ಕೊಪ್ಪಳ ಜಿಲ್ಲೆ: ಸ್ವಚ್ಚತೆ ಕೊರತೆ ಕಾಲರಾ ಭೀತಿಯಲ್ಲಿ ಜನತೆ.      !
ರುದ್ರಪ್ಪ ಭಂಡಾರಿ 
ಕೊಪ್ಪಳ, ಜೂ.08:   ಜೂನ್ ೫ರಂದು ಎಲ್ಲೆಡೆ ಸಸಿ ನೆಟ್ಟು ಪರಿಸರ ದಿನಾಚರಣೆ  ಆಚರಿಸಲಾಗಿದೆ, ಮಳೆಗಾಲ ಆರಂಭವಾಗಿದೆ ಕೊಪ್ಪಳ ಜಿಲ್ಲೆಯ ಬಹುತೇಕ ಪಟ್ಟಣ ಹಾಗು ಗ್ರಾಮೀಣ ಭಾಗಗಳಲ್ಲಿ ಸ್ವಚ್ಚತೆ ಕೊರತೆಯಿಂದ ಸಾಂಕ್ರಾಮಿಕ ರೋಗ ಹಾಗು ವಿವಿಧ ಕಾಯಿಲೆಗಳು ಬರುವ ಆತಂಕ ಎದುರಾಗಿದೆ.    
ಕಳೆದ ಎರಡೂವರೆ ತಿಂಗಳಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಅಧಿಕಾರಿಗಳಿಗೆ ಚುನಾವಣೆ ಕಾಯ೯ದ ಒತ್ತದಲ್ಲಿದ್ದರೆ, ವಿವಿಧ ಪಕ್ಷದ ಮುಖಂಡರು, ಭಾವಿ ನಾಯಕ ರಾಗಬೇಕೆಂಬ ಆಸೆ ಇರುವ ಕಾಯ೯ಕತ ೯ರು ಓಟು ಗಳಿಕೆ ಲೆಕ್ಕಾಚಾರದಲ್ಲಿ ಮುಳುಗಿದ್ದರು, ಈಗ ಚುನಾವಣೆ ಫಲಿತಾಂಶ ಪ್ರಕಟವಾಗಿ ಶಾಂತ ವಾಗಿದೆ, ಆದರೆ ಆರೋಗ್ಯ, ಯೋಗ ಕ್ಷೇಮ ಜನಪರ ಅಭಿವೃದ್ದಿ ಮಾತ್ರ ನೆನೆಗುಡಿಗೆ ಬಿದ್ದಿದೆ. ಕೊಪ್ಪಳ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಹಾಗು ಪಟ್ಟಣ ಅಭಿವೃದ್ಧಿ ಯಿಂದ ವಂಚಿತ ಗೊಂಡಿರುವುದು ಕಾಣುತ್ತಿದೆ, ರಸ್ತೆ  ಅಕ್ಕ ದಲ್ಲಿ ಬಹುದೇ ೯ಸೆ, ಚರಂಡಿಗಳು ತುಂಬಿ ಗಬ್ಬು ನಾರುತ್ತಿದೆ, ಓಣಿ ಗಳಲ್ಲಿ ಕಸದ ರಾಶಿ ತುಂಬಿವೆ, ವಿದ್ಯುತ್ ಸಮಸ್ಯೆ  ಬೀದಿ ದೀಪ ಕೊರತೆಗಳು ಎದುರಾಗಿವೆ,
ಸೊಳ್ಳೆ ಬೀದಿ ನಾಯಿ ಕಾಟ:  ಆದರೆ ಸೊಳ್ಳೆಗಳ ಹಾವಳಿ   ತಡೆಯಲು ಆಗಲಿಲ್ಲ , ಬೀದಿ ನಾಯಿಗಳ ಕಾಟ ಹೇಳತೀರದು ಹಗಲು ರಾತ್ರಿ ನಿದ್ರೆ ಎನ್ನುವುದು ಕೆಲವರ ಪಾಲಿಗೆ ಗಗನ ಕುಸುಮವಾಗಿದೆ, ರಾಜಕೀಯ ಪಕ್ಷಗಳ ನಾಯಕರೇ ಎಲ್ಲಿದ್ದೀರಾ ಏಳಿ ಎದ್ದೇಳಿ ಜನರ ಕಷ್ಟ ಅರಿತು ಅದನ್ನು ಸರಿಪಡಿಸಲು ಮುಂದಾಗಿ ಎನ್ನುವ ಮಾತು ಜನರಿಂದ ವ್ಯಕ್ತ  ವ್ಯಾಗುತ್ತಿದೆ,   
ಸಾಮೂಹಿಕ ರೋಗ: ಜನ ಸಾಮಾನ್ಯರ ಆರೋಗ್ಯ ರಕ್ಷಿಸುವ ಅಧಿಕಾರಿಗಳೇ ಈಗಲಾದರೂ ಸಮಸ್ಯೆ ಇರುವ ಕಡೆ ಗಮನ ಕೊಟ್ಟು ಡೆಂಗೀ ಮತ್ತಿತರ ಕಾಯಿಲೆ ಬರುವುದನ್ನು ತಪ್ಪಿಸಲು ಮುಂದಾಗಿ ಇಲ್ಲದಿದ್ದಲ್ಲಿ ಜನರು ಸಾಮೂಹಿಕ ರೋಗಿಗಳಾಗಿ ಕಂಡ ಕಂಡ ಆಸ್ಪತ್ರೆಗಳಲ್ಲಿ ತೊಂದರೆ ಪಡಬೇಕಾಗುತ್ತದೆ ಜಿಲ್ಲಾಡಳಿತ ಗಮನ ಕೊಟ್ಟು ಕೊರತೆಯಿರುವ ಸಿಬ್ಬಂದಿ ನೇಮಿಸಿ ಅಗತ್ಯ ಅನುದಾನ ನೀಡಿ ನೈಮ೯ಲ್ಯ ಕಾಪಡುವತ್ತ ಕ್ರಮ ಕೈಗೊಳ್ಳುವ ಉದ್ದೇಶ ಜರೂರಿದೆ.  ಪರಿಸರ ಸಂರಕ್ಷಣೆ ಜೊತೆಗೆ ಊರು ಪಟ್ಟಣ ಅಭಿವೃದ್ಧಿ ಆಗುವುದು ಮುಖ್ಯ. ಜನದಟ್ಟಣೆಯ ಇಂದಿನ ದಿನಗಳಲ್ಲಿ ಎಲ್ಲರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವ ಕಾಯ೯ ಮಹತ್ವದ್ದಾಗಿದೆ.