ಪರಿಸರ ರಕ್ಷಣೆ ನಮ್ಮೇಲ್ಲರ ಹೊಣೆ- ಯೋಗೀಶ್
ಸಂಜೆವಾಣಿ ವಾರ್ತೆ
ಸಂಡೂರು:ಜೂ: 8:  ಸಂಡೂರು: ಪರಿಸರವನ್ನು ನಗರೀಕರಣ, ಅಧುನೀಕರಣ, ಕೈಗಾರೀಕಿಕರಣದ ಹೆಸರಿನಲ್ಲಿ ನಾಶಮಾಡುತ್ತಿದ್ದು ಭೂಮಿಯ ತಾಪಮಾನ ಹೆಚ್ಚಾಗಿದ್ದು  ಅದನ್ನು ತಡೆದುಕೊಳ್ಳಲಾರದಂತಹ ಸ್ಥಿತಿಯನ್ನು ತಲುಪುತ್ತಿರುವುದು ಮನುಕುಲಕ್ಕೆ ಎಚ್ಚರಿಕೆಯ ಘಂಟೆಯಾಗಿದ್ದು ಪ್ರತಿಯೊಬ್ಬರೂ ಸಹ ಪರಿಸರ ರಕ್ಷಣೆ  ಮಾಡಬೇಕು ಎಂದು ಸಂಡೂರು ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯಶ್ರೇಣಿ ನ್ಯಾಯಾಧೀಶರಾದ ಯೋಗೀಶರವರು ತಿಳಿಸಿದರು.
ಅವರು ತಾಲೂಕಿನ ಸಿದ್ದಾಪುರದ ಹತ್ತಿರದ ಮುರಾರ್ಜಿ ವಸತಿಶಾಲೆಯ ಅವರಣದಲ್ಲಿ ತಾಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ಹಾಗೂ ಇತರ ಇಲಾಖೆಯ ಸಹಯೋಗದಲ್ಲಿ ಜನ-ವನ ಒಬ್ಬರಿಗೊಂದು ಮರ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಭೂಮಿಯಮೇಲೆ ಶೇ: 23% ಕಾಡು ಇರಲೇ ಬೇಕು, ಅದರೆ ಅದು ಈಗ 22% ಇಳಿಕೆಯಾಗಿದೆ ಇದರಿಂದ ಸಂಡೂರಿನ ತಾಪಮಾನ ಬೇಸಿಗೆಯಲ್ಲಿ 45 ಡಿಗ್ರಿಗೆ ಹೆಚ್ಚಾಗಿದೆ, ದೆಹಲಿಯ ತಾಪಮಾನ 55 ಡಿಗ್ರಿ ಏರಿಕೆಯಾಗಿದೆ ಇದು ಅಪಾಯದ ಸಂಕೇತವಾಗಿದೆ, ಅದ್ದರಿಂದ ನಾವೆಲ್ಲರೂ ಸಹ ಕಡ್ಡಾಯವಾಗಿ ಪರಿಸರ ರಕ್ಷಣೆಯನ್ನು ಮಾಡಲೇ ಬೇಕು, ಅದಕ್ಕಾಗಿ 1972ರಲ್ಲಿ ಸ್ವೀಡನ್ ದೇಶದ ಸ್ಟಾಕ್ ಹೋಂನಲ್ಲಿ ಘೋಷಣೆ ಮಾಡಿದರು, 1973 ರಿಂದ ಆಚರಣೆ ಮಾಡಲಾಯಿತು, ಇದರ ಪ್ರಮುಖ ಉದ್ದೇಶವೇ ಪರಿಸರ ರಕ್ಷಣೆ, ಜಾಗತಿಕವಾಗಿ ಬೆಳೆಸಬೇಕಾಗಿದೆ ಎನ್ನುವ ಸಂದೇಶ ಸಾರುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಡೂರು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಧೀಶರಾದ ದೇವರಡ್ಡಿಯವರು ಮಾತನಾಡಿನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳ ಮೊಮ್ಮಕ್ಕಳ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ನಿಮ್ಮ ಮನೆಯಲ್ಲಿ ನಡೆಯುವಾಗ ಸಸಿಗಳನ್ನು ನಡೆವುದರ ಮೂಲಕ ಜಯಂತಿಗಳನ್ನು ಆಚರಿಸಿ ನಿಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳಬ ಏಕಾಗಿದೆ. ಪರಿಸರ ರಕ್ಷಣೆ ಬರೀ ಇಲಾಖೆಯವರದೂ, ಸರ್ಕಾರದ್ದು ಮಾತ್ರವಲ್ಲ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ವಲಯ ಅರಣ್ಯಾಧಿಕಾರಿ ಗೀರೀಶ್ ಮಾತನಾಡಿ ನಮ್ಮ ಪೃಥ್ವಿಯ ಮೇಲೆ ಹೊಂದಿರುವ ಜೀವಿಗಳನ್ನು ರಕ್ಷಿಸಬೇಕಾದರೆ ಪರಿಸ ಬಹು ಮುಖ್ಯ, ಗಾಳಿ, ನೀರು, ವಾತಾವರಣ ಕಲುಷಿತವಾಗದಂತೆ ನೋಡಿಕೊಳಬೇಕಾದರೆ ಪರಿಸರ ಉಳಿಸಿ ಬೆಳೆಸಬೇಕು ಎಂದರು. ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಅರಳಿ ಮಲ್ಲಪ್ಪ, ವಲಯ ಅರಣ್ಯಾಧಿಕಾರಿ ಸೈಯದ್ ದಾದಾಖಲಂದರ್, ಮುಖ್ಯ ಅತಿಥಿಗಳಾಗ ಜಇ.ಕೆ. ರೇಖಾ, ಗುಡೇಕೋಟೆ ನಾಗರಾಜ, ಹೆಚ್. ಕುಮಾರಸ್ವಾಮಿ, ಅರ್. ವಿಷ್ಣುಕುಮಾರ್, ಅರ್.ವಿ. ದತ್ತು ರಾಜ, ನಟರಾಜ ಶರ್ಮ, ಕಣ್ಣಿ ಕುಮಾರಸ್ವಾಮಿ, ಉಮಾರ್ ಫಾರೂಕ್, ಇನ್ನೊಬ್ಬ ವಲಯ ಅರಣ್ಯಾಧಿಕಾರಿ ಗೀರೀಶ್, ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ವೀರೇಶಪ್ಪ, ಟಿ.ಎಂ.ಶಿವಕುಮಾರ್, ಉಪಾಧ್ಯಕ್ಷರಾದ ದಾದಾಪೀರ್.ಕೆ.ಅರ್., ಮಂಜುನಾಥಗೌಡ, ಪ್ಯಾನಲ್ ವಕೀಲರು ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಉಜ್ಜಿನಪ್ಪ ವಂದಿಸಿದರು, ಸೋಮಲಾಪುರದ ಅಂಜಿನಪ್ಪ ಸ್ವಾಗತಿಸಿದರು, ಬಿ.ಎಸ್. ಮಂಜುನಾಥ ಪ್ರಾರ್ಥಿಸಿದರು.