ಉಚಿತ ಆರೋಗ್ಯ ಶಿಬಿರ
ಸಂಜೆವಾಣಿ ವಾರ್ತೆ
ನಂಜನಗೂಡು:ಜೂ.08: ಮನುಷ್ಯನಿಗೆ ಆರೋಗ್ಯ ಮುಖ್ಯ. ಆರೋಗ್ಯ ಚೆನ್ನಾಗಿದ್ದರೆ ಮನುಷ್ಯ ಏನಾದರು ಸಾಧಿಸುತ್ತಾನೆ.
ನಿಯಮಿತ ಆಹಾರದ ಸೇವನೆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸುತ್ತೂರು ಮಠದ ಶ್ರೀಗಳಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ನಂಜನಗೂಡು ಪಟ್ಟಣದ ಜೆ ಎಸ್ ಎಸ್ ಮಂಗಳ ಮಂಟಪದಲ್ಲಿ ರೋಟರಿ ಕ್ಲಬ್, ಮತ್ತು ಜೆಎಸ್‍ಎಸ್ ಆಸ್ಪತ್ರೆ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅನುವಂಶಿಯಿಂದ ಬರುವ ಕಾಯಿಲೆಗಳನ್ನು ತಾವೇ ಊಟೋಪಚಾರಗಳಿಂದ ಸರಿಪಡಿಸಿಕೊಳ್ಳಬೇಕು.
ಆರೋಗ್ಯ ತಪಾಸಣೆ ಯನ್ನು ವರ್ಷಕ್ಕೊಮ್ಮೆಯಾದರು ಮಾಡಿಸಿಕೊಳ್ಳಬೇಕು.
ಕಾಲ ಕಾಲಕ್ಕೆ ತಪಾಸಣೆ ಮಾಡಿಕೊಂಡು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಸ್ಥಳೀಯ ಜನರಿಗೆ ಉಚಿತವಾಗಿ ತಪಾಸನೆ ಮಾಡಿ ಔಷಧಿ ಕೊಡಲಾಗುವುದು.ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚುಂಚನಹಳ್ಳಿ ಮಠದ ಶ್ರೀ ಚನ್ನಬಸವಸ್ವಾಮೀಜಿ, ತಹಸಿದ್ಧರ್ ಶಿವಕುಮಾರ್ ಕಾಸ್ನೂರ್, ರೋಟರಿ ಸಂಸ್ಥೆಯ ಅಧ್ಯಕ್ಷ, ರಮೇಶ್, ಜೆಎಸ್‍ಎಸ್ ಆಸ್ಪತ್ರೆಯ ಉಪ ಅಧೀಕ್ಷಕರಾದ ಡಾ. ನವೀನ್, ನಿರಂಜನ್ , ಗುತ್ತಿಗೆದಾರ ಪದ್ಮನಾಭರಾವ್, ರೋಟರಿ ಕಾರ್ಯದರ್ಶಿ ಪ್ರಕಾಶ್ ಚಂದ್ ಜೈನ್, ಸಹಾಯ ಗೌರ್ನರ್ ಕೆ ಜಿ ರಾಮಚಂದ್ರ, ಡಾ.ಶ್ರೀಕಾಂತ್, ಔಷದಿ ವಿತರಕರ ಸಂಘದ ಅಧ್ಯಕ್ಷ ಸುರೇಂದ್ರ ಆಸ್ಪತ್ರೆ ಎಚ್‍ಆರ್ ಮಲ್ಲಿಕಾರ್ಜುನ, ಇನ್ನರ್ ವೀಲ್ ಅಧ್ಯಕ್ಷ ಚೇತನ ಸೇರಿದಂತೆ ಹಲವರು ಭಾಗವಹಿಸಿದ್ದರು.