ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪುರಸಭಾ ಸದಸ್ಯನ ರಕ್ಷಣೆ
ಜಿ.ಪಿ. ಘೋರ್ಪಡೆ
ತಾಳಿಕೋಟೆ:ಜೂ.8: ಗುರುವಾರರಂದು ರಾತ್ರಿ 11-40 ಗಂಟೆಯ ಸುಮಾರಿಗೆ ಪಟ್ಟಣದಲ್ಲಿ ಗುಡುಗು ಮಿಶ್ರಿತ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದ ಸಮಯದಲ್ಲಿ ತನ್ನ ಕಾಯಕ ಮುಗಿಸಿ ಮನೆಗೆ ತೆರಳುತ್ತಿದ್ದ ಪುರಸಭಾ ಸದಸ್ಯನೊಬ್ಬ ತನ್ನ ಸ್ಕೂಟಿ ಬೈಕ್‍ನೊಂದಿಗೆ ಜಾನಕಿ ಹಳ್ಳದ ಮೇಲೆ ಹಾಯ್ದು ಹೋಗುತ್ತಿದ್ದಾಗ ತುಂಬಿ ಬಂದ ಹಳ್ಳದ ನೀರಿನ ರಬಸಕ್ಕೆ ಸ್ಕೂಟಿ ಬೈಕ್ ಸಮೇತ ಹರಿದುಕೊಂಡು ಹೋಗುತ್ತಿದ್ದಾಗ ಅಗ್ನಿ ಶಾಮಕ ಸಿಬ್ಬಂದಿಗಳು ಮಿಂಚಿನ ವೇಗದಲ್ಲಿ ದಾವಿಸಿ ಬಂದು ಹಗ್ಗದ ಸಹಾಯದೊಂದಿಗೆ ಸದಶ್ಯನ ಜೀವ ರಕ್ಷೀಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರಣೆ : ಗುರುವಾರ 11-40 ಗಂಟೆಯ ಸುಮಾರಿಗೆ ಸ್ಕೂಟಿಯ ಬೈಕಿನ ಮೇಲೆ ಕುಳಿತು ಮನೆಗೆ ತೆರಳುತ್ತಿದ್ದ ಪುರಸಭಾ ಸದಸ್ಯ ನಿಂಗಪ್ಪ ಗುರಲಿಂಗಪ್ಪ ಕುಂಟೋಜಿ(35) ವರ್ಷದವನೆಂದು ಗುರುತಿಸಲಾಗಿದ್ದು ಇತ ಎಳೆ ನೀರು ಕಾಯಿ ವ್ಯಾಪಾರ ಮಾಡುತ್ತಿದ್ದ ತನ್ನ ತಮ್ಮನ ಅಂಗಡಿ ಬಂದ್ ಮಾಡಿಸಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ರಾತ್ರಿ ಸಮಯವಾಗಿದ್ದರಿಂದ ಬಸ್ ಘಟಕದ ಮುಖ್ಯ ರಸ್ತೆಯ ಜಾನಕಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಮೇಲೆ ಜಾನಕಿ ಹಳ್ಳದ ನೀರು ರಬಸದಿಂದ ಹರಿಯುತ್ತಿರುವದನ್ನು ಲಕ್ಷೀಸದೇ ಸ್ಕೂಟಿ ಬೈಕಿನ ಮೇಲೆ ನಡು ಹಳ್ಳಕ್ಕೆ ಹೋದಾಗ ಚಾಲು ಇದ್ದ ಬೈಕ್ ಬಂದಾದ ಕಾರಣದಿಂದ ಹಳ್ಳದ ನಡು ನೀರಿನಲ್ಲಿ ಸಿಲುಕಲು ಕಾರಣವಾಯಿತೆಂದು ಪುರಸಭಾ ಸದಸ್ಯ ನಿಂಗಪ್ಪ ಕುಂಟೋಜಿ ಪತ್ರಿಕೆ ಸಂಪರ್ಕಿಸಿದಾಗ ತಿಳಿಸಿದ್ದಾನೆ.
ಸದಸ್ಯ ನಿಂಗಪ್ಪ ಹಳ್ಳದ ರಬಸದ ನಡು ನೀರಿನಲ್ಲಿ ಸಿಲುಕಿದ್ದನ್ನು ಲಕ್ಷೀಸಿದ ಪ್ರಮುಖ ಕಪ್ಪಡ ವ್ಯಾಪಾರಿ ಸಚೀನ ಹಂಚಾಟೆÉ ಎಂಬವರು ನೋಡಿ ಕೂಡಲೇ ಅಗ್ನಿ ಶಾಮಕ ಠಾಣೆಗೆ ದೂರವಾಣಿ ಮುಖಾಂತರ ಈ ಘಟನೆಯ ವಿವರಣೆ ತಿಳಿಸಿದಾಗ ಮಿಂಚಿನ ವೇಗದಲ್ಲಿ ಹಗ್ಗ ಸಮೇತ ತೆಗೆದುಕೊಂಡು ದಾವಿಸಿಬಂದ ಅಗ್ನಿ ಶಾಮಕ ಠಾಣಾ ಅಧಿಕಾರಿ ಪ್ರಭು ಸಣ್ಣಕ್ಕಿ, ಹಾಗೂ ವಾಹನ ಚಾಲಕ ವಿರೇಶ ಹಂಡ್ರಗಲ್ಲ, ಸಿಬ್ಬಂದಿಯವರಾದ ಸಿ.ಸಿ.ಅಂಬಳನೂರ, ದೇವೀಂದ್ರ ರಾಠೋಡ, ಶ್ರೀನಿವಾಸ ಚವ್ಹಾಣ ಅಲ್ಲದೇ ಇನ್ನುಳಿದ ಸಿಬ್ಬಂದಿಗಳು ಒಳಗೊಂಡು ಹರ ಸಾಹಸ ಪಟ್ಟು ಪುರಸಭಾ ಸದಸ್ಯ ನಿಂಗಪ್ಪ ಹಾಗೂ ಸ್ಕೂಟಿ ಬೈಕ್ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.