ಶಿಕ್ಷಕ ಹುದ್ದೆ ಪವಿತ್ರವಾದದ್ದು, ಇದರ ಪಾವಿತ್ರö್ಯತೆ ಕಾಪಾಡುವುದು ಶಿಕ್ಷಕರ ಕೈಲಿದೆ
ಭಾಲ್ಕಿ:ಸೆ.೨೫: ಶಿಕ್ಷಕರು ಶ್ರದ್ಧೆ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ, ಆ ಹುದ್ದೆಯ ಗೌರವಕ್ಕೆ ಪಾತ್ರರಾಗುವರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದೇರ್ಶಕ ಚಂದ್ರಶೇಖರ ಶಾಬಾದಕರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಎನ್.ಸಿ.ಎಸ್ ಕಾಲೇಜಿನಲ್ಲಿ ಮಂಗಳವಾರ ನಿರ್ಮಲಾ ಹಲಮಂಡಗೆ ಗ್ರೂಪ್ ಆಫ್ ಇನ್ಸಿ÷್ಟಟ್ಯೂಟ್ಸ್ ವತಿಯಿಂದ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಸದಾ ನಿಷ್ಠೆ. ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು. ಅಂದರೆ ಮಾತ್ರ ಆ ಹುದ್ದೆಯ ಗೌರವಕ್ಕೆ ಪಾತ್ರರಾಗಲು ಸಾಧ್ಯ. ಹೀಗಾಗಿ ಸದಾ ಶಿಕ್ಷಕರು ಮಕ್ಕಳ ಏಳ್ಗೆಗಾಗಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಸಾಧನೆಯ ಕನಸಿನ ಕೊಂಡಿಗೆ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಉನ್ನತ ಕನಸ್ಸನ್ನು ಕಂಡುಕೊAಡು, ಆ ಕನಸು ನನಸು ಮಾಡಿಕೊಳ್ಳಲು ಸದಾ ಪ್ರಯತ್ನಶೀಲರಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮರ ಹಲಮಂಡಗೆ, ವಿದ್ಯಾರ್ಥಿಗಳಲ್ಲಿ ನೈತಕ ಮೌಲ್ಯಗಳನ್ನು ಬಿತ್ತುವ ಕಾರ್ಯ ಶಿಕ್ಷಕರದ್ದಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಹರಪ್ಪಾ ಮಂಜುಳಾ ವಿಶೇಷ ಉಪನ್ಯಾಸ ಮಂಡಿಸಿದರು. ಕಾರ್ಯಕ್ರಮದಲ್ಲಿ ರಮೇಶ ಕುಲಕರ್ಣಿ, ಪ್ರಕಾಶ ಮಾನಕಾರ, ಅಮೃತ ಪಾಟೀಲ, ಮಲ್ಲಿಕಾರ್ಜುನ ಕಾಂಬಳೆ, ತಿಪ್ಪಣ್ಣ ಶಿವಪುರೆ, ರಾಜೇಶ ಮುಗಟೆ, ಜಯರಾಜ ದಾಬಶೆಟ್ಟಿ, ಜಾಲಿಂದರ ಮೇಹತ್ರೆ ಉಪಸ್ಥಿತರಿದ್ದರು.
ಮೀನಾಕ್ಷಿ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಅಲ್ಪನಾ ನಿರೂಪಿಸಿದರು. ಶಿವಕುಮಾರ ಕಾಂಜೊಳಗೆ ವಂದಿಸಿದರು.