ಸೇವೆಯೇ ಎನ್ನೆಸ್ಸೆಸ್ ಯೋಜನೆಯ ದ್ಯೇಯ
ಇಂಡಿ:ಸೆ.೨೫:ಸತ್ಯ ಮತ್ತು ಸೇವೆ ರಾಷ್ಟಿçÃಯ ಸೇವಾ ಯೋಜನೆಯಎರಡು ಮುಖಗಳು. ಇವು ಒಂದಕ್ಕೊAದುಅವಲAಬಿತವಾಗಿರುತ್ತವೆ ಎಂದು ಉಪನ್ಯಾಸಕ ಡಾ.ಎಸ್.ಎಸ್. ತಾವರಖೇಡ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಂ.ಎಚ್ ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್ನೆಸ್ಸೆಸ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಸಧೃಡ ಭಾರತಕ್ಕಾಗಿಆರೋಗ್ಯವಂತಯುವಜನತೆಯು ನಿರ್ಮಾಣವಾಗಬೇಕಾಗಿದೆ. ಪ್ರಬುದ್ಧ ಬೆಳವಣಿಗೆ ಮೌಲ್ಯಯುತಜೀವನ, ಆರೋಗ್ಯಕರ ಸ್ಪರ್ಧಾತ್ಮಕತೆ, ಉತ್ತಮ ನಾಯಕತ್ವ, ಶಿಸ್ತುಬದ್ಧ ಜೀವನ ಇತ್ಯಾದಿಗಳೆಲ್ಲವೂ ಯುವಶಕ್ತಿಯನ್ನೇ ಅವಲಂಬಿಸರುತ್ತದೆ ಎಂದರು.
ನಮ್ಮಲ್ಲಿರುವ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಬೇಕಾಗಿತ್ತದೆ. ಈ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಯುವಶಕ್ತಿಯಿಂದ ಮಾತ್ರsಸಾಧ್ಯ. ಇವರಿಗೆ ಸರಿಯಾದ ಮಾರ್ಗದರ್ಶನದಅವಶ್ಯಕತೆಇದೆ. ಇಂತಹ ಮಾರ್ಗದರ್ಶನವನ್ನು ಎನ್ನೆಸ್ಸೆಸ್ ಕಾರ್ಯಕ್ರಮಗಳು ಕೊಡುತ್ತವೆ.’ಎಂದು ಹೇಳಿದರು.
ಪ್ರಾಚಾರ್ಯ ಡಾ.ಎಸ್.ಬಿ.ಜಾಧವ ಮಾತನಾಡಿ ರಾಷ್ಟಿçÃಯ ಸೇವಾಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವನೆ, ಶಿಸ್ತು, ಸಂಯಮ, ಉತ್ತಮ ನಾಯಕತ್ವ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವವನ್ನು ಬೆಳೆಸುತ್ತದೆ. ವೃತ್ತಿಗೌರವ, ಸಹಬಾಳ್ವೆ, ಭಾತೃತ್ವ, ಜಾತ್ಯತೀತ, ಭಾವೈಕ್ಯತೆಇತ್ಯಾದಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಇದು ಸಹಾಯಕಾರಿಯಾಗಿದೆ. ಸೇವೆಯ ಮೂಲಕ ಶಿಕ್ಷಣ ಹಾಗೂ ಶಿಕ್ಷಣದ ಮೂಲಕ ಸೇವೆಯನ್ನು ನೀಡುವಯೋಜನೆರಾಷ್ಟಿçÃಯ ಸೇವಾಯೋಜನೆ ಈ ಎಲ್ಲಾ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಗುರುತರವಾದಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕುಮಾರಿಜವೇರಿಯಾಚೌಧರಿ, ್ನಡಾಪಿ.ಕೆ.ರಾಠೋಡ, ಡಾ.ವಿಶ್ವಾಸಕೊರವಾರ ಮಾತನಾಡಿದರು.
ಕಾರ್ಯಕ್ರಮದಲ್ಲಿಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.