ಗಾಂಧಿಜಿ ಅಹಿಂಸೆ ಸಂಪ್ರದಾಯವೊAದೇ ಜಾಗತಿಕ ಶಾಂತಿಗೆ ದಾರಿ: ಪಾಟೀಲ
ಆಳಂದ:ಸೆ.೨೫: ಗಾಂಧೀಜಿಯವರ ಜೀವನವು ಸತ್ಯ ಮತ್ತು ಅಹಿಂಸೆಯ ತತ್ವಗಳಿಗೆ ಒಂದು ನಿದರ್ಶನವಾಗಿದ್ದು, ನಮ್ಮ ಸಮಾಜದಲ್ಲಿ ಹಿಂಸೆ, ದ್ವೇಷ, ಮತ್ತು ಅಸಮತೋಲನವನ್ನು ನಿವಾರಿಸಲು ಗಾಂಧೀಜಿಯವರ ಮಾರ್ಗದರ್ಶನ ಅತ್ಯಂತ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ವಿವೇಕವರ್ಧಿನಿ ಸಿಬಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಸತ್ಯ ಮತ್ತು ಅಹಿಂಸೆ ಹಾಗೂ ಜಾಗತಿಕ ಶಾಂತಿಗಾಗಿ “ಗಾಂಧಿ ಮಾರ್ಗ” ಕುರಿತು ಒಂದು ದಿನದ ರಾಷ್ಟಿçÃಯ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
“ಜಗತ್ತಿನಲ್ಲಿ ಬೇರೆ ಯಾವುದಾದರೂ ಆದರ್ಶದಂತೆ, ಗಾಂಧೀಜಿಯವರ ಮಾರ್ಗವನ್ನು ಅನುಸರಿಸುವುದು, ಸಮರ್ಥ ಮತ್ತು ಸಾತ್ವಿಕ ಸಮಾಜವನ್ನು ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ” ಎಂದು ಹೇಳಿದರು.
ಇಂದು ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳು, ಧಾರ್ಮಿಕ ವೈಷಮ್ಯ, ಮತ್ತು ರಾಜಕೀಯ ಸಂಘರ್ಷಗಳನ್ನು ಉಲ್ಲೇಖಿಸಿದರು. ಇಂತಹ ಸಮಸ್ಯೆಗಳ ಪಾರಿತೋಷಕವಾಗಿರುವುದೇ ಗಾಂಧೀಜಿಯವರ ಅಹಿಂಸಾ ತತ್ವ. “ವ್ಯಕ್ತಿಗಳ ಜೀವನದಲ್ಲಿ ಅಹಿಂಸೆಯ ಅಳವಡಿಕೆಯಿಂದ, ನಾವು ವೈಯಕ್ತಿಕ, ಸಾಂಸಾರಿಕ, ಮತ್ತು ರಾಷ್ಟçದ ಮಟ್ಟದಲ್ಲಿ ಶಾಂತಿಯನ್ನು ಸಾಧಿಸಬಹುದು” ಎಂದು ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಗಾಂಧೀಜಿಯವರ “ಅಹಿಂಸಾ ಪರಮೋ ಧರ್ಮಃ” ಎಂಬ ತತ್ವವನ್ನು ಹಿರಿತನಕ್ಕೆ ಬದಲಾವಣೆ ತರುವ ಶಕ್ತಿಯಾಗಿದೆ, “ಸತ್ಯ ಮತ್ತು ಅಹಿಂಸೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಮಾನವೀಯತೆಯಾದ ವಿಶ್ವವನ್ನು ಕಟ್ಟುವಲ್ಲಿ ನಾವು ಯಶಸ್ವಿಯಾಗುತ್ತೇವೆ” ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಗಾಂಧಿ ತತ್ವಗಳನ್ನು ಓದಿ, ಅವುಗಳನ್ನು ಅಳವಡಿಸಿಕೊಳ್ಳಬೇಕು. ಯುವಕರು ಗಾಂಧೀಜಿಯವರ ದಾರಿಯನ್ನು ಅನುಸರಿಸಿದರೆ, ನಾವೇ ಮುಂದಿನ ಪೀಳಿಗೆಗೆ ಶಾಂತಿ ಮತ್ತು ಸಹವಾಸದ ಸಂದೇಶವನ್ನು ಮುಂದು ವರಿಸಬಹುದು ಹೇಳಿದರು. ಅಹಿಂಸೆ ನಮ್ಮ ಜನ್ಮಹಕ್ಕಾಗಿದ್ದು, ಇದನ್ನು ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಬದಲಾವಣೆಯು ಅನಿವಾರ್ಯವಾಗಿ ಸಂಭವಿಸುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿವಿಧ ವಿದ್ವಾಂಸರು, ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊAಡರು.
ಕಾಲೇಜಿನ ಪ್ರಾಂಶುಪಾಲ ಡಾ. ರವಿಚಂದ್ರ ಕಂಟೆಕೂರೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಅರವಿಂದ ಅಂಗಡಗಿ ಸ್ವಾಗತಿಸಿದರು. ಡಾ. ಭಾಗಿರಥಿ ನಿರೂಪಿಸಿದರು. ರಮೇಶ ಮಾಳಗೆ ವಂದಿಸಿದರು.
ಪ್ರಥಮ ಘೋಷ್ಠಿ:
ಕಸ್ತೂರಿಬಾ ಗಾಂಧಿ ಅವರ ಸ್ತ್ರೀಯರ ಚಿಂತನೆ ಕುರಿತು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ಪ್ರಾಧ್ಯಾಪಕಿ ಡಾ. ಅಭಿದಾಬೇಗಂ ಮಾತನಾಡಿದರು. ಕಸ್ತೂರಿಬಾ ಗಾಂಧಿ ಕೇವಲ ಮಹಾತ್ಮ ಗಾಂಧಿಯವರ ಧರ್ಮಪತ್ನಿಯಾಗಿದ್ದು ಮಾತ್ರವಲ್ಲ, ಅವರು ಸ್ವತಂತ್ರವಾಗಿ ಸ್ತಿçÃಶಕ್ತಿ, ಸತ್ಯ, ಮತ್ತು ಅಹಿಂಸಾ ತತ್ವಗಳ ಪರವಾಗಿ ತನ್ನ ಸ್ವಂತ ಧ್ವನಿಯನ್ನು ಪ್ರತಿಪಾದಿಸಿದರು. “ಕಸ್ತೂರಿಬಾ ಗಾಂಧಿಯವರು ತಮ್ಮ ಜೀವನದಲ್ಲಿ ಗಾಂಧೀಜಿಯವರ ತತ್ವಗಳನ್ನು ಅನುಸರಿಸಿ, ಸ್ತಿçÃಯರ ಸಮಸ್ಯೆಗಳ ತಾಣವಾಗಿ, ಅವರ ಸ್ವಾಭಿಮಾನವನ್ನು ಎತ್ತಿ ಹಿಡಿದು, ಸಮಾಜದ ಸ್ತಿçÃಯರಿಗಾಗಿ ಹೋರಾಟ ನಡೆಸಿದವರು,” ಎಂದು ಅಭಿದಾಬೇಗಂ ಅವರು ಅಭಿಪ್ರಾಯಪಟ್ಟರು.
ಮಹಿಳೆಯರು ತಮ್ಮ ಸತ್ವವನ್ನು ಮತ್ತು ಶಕ್ತಿಯನ್ನು ಕಂಡುಕೊಳ್ಳಬೇಕೆAದು ವಿವರಿಸಿದರು. “ಅವರಿಂದ ನಾವು ಕಲಿಯಬೇಕಾದ ಮುಖ್ಯ ಪಾಠವೆಂದರೆ, ಕಷ್ಟ ಸಹನ ಶಕ್ತಿಯು ನಮ್ಮ ಅಂತರAಗದ ಬಲವಾಗಿ ಕೆಲಸ ಮಾಡುತ್ತದೆ. ಕಸ್ತೂರಿಬಾ ಗಾಂಧಿಯವರು ಸ್ತಿçÃಯರ ಸಮಸ್ಯೆಗಳಿಗಾಗಿ ಹೋರಾಟ ಮಾಡಿ, ಮಹಿಳೆಯರು ತಮ್ಮ ಪ್ರಾಬಲ್ಯ ಮತ್ತು ಹಕ್ಕುಗಳನ್ನು ಪಡೆದುಕೊಳ್ಳಲು ಪ್ರೇರಣೆಯಾದವರು” ಎಂದು ಅವರು ಹೇಳಿದರು. ಕಸ್ತೂರಿಬಾ ಗಾಂಧಿಯವರು ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ಹೋರಾಟದಲ್ಲಿ ಗಾಂಧೀಜಿಯವರ ಜೊತೆಯಲ್ಲಿ ಜೈಲಿನಲ್ಲಿಯೂ ಸಮಯ ಕಳೆಯುತ್ತ, ಅಹಿಂಸಾತ್ಮಕ ಹೋರಾಟದಲ್ಲಿ ಭಾಗವಹಿಸಿದ್ದು, ಅದು ಸ್ತಿçÃಯರ ಸ್ಥಿತಿಗೆ ಹೊಸ ಬೆಳಕು ತುಂಬಿದ ಮತ್ತೊಂದು ಅಧ್ಯಾಯವಾಗಿದೆ, ಅಡಗಿಸಿಕೊಂಡಿರಲಿಲ್ಲ, ಬದಲಿಗೆ, ಸ್ತಿçÃಯರ ಬಲಹೀನತೆಯನ್ನು ಬಲವನ್ನಾಗಿ ಪರಿವರ್ತಿಸಿ, ಹೋರಾಟಕ್ಕೆ ಸಜ್ಜುಗೊಂಡಿದ್ದರು. ಅವರು ಸ್ತಿçÃಯರ ಶಿಕ್ಷಣ, ಆರೋಗ್ಯ, ಸ್ವಾವಲಂಬನೆ, ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಂಡು, ಕಸ್ತೂರಿಬಾ ಅವರು ಸ್ತಿçÃಯರನ್ನು ತಮ್ಮ ಸ್ವಾಭಿಮಾನವನ್ನು, ಮತ್ತು ಸ್ವತಂತ್ರ ವಿಚಾರಧಾರೆಯನ್ನು ಅಭಿವ್ಯಕ್ತಿಸುವಂತೆ ಪ್ರೇರೇಪಿಸಿದರು. ಆ ಮೂಲಕ, ಅವರು ಸ್ತಿçÃಯರ ಸಶಕ್ತಿಕರಣದ ವಾಸ್ತವದ ಸಂದೇಶವನ್ನು ಸಾರಿದ್ದಾರೆ ಇಂದಿನ ಮಹಿಳಾ ಸಮುದಾಯಕ್ಕೆ ದಿಕ್ಸೂಚಿಯಾಗಿದೆ ಎಂದರು.
ಗ್ರಂಥಪಾಲಕ ಅರವಿಂದಕುಮಾರ ಸೇರಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
೨೧ನೇ ಶತಮಾನದಲ್ಲಿ ಗಾಂಧಿ ಮಾರ್ಗದಲ್ಲಿ ಯುವಕರು, ಜಗತ್ತಿನ ನಾಯಕರ ಮೇಲೆ ಗಾಂಧಿ ಪ್ರಭಾವ ಕುರಿತು ಒಟ್ಟು ಮೂರು ಗೋಷ್ಠಿ ಜರುಗಿದವು.