ಮಳೆಗೆ 31 ಮನೆ ಕುಸಿತ
ನವಲಗುಂದ,ಜೂ.8: ತಾಲೂಕಿನಲ್ಲಿ ಮೂರನಾಲ್ಕು ದಿನಗಳಿಂದ ಸುರಿದ ಮುಂಗಾರು ಮಳೆ ರೈತರಲ್ಲಿ ಮಂದಹಾಸ ಮೂಡಿಸಿದರೆ. ಅದೇ ಮಳೆಯಿಂದಾಗಿ 31 ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.
ಶಿರಕೋಳದಲ್ಲಿ 13, ಜಾವೂರಲ್ಲಿ 10, ಹನಸಿಯಲ್ಲಿ 6, ಅರೆಕುರಟ್ಟಿ ಹಾಗೂ ಅಮರಗೋಳದಲ್ಲಿ ತಲಾ ಒಂದು ಮನೆ ಭಾಗಶಃ ಕುಸಿದು ಬಿದ್ದಿದ್ದು, ತಾಲೂಕಾಡಳಿತದಿಂದ ಸಮೀಕ್ಷಾ ಕಾರ್ಯ ನಡೆದಿದೆ.
ಬೆಣ್ಣೆಹಳ್ಳ ಹಾಗೂ ತುಪ್ಪರಿ ಹಳ್ಳಗಳು ಮೈದುಂಬಿ ಹರಿಯುತ್ತಿದ್ದು ಗ್ರಾಮೀಣ ಪ್ರದೇಶದ ಮನೆಗಳು ಕುಸಿತಕ್ಕೊಳಗಾಗುವುದರೊಂದಿಗೆ ಹಳ್ಳಗಳು ಮೈದುಂಬಿ ಹರಿಯುತ್ತಿರುವುದರಿಂದ ಮತ್ತೆ ಜನರಲ್ಲಿ ಆತಂಕ ಸೃಷ್ಟಿಸಿದೆ.