ಜಗತ್ತಿನಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ಒಂದು ಹೆಜ್ಜೆ ಮುಂದಿದೆ: ಡಾ. ಆರ್.ಎಂ. ಮಿರ್ದೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೫:ಪ್ರಪಂಚದಲ್ಲೇ ವೈಜ್ಞಾನಿಕ ಕ್ಷೇತ್ರದಲ್ಲಿ ನಮ್ಮ ಭಾರತ ದೇಶ ಒಂದು ಹೆಜ್ಜೆ ಮುಂದಿದೆ. ಚಂದ್ರನ ಮೇಲೆ “ಚಂದ್ರಯಾನ-೩” ಅನ್ನು ಇಳಿಸುವ ಮೂಲಕ ವೈಜ್ಞಾನಿಕ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಪ್ರಾಚಾರ್ಯೆ ಡಾ. ಆರ್.ಎಂ. ಮಿರ್ದೆ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ವಿಭಾಗÀ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದಲ್ಲಿ ಸೆ. ೨೧ ರÀಂದು ‘ಚಂದ್ರಯಾನ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಚಿನ್ನದಗರಿ’ ಎಂಬ ಶೀರ್ಷಿಕೆಯ ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ Àಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶವು ಇಡೀ ಜಗತ್ತಿಗೆ ಮಾದರಿಯಾಗಿದೆ ವೈಜ್ಞಾನಿಕ ಕ್ಷೇತ್ರದಲ್ಲಿ ನಮ್ಮ ದೇಶ ಒಂದು ಹೆಜ್ಜೆ ಮುಂದಿದೆ ಎಂದರು.
ಚAದ್ರನ ಮೇಲೆ ಚಂದ್ರಯಾನ-೩ ಅನ್ನು ಇಳಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರಚಿಸಿದ ಇತಿಹಾಸವನ್ನು ಸ್ಮರಿಸುವಂಥದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪನ್ಹಾಲದ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಮತ್ತು ಸಂಯೋಜಕರಾಗಿರುವ ಸಂಪನ್ಮೂಲ ವ್ಯಕ್ತಿ ಡಾ. ರಾಜೀವ ವಟಕರ ಅವರು ತಾಂತ್ರಿಕ (ಲೈವ್)ವಿಚಾರ ಮಂಡಿಸಿದರು. ಚಂದ್ರನ ಕಾರ್ಯಾಚರಣೆಯ ಸಂಶೋಧನೆಯ ಫಲಿತಾಂಶಗಳು ಎಂಬ ವಿಷಯ ಮಂಡಿಸಿದರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಪೀಣ್ಯದ ನ್ಯಾವಿಗೇಷನ್ ಸಿಸ್ಟಮ್ಸ್ ಏರಿಯಾದ ಗ್ರೂಪ್ ಡೈರೆಕ್ಟರ್ ಆಗಿರುವ ರೂಪಾ ಎಂ.ವಿ. ಅವರು ‘ಚಂದ್ರಯಾನ-೩ ಸಮಯದಲ್ಲಿ ಎದುರಿಸಿದ ಸವಾಲುಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.
ಮಂಗಳಯಾನ, ಚಂದ್ರಯಾನ-೨, ಚಂದ್ರಯಾನ-೩ ಮತ್ತು ಭಾರತದ ಅನೇಕ ಪ್ರವರ್ತಕ ಬಾಹ್ಯಾಕಾಶ ಕಾರ್ಯಾಚರಣೆಗಳ ಭಾಗವಾಗಿದೆ. ಈ ಕಾರ್ಯಾಚರಣೆಗಳ ತಾಂತ್ರಿಕ ಮತ್ತು ವಿನ್ಯಾಸವನ್ನು ವಿವರಿಸಿದರು ಮತ್ತು ಭವಿಷ್ಯದಲ್ಲಿ ಇಂತಹ ಕಾರ್ಯಾಚರಣೆಗಳ ಅಗತ್ಯದ ಬಗ್ಗೆ ವಿವರಿಸಿದರು.
ಗಿರೀಶಕುಮಾರ ಬಿ. ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಡಾ. ಪಿ.ಎಸ್. ಪಾಟೀಲ, ಕಾರ್ಯಕ್ರಮದ ಸಂಚಾಲಕಿ ಡಾ. ಗಿರಿಜಾ ನಿಂಬಾಳ, ಸಿಬ್ಬಂದಿಗಳಾದ ಸೌಮ್ಯಾ ಸಜ್ಜನ ಮತ್ತು ಕುಮಾರಿ ಉಮೆರಾಬಾನು ಶೇಖ, ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.