ಶ್ರೀನಿವಾಸ್ ಗೆಲುವಿಗೆ ಅತಿಥಿ ಉಪನ್ಯಾಸಕರ ಅಭಿನಂದನೆ
ಕೋಲಾರ,ಜೂ.೮- ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಡಿಟಿ ಶ್ರೀನಿವಾಸ್ ರವರ ಗೆಲುವನ್ನು ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ರಾಜ್ಯ ಸಮಿತಿ ಅಭಿನಂದಿಸಿದೆ.
ಈ ಹಿಂದೆ ಆಯ್ಕೆಯಾಗಿದ್ದ ವೈ.ಎ.ನಾರಾಯಣಸ್ವಾಮಿಯವರು ಅಹಂ ಅವರನ್ನ ಸೋಲುವಂತೆ ಮಾಡಿದೆ ಎಂದಿಗೂ ಕೂಡ ನಮ್ಮಗಳ ಬಗ್ಗೆ ಚಕಾರ ಎತ್ತಲಿಲ್ಲ ನಮ್ಮಗಳ ಸಂಬಳ ಹೆಚ್ಚಿಸುವ ವಿಚಾರದಲ್ಲಿ ಕಾಯಂಮಾತಿ ವಿಚಾರದಲ್ಲಿ ಸದನದಲ್ಲಿ ಧ್ವನಿ ಎತ್ತಲಿಲ್ಲ. ಈ ಬಗ್ಗೆ ನಮ್ಮ ಒಕ್ಕೂಟವು ಒಂದು ತಿಂಗಳು ೨೦ ದಿವಸ ನೀರಾವರಿ ಹೋರಾಟ ವೇದಿಕೆಯಲ್ಲಿ ಮುಷ್ಕರ ಹೂಡಿದಾಗ ಕನಿಷ್ಠ ವೇದಿಕೆ ಬಳಿ ಬಂದು ನಮಗೆ ಸಾಂತ್ವಾನ ಹೇಳಲಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ದಾವಣಗೆರೆ ಚಿತ್ರದುರ್ಗ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳ ನಮ್ಮ ಒಕ್ಕೂಟದ ಸದಸ್ಯರು ಬಹಿರಂಗವಾಗಿ ಡಿಟಿ ಶ್ರೀನಿವಾಸ ಅವರನ್ನು ಬೆಂಬಲಿಸಿತ್ತು. ಇತರೆ ಶಿಕ್ಷಕರು ಮತ್ತು ಉಪನ್ಯಾಸಕ ಮಿತ್ರರು ಸಾವಿರಾರು ಮಂದಿ ಬೆಂಬಲದಿಂದ ಇಂದು ಡಿಟಿ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ಇವರು ಸಹ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ವಿಧಾನಸೌಧದಲ್ಲಿ ಸಮಗ್ರ ಶಿಕ್ಷಕರ ಬಗ್ಗೆ ಮತ್ತು ರಾಜ್ಯದ ಅತಿಥಿ ಉಪನ್ಯಾಸಕರು ಹೋರಾಟ ಮಾಡುತ್ತಿರುವ ಕಾಯಂಮಾತಿಗೆ ಬೆಂಬಲ ನೀಡಬೇಕೆಂದು ಸಮಿತಿ ವಿನಂತಿಸಿದೆ.