ಮಳೆಗಾಲ ಆರಂಭ ಮಾರ್ಕಬ್ಬಿನಹಳ್ಳಿ ಗ್ರಾಮಸ್ಥರಿಗೆ ಆಂತಕ ಭಯ ಶುರು..!
ಮಹಾಂತೇಶ ಹಾದಿಮನಿ
ದೇವರಹಿಪ್ಪರಗಿ :ಜೂ.8:ಚುನಾವಣೆ ಬಂದಾಗ ರಾಜಕಾರಣಿಗಳು ನೀಡುವ ಭರವಸೆಗಳು ಅವರೊಂದಿಗೇ ಹೋಗಿರುತ್ತವೆ ಎನ್ನುವುದು ಹಳ್ಳಿಗರ ಆರೋಪ.
ಮಾರ್ಕಬ್ಬಿನಹಳ್ಳಿ ಬಳಿ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಶಾಶ್ವತ ಸೇತುವೆ ನಿರ್ಮಿಸಿಕೊಡಿ ಎಂಬ ನಮ್ಮ ಬೇಡಿಕೆಯನ್ನು ಯಾರು ಇದುವರೆಗೆ ಇಡೇರಿಸುತ್ತಿಲ್ಲ ಎಂದ ಗ್ರಾಮಸ್ಥರು.
ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮಸ್ಥರ ಪರಿಸ್ಥಿತಿ ಮಳೆಗಾಲ ಶುರುವಾಯಿತು ಎಂದರೆ ಭಯ ಆತಂಕ ಶುರು ಆಗುತ್ತದೆ.ಊರು ಮುಂದಿನ ಹಳ್ಳಕ್ಕೆ ಸೇತುವೆ ಇಲ್ಲದ ಕಾರಣ ತುಂಬಿ ಹರಿಯುವ ಹಳ್ಳ ದಾಟುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಪ್ರತಿ ವರ್ಷ ಉಕ್ಕಿ ಹರಿಯುವ ಈ ಹಳ್ಳದಿಂದ ಗ್ರಾಮಸ್ಥರು ತೊಂದರೆಗೆ ಒಳಗಾಗುತ್ತಿದ್ದಾರೆ.ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ತೆರಳ ಬೇಕೆಂದರೆ ಹಳ್ಳ ತುಂಬಿ ಹರಿಯುವುದರಿಂದ ಪಟ್ಟಣಕ್ಕೆ ಸಂಪರ್ಕಿಸಲು ಸಾಧ್ಯವಾಗುದ್ದಿಲ್ಲ.
ಈ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ, ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಉರ್ದು ಶಾಲೆಗಳು ಇದ್ದು.ಶಿಕ್ಷಕರು ಪಟ್ಟಣದಿಂದ ಈ ಗ್ರಾಮಕ್ಕೆ ಬರಬೇಕಾದರೆ ಈ ಹಳ್ಳದಾಟೆ ಬರಬೇಕು.ಹಳ್ಳದಲ್ಲಿ ನೀರು ತುಂಬಿ ಹರಿವುದರಿಂದ ಊರಿಗೆ ತಲುಪಲು ಸಾಧ್ಯವಾಗುವುದಿಲ್ಲ.ಇಲ್ಲಿನ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಎಂದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.
ನೀರಿನ ಸೆಳೆತ ಅರೆಯದ ಸಾರ್ವಜನಿಕರು ಮನೆ ಸೇರುವ ಅವಸರದಲ್ಲಿ ಹಳ್ಳದಾಟುವ ಬಂಡ ಧೈರ್ಯ ಮಾಡಿ ಎಷ್ಟೋ ಜನ ಅಪಾಯದಲ್ಲಿ ಸಿಲುಕಿಕೊಂಡು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.
ಈ ಗ್ರಾಮದ ಜನರು ತಮ್ಮ ಊರಿಗೂ ಸೇತುವೆ ನಿರ್ಮಾಣ ವಾಗಲಿದೆಯೇ? ಎಂದು ಕಾದು ನೋಡುತ್ತಿದ್ದಾರೆ.ಊರಮುಂದಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿ ಈ ಗ್ರಾಮದ ಜನರ ಬವಣೆಗೆ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಸರ್ಕಾರ ಕಿವಿಕೊಡಲಿದೆಯೇ? ಕಾಯ್ದು ನೋಡಬೇಕಾಗಿದೆ.
ಸಾರ್ವಜನಿಕರಿಗೆ, ಗ್ರಾಮಸ್ಥರಿಗೆ ಈ ಹಳ್ಳದಿಂದ ತುಂಬ ತೊದರೆಯಾಗುತ್ತಿದೆ. ಈ ಹಳ್ಳಕೆ ಬ್ರಿಜ್ ಮಾಡಿ ಮಾರ್ಕಬ್ಬಿನಹಳ್ಳಿ ಊರಿನ ಜನರಿಗೆ ಮತ್ತು ಈ ರಸ್ತೆಗೆ ಅಡ್ಡಾಡುತ್ತಿರುವವರಿಗೆ ಸರಕಾರ ಅನುಕೂಲ ಮಾಡಿ ಕೊಡಬೇಕು.
ನಜಿರ ಬೀಳಗಿ, ಟಿಪ್ಪು ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷರು ವಿಜಯಪುರ
ಸುಮಾರು ವರ್ಷದಿಂದ ಈ ಹಳ್ಳದಿಂದ ಜನೆತೆಗೆ ತೊಂದರೆ ಯಾಗುತ್ತಿದೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ, ರಾಜಕೀಯ ನಾಯಕರುಗಳಿಗೆ ತಿಳಿಸಿದರು ಪ್ರಯೋಜವಾಗಿಲ್ಲ. ಅತಿ ಶೀಘ್ರದಲ್ಲಿ ಸೇತುವೆ ನಿರ್ಮಾಣ ಮಾಡದಿದ್ದಲ್ಲಿ ಹೋರಾಟ ಮಾಡಲಾಗುವುದು.
ವಿಶ್ವಾನಾಥ ವಂದಾಲಮಠ, ಜಯ ಕರ್ನಾಟಕ ತಾಲೂಕು ವಲಯ ಘಟಕ ಅಧ್ಯಕ್ಷರು ದೇವರಹಿಪ್ಪರಗಿ