ಭದ್ರತೆ ಒದಗಿಸುವವರಿಗೆ ಇಲ್ಲಾ ಭದ್ರತೆ ಇನೇಷ್ಟು ವರ್ಷ ಬೇಕು?
ಸೇಡಂ, ಜೂ,08: ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ಪೆÇೀಲಿಸ್ ಠಾಣೆಯ ಪಿ ಎಸ್ ಐ, (ತನಿಖಾ) ಸಿಬ್ಬಂದಿ ವರ್ಗದವರು ಸರ್ಕಾರಿ ದಾಖಲಾತಿಗಳು ಸಂರಕ್ಷಣೆಗೆ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರೆ ತಪ್ಪಾಗಲಾಗರದು, ಸಾರ್ವಜನಿಕರ ಸೇವೆಗಾಗಿ ಶಾಂತಿ ನೆಮ್ಮದಿಗೆ ಮಹತ್ವ ನೀಡುವ ಜೊತೆಗೆ ಎಲ್ಲಾ ವ್ಯಾಪ್ತಿಯಲ್ಲಿ ಭದ್ರತೆ ಒದಗಿಸುವವರಿಗೆ ಮಳೆಗಾಲದಲ್ಲಿ ಭದ್ರತೆ ಇಲ್ಲದೆ ಬಳಲುತ್ತಿರುವ ಪೆÇಲೀಸ್ ಸಿಬ್ಬಂದಿ ವರ್ಗದವರಿಗೆ ಇನ್ನೆಷ್ಟು ವರ್ಷ ಬೇಕು ನೂತನ ಪೆÇಲೀಸ್ ಠಾಣೆ ಎಂದು ಸ್ಥಳೀಯ ಶಾಸಕರಿಗೆ ಅಧಿಕಾರಿಗಳಿಗೆ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇಲ್ಲಿನ ಪೆÇಲೀಸ್ ಠಾಣೆ ಒಳಗೆ ಚರಂಡಿ ನೀರು ರಸ್ತೆ ನೀರು ಕೆಳಗಡೆ ಇರುವ ಸ್ಟೇಷನ್ ಒಳಗೆ ನುಗ್ಗಿ ದಾಖಲಾತಿಗಳು ನೀರು ಪಾಲಾಗುತ್ತಿವೆ, ಸ್ಥಳೀಯ ಶಾಸಕರು ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ರವರು ತಕ್ಷಣ ಗೃಹ ಸಚಿವರಿಗೆ ನೂತನ ಪೆÇಲೀಸ್ ಠಾಣೆ ನಿರ್ಮಾಣಕ್ಕೆ ಹಾಗೂ ಸ್ಥಳಾಂತರಕ್ಕೆ ತಕ್ಷಣ ಮುಂದಾಗ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚರಂಡಿ ನೀರು ಸರಾಗವಾಗಿ ಹೋಗಲು ಕ್ರಮ ತೆಗೆದುಕೊಳ್ಳಲಾಗುವುದು, ಹಾಗೂ ಮೇಲಾಧಿಕಾರಿಗಳಿಗೆ ಸಚಿವರ ಗಮನಕ್ಕೆ ತರಲಾಗುವುದು.
ಆಶಪ್ಪ ಪೂಜಾರಿ ಸಹಾಯಕ ಆಯುಕ್ತರು ಸೇಡಂ
ಜಿಲ್ಲೆಯಲ್ಲಿಯೇ ಮಾದರಿ ತಾಲೂಕಾ ಹಣೆಪಟ್ಟಿ ಹೊಂದಿರುವ ಸೇಡಂಗೆ ಬೇಕಿದೆ ನೂತನ ಪೆÇಲೀಸ್ ಠಾಣೆ, ಇಲ್ಲಿನ ಜನಪ್ರತಿನಿಧಿಗಳು ಅಧಿಕಾರಿಗಳು ತಕ್ಷಣ ಕ್ರಿಯಾಶೀಲರಾಗಿ ಪೆÇಲೀಸ್ ಠಾಣೆ ನಿರ್ಮಾಣಕ್ಕೆ ಮುಂದಾಗಬೇಕು.
ಶೇಖರ್ ನಾಟಿಕರ್ (ಜೂನಿಯರ್ ಉಪೇಂದ್ರ)
ಮಳೆ ನಿಂತ ನಂತರ ಅಗ್ನಿಶಾಮಕ ದಳದವರು ಪೆÇಲೀಸ್ ಠಾಣೆ ಒಳಗಿನ ನೀರು ತೆಗೆಯಲು ಹರ ಸಾಹಸ ಪಟ್ಟರು.