ಅಕ್ಷರ ಸಂಶೋಧನೆ ಜಗತ್ತಿನ ಮಹಾ ಸಂಶೋಧನೆ: ತಿಲಕ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.08: ಅಕ್ಷರ ಸಂಶೊಧನೆಯೇ ಜಗತ್ತಿನ ಅತ್ಯದ್ಬುತ ಮಹಾ ಸಂಶೋಧನೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಶಾಲೆಗೆ ದಾಖಲಾದ ಐದು ವರ್ಷದ ಪುಟಾಣಿ ಮಕ್ಕಳ ಅಕ್ಷರ ಅಭ್ಯಾಸದ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಸ್ಪರರ ಸಂಭಾಷಣೆಗೆ ಮಾತು ಮುಖ್ಯವಾದರೆ ನಮ್ಮ ಮನಸ್ಸಿನ ಭಾವನೆಗಳನ್ನು ದಾಖಲಿಸಲು ಅಕ್ಷರ ಬಹುಮುಖ್ಯ. ಮಾನವ ನಾಗರೀಕತೆ ಉತ್ತುಂಗ ಸ್ಥಿತಿ ತಲುಪಲು ಅಕ್ಷರ ಜ್ಞಾನವೇ ಪ್ರಧಾನವಾಗಿದೆ. ಲಿಪಿ ಸಂಶೋಧನೆ ಇಲ್ಲದಿದ್ದರೆ ಜಗತ್ತಿನ ಮಹಾಕಾವ್ಯಗಳು ದಾಖಲಿಸಲ್ಪಡುತ್ತಿರಲಿಲ್ಲ. ಮಾನವನ ಬೌದ್ದಿಕ ಜ್ಞಾನ ವಿಕಸನಗೊಳ್ಳುತ್ತಿರಲಿಲ್ಲ. ಜಗತ್ತಿನ ಎಲ್ಲಾ ಪ್ರಾಣಿಗಳಲ್ಲಿಯೂ ಹಸಿವು, ನಿದ್ರೆ, ಭೇಟ, ಕೂಟಗಳು ಸಮನಾಗಿವೆ. ಆದರೆ ಅಕ್ಷರ ಜ್ಞಾನದಿಂದಲೇ ಮಾನವ ಇತರೆಲ್ಲಾ ಜೀವಿಗಳಿಗಿಂತ ಶ್ರೇಷ್ಠನಾಗಿದ್ದಾನೆ ಎಂದ ಹರಿಚರಣತಿಲಕ್ ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ಭವಿಷ್ಯ ರೂಪಿಸುವ ಆಸೆ ಎಲ್ಲ ಪಾಲಕರಿಗಿರುತ್ತದೆ. ಮಕ್ಕಳ ಅಕ್ಷರ ಕಲಿಕೆಯ ಜೊತೆ ಜೊತೆಯಲ್ಲಿಯೇ ಪೆÇೀಷಕರ ಕನಸುಗಳು ಬೆಳೆಯುತ್ತಿರುತ್ತವೆ. ಅದಕ್ಕೆ ಪೂರಕವಾಗಿ ಆಧುನಿಕ ಜಗತ್ತಿನ ಪ್ರವೇಶಕ್ಕೆ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಅಣಿಗೊಳಿಸುವುದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದೆ. ಅದಕ್ಕಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡರು ತಮ್ಮ ಸಂಸ್ಥೆಯ ಆವರಣದಲ್ಲಿ ಪೆÇೀಷಕರ ಜೊತೆಗೂಡಿ ವಿದ್ಯೆಯ ಅಧಿದೇವತೆಗಳಾದ ಗಣಪತಿ ಮತ್ತು ಸರಸ್ವತಿಯರನ್ನು ಆರಾಧಿಸುವ ಮೂಲಕ ಪರಂಪರಾಗತ ಸಂಸ್ಕಾರವನ್ನು ಎಳೆಯ ವಯಸ್ಸಿನಲ್ಲಿಯೇ ತುಂಬುವ ಕೆಲಸವನ್ನು ಮಾಡಿದ್ದಾರೆ.
ಮಕ್ಕಳಿಗೆ ಅಕ್ಷರ ಕಲಿಕೆಗೆ ನೀಡುವಷ್ಟೇ ಪ್ರಾಧಾನ್ಯತೆಯನ್ನು ಪೆÇೀಷಕರು ಸಂಸ್ಕಾರ ಕಲಿಕೆಗೂ ನೀಡಬೇಕು. ಮಕ್ಕಳಿಗೆ ಜ್ಞಾನವೇ ಸಂಪತ್ತು. ಆದರೆ ನಾವು ಪಡೆದ ಜ್ಞಾನ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಕಾರಣವಾಗಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸದ ತಂದೆ-ತಾಯಂದಿರು ಮಕ್ಕಳ ವೈರಿಗಳು. ಹುಟ್ಟಿದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಮಕ್ಕಳು ಶಾಲೆಯಲ್ಲಿ ಗುರುಗಳು ಹೇಳಿದ್ದನ್ನು ಕೇಳುವುದಕ್ಕಿಂತ ಹೆಚ್ಚಾಗಿ ಪೆÇೀಷಕರನ್ನು ಅನುಕರಣೆ ಮಾಡಿ ಕಲಿಯುವುದು ಹೆಚ್ಚು. ಹಾಗಾಗಿ ಪ್ರತಿಯೊಬ್ಬ ಪೆÇೀಷಕರು ಮಕ್ಕಳ ಮುಂದೆ ಸಂಸ್ಕಾರಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ:ಜೆ.ಎನ್.ರಾಮಕೃಷ್ಣೇಗೌಡ ಮಂಜುನಾಥ್ ಶಾಸ್ತ್ರಿ ಸೇರಿದಂತೆ ಸಂಸ್ಥೆಯ ಪ್ರಾಂಶುಪಾಲರು-ಶಿಕ್ಷಕರು ಹಾಗೂ ಮಕ್ಕಳ ಪೆÇೀಷಕರು ಸೇರಿದಂತೆ ಹಲವರಿದ್ದರು.