ಕೋಬಾಳದಲ್ಲಿ ಸಡಗರ ಸಂಭ್ರಮದಿಂದ ದೇವಮ್ಮಾಯಿ ಜಾತ್ರಾ ಮಹೋತ್ಸವ ಯಶಸ್ವಿ
ಜೇವರ್ಗಿ:ಜೂ.8: ತಾಲೂಕಿನ ಕೋಬಾಳ್ ದಲ್ಲಿ ಪ್ರತಿ ವರ್ಷದಂತೆ ಬಾದಮಿ ಅಮಾವಾಸ್ಯೆಯಂದು ಜರುಗುವ ದೇವಮ್ಮಾಯಿ ಜಾತ್ರಾ ಮಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಹೆಣ್ಣು ಮಕ್ಕಳಿಗಾಗಿ ಉಡಿ ತುಂಬವ ಕಾರ್ಯಕ್ರಮ ಸಡಗರ ಸಂಭ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.
ಗ್ರಾಮದಲ್ಲಿ ದೇವಿಯ ಭವ್ಯ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಭರ್ಜರಿಯಾಗಿ ಜರುಗಿತು, ನಂತರ ಗ್ರಾಮಸ್ಥರು ದೇವಿಗೆ ನೈವೇದ್ಯ ತೆಂಗು ಕರ್ಪುರ ತಮ್ಮ ಇಚ್ಛಾನುಸಾರ ಅರ್ಪಿಸಿ ದೇವಿಯ ಮೆರವಣಿಗೆಯಲ್ಲಿ ಇಡೀ ಗ್ರಾಮಸ್ಥರೆಲ್ಲರೂ ಪಾಲ್ಗೊಂಡರು, ಹಲಿಗೆ ಮೇಳ ಭಾಜಿ ಭಜಂತ್ರಿ ಹಾಗೂ ವಿವಿಧ ಕಲಾತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದವು, ದೇವಿಯ ಭಕ್ತರೆಲ್ಲ ಗುಲಾಲು ಹಚ್ಚಿಕೊಂಡು ಮೆರವಣಿಗೆ ಉದ್ದಕ್ಕೂ ಭಾಗಿಗಳಾಗಿ ದೇವಿಯ ಕೃಪೆಗೆ ಪಾತ್ರರಾದರು. ಪ್ರತಿ ವರ್ಷಕೊಮ್ಮೆ ಜರುಗುವ ಜಾತ್ರೆ ಈ ಗ್ರಾಮದಿಂದ ಹೊರಗಡೆ ಹೋದಂತಹ ಎಲ್ಲಾ ದೇವಿಯ ಭಕ್ತರು ಈ ಜಾತ್ರೆಗೆ ಬರುತ್ತಾರೆ. ಯಾವುದೇ ಜಾತಿ ಮತ ಪಂಥ ಭೇದ ಭಾವವಿಲ್ಲದೆ ಸರ್ವ ಜನಾಂಗದವರು ಸೇರಿ ಈ ಜಾತ್ರೆಯನ್ನು ವೈಭವಿತವಾಗಿ ಆಚರಿಸುತ್ತಾರೆ . ಈ ವರ್ಷದ ದೇವಿಯ ಪಲ್ಲಕ್ಕಿ ಉತ್ಸವ, ದಾಸೋಹದ ಸಂಪೂರ್ಣ ಸೇವೆಯ ಉಸ್ತುವಾರಿ ಅಜೀತ್ ಗೌಡ ಮರತೂರ ವಹಿಸಿದ್ದರು, ಮೆರವಣಿಗೆ ಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಾನಂದ ಪಾಟೀಲ್ ಮರತೂರ್, ರಾಜಶೇಖರ್ ಸೀರಿ, ಸನಮ್ಮುಖಪ್ಪ ಗೌಡ ಮಾಲಿಪಾಟೀಲ್, ಶಿವಲಿಂಗಯ್ಯ ಸ್ವಾಮಿ ಕೋಬಾಳ್, ಶರಣಗೌಡ ಮಾಲಿ ಬಿರೆದಾರ್, ಶಂಕರಗೌಡ ಮಾಲಿ ಬಿರಾದಾರ್ ಹನುಮಂತ್ ರಾಯಗೌಡ ಮಾಲಿ ಬಿರಾದಾರ್ , ಬಸವರಾಜ್ ಬಿರಾದಾರ್ ವಕೀಲರು, ಶಿವಪ್ಪ ಗೌಡ ಮಾಲಿ ಬಿರಾದಾರ್, ಬಸ್ವಂತರಾಯಗೌಡ ಹಳೆಂಗಳ್, ಸರ್ವೇಶ್ ಮಾಲಿ ಬಿರೆದಾರ್, ಮಹಮೂದ ಪಟೇಲ್, ಭಾವಪಟೇಲ್ ಪೆÇಲೀಸ್ ಪಾಟೀಲ್, ಬಾಬುರಾವ್ ಕೋಬಾಳ್, ಅಶೋಕ್ ಹಿಪ್ಪರಗಿ, ಜಗನ್ನಾಥ್ ನಿಂಗಬೋ, ಯಲ್ಲಾಲಿಂಗ ನಾಯ್ಕೋಡಿ , ಸಿದ್ದರಾಮ ಕೋಬಾಳ್, ಸಾಬಣ್ಣ ಮ್ಯಾಕೆರಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮುಖಂಡರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.