ಜಿಲ್ಲಾ ಮಟ್ಟದ ಕ್ರೀಡಾಕೂಟ: ಶಾಂತಿನಿಕೇತನ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೫:ಪ್ರಸಕ್ತ ಸಾಲಿನ ಪ್ರಾಥಮಿಕÀ ಮತ್ತು ಪ್ರೌಢ ಶಾಲೆಗಳ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ಜರುಗಿದವು.
ಜಿಲ್ಲಾ ಪಂಚಾಯತಿÀ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆÀ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ನಗರ ವಲಯ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ವಿಶಿಷ್ಟ ಸಾಧನೆಯನ್ನು ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೧೪ ವರ್ಷದ ಬಾಲಕಿಯರ ಚೆಸ್ ವಿಭಾಗದಲ್ಲಿ ಅಕ್ಷರಾ ಬೋರ್ದಂಡೆ ಪ್ರಥಮ ಸ್ಥಾನವನ್ನು, ೧೭ ವರ್ಷದ ಒಳಗಿನ ಬಾಲಕಿಯರ ಚೆಸ್ ವಿಭಾಗದಲ್ಲಿ ಶ್ರೇಯಾ ಶಿವಶರಣ, ಸಂಸ್ಕೃತಿ ತೋಸ್ನಿವಾಲ ಪ್ರಥಮ ಸ್ಥಾನವನ್ನು ಹಾಗೂ ೧೭ ವರ್ಷದ ಒಳಗಿನ ಬಾಲಕರ ಚೆಸ್ ವಿಭಾಗದಲ್ಲಿ ಮೊಹಮ್ಮದ ಅಜರ್ ಅತ್ತಾರ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಈ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ, ಚೇರಮನ್ ಡಾ. ಸುರೇಶ ಬಿರಾದಾರ, ನಿರ್ದೇಶಕಿ ದಿವ್ಯಾ ಬಿರಾದಾg, ಪ್ರಾಚಾಂiÀið ಶ್ರೀಧರ ಕುರಬೇಟ, ದೈಹಿಕ ಶಿಕ್ಷಕರಾದ ಎ.ಎಚ್. ಸಗರ, ಕಿರಣ ರಾಠೋಡ, ಪ್ರವೀಣ ಗೆಣ್ಣೂರ ಅಭಿನಂದನೆಯನ್ನು ಸಲ್ಲಿಸಿದ್ದಾರೆ.