯೇ ಡೋಣಿ ನಧಿಗೆ ಅಡ್ಡಲಾಗಿ ಮೇಲಸೇತುವೆ ನಿರ್ಮಿಸಲಾಗಿದ್ದು ಸದರಿ ಸೇತುವೆಯು ಕಳೆದ 2 ವರ್ಷಗಳ ಹಿಂದೆ ಕುಸಿಯುವ ಹಂತ ತಲುಪಿದ್ದರಿಂದ ವಾಹನ ಓಡಾಟ ಸ್ಥಗಿತಗೊಳಿಸಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಕೆಳಮಟ್ಟದ ಸೇತುವೆಯ ಮೇಲೆ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿತ್ತು ಸದರಿ ಕೆಳಮಟ್ಟದ ಸೇತುವೆಯ ಮೇಲೆ ಡೋಣಿ ನಧಿಯ ಪ್ರವಾಹದದಿಂದ ಜಲಾವೃತಗೊಂಡಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡತಾಗಿದೆ.
ಪ್ರವಾಹದಲ್ಲಿಯೇ ವಾಹನಗಳ ಓಡಾಟ
ಡೋಣಿ ನಧಿಯ ಪ್ರವಾಹದಿಂದ ಕೆಳಮಟ್ಟದ ಸೇತುವೆ ಜಲಾವೃತಗೊಂಡಿದ್ದರೂ ಕೂಡಾ ಕೆಲವು ವಾಹನ ಸವಾರರು ಬಂಡ ದೈರ್ಯಮಾಡಿ ಪ್ರವಾಹದ ನೀರಿನಲ್ಲಿಯೇ ಚಲಿಸುತ್ತಿರುವದು ಕಂಡುಬಂದಿದೆ. ಸದರಿ ಸೇತುವೆ ಸಂಪರ್ಕ ಕಡಿತಗೊಂಡರೂ ಕೂಡಾ ಮೂಕೀಹಾಳ, ಹಡಗಿನಾಳ ಮಾರ್ಗದಿಂದ ತಾಳಿಕೋಟೆ ಪಟ್ಟಣ ಸಂಪರ್ಕಕ್ಕೆ 10 ಕೀಲೂ ಮೀಟರ್ ದೂರದ ಸಂಪರ್ಕ ವಿದ್ದರೂ ಅತ್ತ ಯಾರೂ ತಿರುಗಾಡುತ್ತಿಲ್ಲಾ ಸದರಿ ಮೂಕೀಹಾಳದಿಂದ ತಾಳಿಕೋಟೆಯ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಆ ರಸ್ತೆಯಲ್ಲಿ ವಾಹನಗಳನ್ನು ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ.
ಕೂಡಲೇ ಮೇಲಸೇತುವೆ ದುರಸ್ಥಿಗೊಳಿಸಿ
ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿಯ ಡೋಣಿ ನಧಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ ಸೇತುವೆಯು ಕುಸಿಯುವ ಹಂತಕ್ಕೆ ತಲುಪಿ 2 ವರ್ಷ ಕಳೆದಿದೆ 2 ವರ್ಷದಿಂದಲೂ ಸೇತುವೆಯ ಮೇಲೆ ಸಂಚಾರ ಬಂದ್ ಮಾಡಲಾಗಿದೆ ಕೂಡಲೇ ಮೇಲಸೇತುವೆ ಪೂನರ್ ನಿರ್ಮಾಣ ಕಾರ್ಯ ಸೀಘ್ರವೇ ಕೈಗೊಳ್ಳಬೇಕು ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕೆಂದು ಪ್ರಜ್ಞಾವಂತ ನಾಗರಿಕರ ಒತ್ತಾಯಿಸಿದ್ದಾರೆ.