ತಾಳೂರು ಶಾಲೆಯಲ್ಲಿ ಟಿಹೆಚ್ ಎಂ ಬಸವರಾಜ್ ಗೆ ಗೌರವ ಸನ್ಮಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.08:  ಸಿರುಗುಪ್ಪ ತಾಲೂಕು ತಾಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ನಿನ್ನೆ ನಗರದ ಟಿ ಹೆಚ್ ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿ ಹಮ್ಮಿಕೊಂಡಿತ್ತು.
ಸಮಾರಂಭದಲ್ಲಿ    ಪ್ರೌಢಶಾಲೆಗೆ ಸಸಿ, ಪೆನ್ನು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ ಹೆಚ್ ಎಂ ಬಸವರಾಜ ಅವರನ್ನು ತಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾದಿಲಿಂಗಪ್ಪ, ಮುಖ್ಯೋಪಾಧ್ಯಯಿನಿ  ಗೀತಾ ಸಾಗರ್, ಡಯಟ್ ಅಧಿಕಾರಿಗಳಾದ ಪಾಂಡು, ಇಸಿಓ ಚನ್ನಬಸವನಗೌಡ, ಗ್ರಾಮ ಪಂಚಾಯಿತಿ ಸದಸ್ಯ ತುರಮಂಡಪ್ಪ, ಪುರುಷೋತ್ತಮ್ ರೆಡ್ಡಿ, ವೆಂಕಟರಾಮ ರೆಡ್ಡಿ, ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಿದರು. ಶಿಕ್ಷಕರಾದ ಸುಮಿತ್ರಾ ದೇವಿ, ಎಚ್ ಶಾಂತ, ಬಿಕೆ ಲಕ್ಷ್ಮಿ,  ಜೆ ಬಸವರಾಜ್, ಪಿ ಆನಂದ, ವಿ ವೆಂಕಟೇಶಪ್ಪ, ರಾಮಾಂಜನಿ, ಶ್ರೀಕಾಂತ್, ವೀರೇಶ್, ವಿದ್ಯಾರ್ಥಿಗಳ ಉಪಸ್ಥಿತರಿದ್ದರು